ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನರ್ಜನ್ಮ

By Staff
|
Google Oneindia Kannada News
ಕನಸುಗಳೇ ಕಾಡಬೇಡಿ ನನ್ನ
ಬಯಕೆಗಳೇ ಬಂಧಿಸಬೇಡಿ ನನ್ನ
ಸ್ವಚ್ಛಂದ ಹಕ್ಕಿಯಂತೆ ಹಾರಬೇಕು ನಾನು
ಮುಗ್ಧ ಮನಸಿನ ಮಗುವಿನಂತೆ ನಗಬೇಕು ನಾನು

ಮಾತುಗಳೆ ಮರೆಯಾಗಿ ಮೌನದ ಹಿಂದೆ
ಯೋಚನೆಗಳೆ ಹಾರಿ ಗಾಳಿಗಿಂತ ಮುಂದೆ
ಅಮ್ಮನ ಮಡಿಲಲ್ಲಿ ಮತ್ತೆ ಮಗುವಾಗಬೇಕು ನಾನು
ಅಪ್ಪನ ತೊಡೆಯೇರಿ ಮತ್ತೆ ಕಥೆ ಕೇಳಬೇಕು ನಾನು

ಕರಿಮೋಡಗಳೆ ಕರಗಿ ಮಳೆಯಾಗಿ ಹೋಗಿ
ಕದಡುವ ನೆನಪುಗಳೆ ಮಾಸಿ ಮಾಯವಾಗಿ
ಅರಳುವ ಮೊಗ್ಗನೋಡಿ ಅರಳಬೇಕು ನಾನು
ಹರಿಯುವ ನೀರ ನೋಡಿ ಕುಣಿಯಬೇಕು ನಾನು

ಕತ್ತಲೆ ನೀ ಕರಗಿಹೋಗು ಹೊಸಬೆಳಕಿನೊಳಗೆ
ಭಯವೆ ನೀ ತೊಲಗು ಮನದಿಂದ ಹೊರಗೆ
ಈ ದಿನ ಹೊಸ ದಿನ ಪಡೆದೆ ನಾ ಹೊಸತನ
ಎಲ್ಲ ಹೊಸತಾಗಿ ಬರಲೆನಗೆ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X