ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌನದ ಮಾತುಗಳು

By Staff
|
Google Oneindia Kannada News


ಇದು ಕವಯತ್ರಿಯರ ಕಾಲ. ಕನ್ನಡ ಕಾವ್ಯಲೋಕದಲ್ಲೊಮ್ಮೆ ಕನ್ನಡಕ ತೆಗೆದಿಟ್ಟು ಇಣುಕಿ ನೋಡಿ; ಅಲ್ಲಿ ಕವಯತ್ರಿಯರದೇ ಮೇಲುಗೈ. ಒಬ್ಬರಿಗಿಂತ ಒಬ್ಬರು ಮಿಗಿಲೆನ್ನುವಂತೆ, ಪುರುಷ ಕವಿಗಳಿಗೂ ಮಿಗಿಲೆನ್ನುವಂತೆ, ನಮ್ಮ ಕವಯತ್ರಿಯರು ಕವನ ಹೊಸೆಯುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಮೆಲುಉಲಿಯ ಕವಯತ್ರಿ ಅಮೃತ ಮೆಹೆಂದಳೆ ([email protected]). ಅವರ ಚೊಚ್ಚಿಲ ಕವನ ಸಂಕಲನ ‘’ ಮೊನ್ನೆ, ನವೆಂಬರ್‌ 22 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬಿಡಿ ಕವನಗಳ ಮೂಲಕ ಈವರೆಗೆ ಪರಿಚಿತರಿದ್ದ ಅಮೃತ ಅವರ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಓದುವ ಅವಕಾಶ. ‘’ ಸಂಕಲನದಿಂದ ಆಯ್ದ ಎರಡು ಕವನಗಳು ಇಲ್ಲಿವೆ. ಓದಿ, ಅಭಿಪ್ರಾಯ ತಿಳಿಸಿ.Amrutha Mehendale

  • ಅಮೃತ ಮೆಹೆಂದಳೆ
ಕವನ ಅಮ್ಮನಾಗಿತ್ತು

ಕವನ
ಅಮ್ಮನಾಗಿತ್ತು
ನನ್ನ ಬಾಳ
ಸೆಲೆಯಾಗಿತ್ತು ,
ನೋವ
ತನ್ನ ತೆಕ್ಕೆಗೆ
ಅಪ್ಪಿಕೊಂಡು
ನನ್ನ
ತನ್ನ ಮಡಿಲಲ್ಲಿ
ಬಚ್ಚಿಟ್ಟುಕೊಂಡು
ಮುದ್ದುಗರೆದಿತ್ತು.

ನೀ ಬಂದ
ಮೇಲೆ ಗೆಳೆಯ
ನನ್ನ ನಿನಗೆ
ಧಾರೆಯೆರೆದಿತ್ತು ,
ಕಂಬನಿ
ಮರೆತು ನಕ್ಕಿತ್ತು,

ಕಂಡು ನಲಿದಿತ್ತು
ನನ್ನ ಸುಖವ,
ಹಾರೈಸಿ ಹರಸಿತ್ತು ,
ನಿಶ್ಚಿಂತೆಯಿಂದ
ದೂರ ಉಳಿಯಿತು
ಅಮ್ಮನಾಗಿತ್ತು.

***

ಕಾಲ

ಆಗಾಗ
ಬೀಸುವ
ತಂಗಾಳಿಯ
ಸುಖಕ್ಕಾಗೇ
ಉರಿಯಬೇಕು
ಬೇಸಿಗೆ.

ಕನಸು
ನೆನಪುಗಳ
ನಡುವೆ
ತುಂಬಲು
ಖಾಲಿ ಹಾಳೆ
ಸುರಿಯುತಿರಲಿ
ಪ್ರೀತಿ ಮಳೆ

ಪ್ರೇಮ ಕಾಮ
ವಿರಹದುರಿಯ
ತಣಿಸಲು
ನಡುಗಿಸಲಿ
ಚುಮು ಚುಮು
ಚಳಿ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X