ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
37
ಗೀತದಲ್ಲಿ ಗುರುಲಿಂಗ, ನೀತಿಯಲ್ಲಿ ನಿಜಲಿಂಗ
ಭಕ್ತಿಯಲ್ಲಿ ಭಾವಲಿಂಗ, ಪ್ರೀತಿಯಲ್ಲಿ ಪ್ರಾಣಲಿಂಗ
ಶಕ್ತಿ-ಶಿವ ರೂಪನೇ ಚನ್ನಬಸವೇಶ
ಮನದಲ್ಲಿ ನೀನಿರಲು ನಾನೇ ಮಹಾಲಿಂಗ

38
ಜಗಕೆಲ್ಲ ಹಿರಿದಾದ ಹಿಮಗಿರಿಗೊಂದು ಸ್ಥಾನ
ಕಿರಿಯ ಹಳ್ಳದಲ್ಲಿ ಬೆಣಚು ಕಲ್ಲಿಗೊಂದು ಸ್ಥಾನ
ಬೆಟ್ಟದ ಮೇಲೆ ನೂರಡಿ ಎತ್ತರದ ದೇವತರುವಿಗೆ ಸ್ಥಾನ
ಬಟ್ಟ ಬಯಲಿನಲ್ಲಿ ಬೆರಳೆತ್ತರದ ಹುಲ್ಲಿಗೆ ಸ್ಥಾನ
ಘನವಾದ ಗಜರಾಜನಿಗೆ ನಿಬಿಡ ಕಾನನದಲ್ಲಿ ಸ್ಥಾನ
ಕಣ ಸಕ್ಕರೆಯೆ ಭಾರವೆನಿಸುವ ಚಿಕ್ಕ ಇರುವೆಗೊಂದು ಸ್ಥಾನ
ಕೋಟಿ ನಕ್ಷತ್ರಗಳ ಈ ವಿಶಾಲ ವಿಶ್ವದಲ್ಲಿ
ಅನಂತ ಕೋಟಿ ಜೀವ ತಿಂತಿಣಿಗಳ ಮಧ್ಯದಲ್ಲಿ
ನನಗೊಂದು ಚಿಕ್ಕ ಸ್ಥಾನ ನಿನ್ನ ದಯದಿಂದ
ಅದೆ ಸಾಕು ನನಗಿಂದು ವಿಶ್ವೇಶ್ವರ
ವಿಮಲೇಶ ಶ್ರೀ ಚನ್ನಬಸವೇಶ್ವರ

39
ಬಾನಿನಲ್ಲಿಯು ನೀನೆ ಭೂಮಿಯಲ್ಲಿಯು ನೀನೆ
ಭುವಿ ಬಾನುಗಳ ನಡುವೆ ಮಳೆಬಿಲ್ಲು ನೀನೆ
ಅಡವಿಯಲ್ಲಿಯು ನೀನೆ ತೋಟದಲ್ಲಿಯು ನೀನೆ
ಗಿಡಮರದಿ ಅರಳುವ ಹೂವೆಲ್ಲ ನೀನೆ
ಗಾನದಲ್ಲಿಯು ನೀನೆ ತಾನದಲ್ಲಿಯು ನೀನೆ
ವಿಶ್ವಸೃಷ್ಟಿಯ ಮೊದಲ ಓಂಕಾರ ನೀನೆ
ಎಲ್ಲೆಲ್ಲಿಯೂ ನೀನೆ ಚನ್ನಬಸವೇಶ
ಅಣು ಅಣುವಿನಲಿ ಬಾಳ ಬೆಳಗುತಿಹೆಯಯ್ಯ

40
ಭಕ್ತಿಯೇ ಭಾವಲಿಂಗ ಶಕ್ತಿಯೇ ಶಿವಲಿಂಗ
ಪ್ರೀತಿಯೇ ಪರಮಲಿಂಗ ಜೀವನವೆ ಜ್ಯೋತಿಲಿಂಗ
ಶ್ರೀ ಚನ್ನಬಸವೇಶ ನೀನೆನ್ನ ಮನದೊಳಿರಲು
ಮನವೇ ಮಹಾಲಿಂಗ, ಮನವೇ ಮಹಾಲಿಂಗ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X