ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Oneindia Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
5
ಹಾಡುವ ಸ್ವರವೆಲ್ಲಿ ಹೋಯಿತು ?
ನೋಡುವ ಕಣ್ಣೆಲ್ಲಿ ಹೋಯಿತು ?
ಬೇಡುವ ಬಾಯ್‌ ಎಲ್ಲಿ ಹೋಯಿತು ?
ನಲಿದಾಡುವ ಒಲವೆಲ್ಲಿ ಹೋಯಿತು ?
ಕಾಣದ ಕೇಳದ ತಿಳಿಯಲರಿಯದ ಠಾವು,
ಒಮ್ಮೆ ಇದ್ದುದು ಈಗ ಇಲ್ಲ ಎಂದರೆ ಸಾವು,
ಬೇಡದಿದ್ದರೂ ನೀನು ಕೊಟ್ಟೆಯಲ್ಲವೆ ನೋವು?
ತಳಮಳಿಸುತಿದೆ ಇಳೆಯು.
ತಿಳಿ ಹೇಳು, ತಿಳಿಸೇಳು,
ವಿಮಲೇಶ ಶ್ರೀ ಚನ್ನಬಸವೇಶ್ವರ.

6
ಹುಟ್ಟುವ ಕಾಲ, ಮಗುವು ಅಳುತಿರುವಾಗ
ಜಗವು ನಗುತಿರಬೇಕು ;
ಸಾಯುವ ಕಾಲ, ಜನರು ಅಳುತಿರುವಾಗ
ಮಾನವನು ನಗುತಿರಬೇಕು ;
ಮಗು ಬೆಳೆದು ಮಾನವನಾಗಿ ಬಾಳಿದ್ದಕ್ಕೆ
ಇಷ್ಟು ಅಂತರವಿರಬೇಕಯ್ಯ,
ವಿಮಲೇಶ ಶ್ರೀ ಚನ್ನಬಸವೇಶ್ವರ.

7
ಹಕ್ಕಿಗಿಂತಲು ಮೇಲೆ ಹಾರಿದವರುಂಟು
ಚಿಕ್ಕೆ ಚಂದ್ರರ ಮೆಟ್ಟಿ ಮರಳಿದವರುಂಟು
ಕಡಲ ಇಕ್ಕೆಲದಿಂದ ಮಾತಾಡಿದವರುಂಟು
ರೊಕ್ಕಕ್ಕೆ ಎಲ್ಲವನು ಕೊಂಡವರು ಉಂಟು
ಸಿಕ್ಕಿಲ್ಲ ಮಾತ್ರವೀ ವಿಜ್ಞಾನಿಗಳ ಕೈಗೆ
ಸಾವು ತಡೆಯುವ ಯುಕ್ತಿ , ಪ್ರೇಮ, ಭಕ್ತಿ
ಹುಡುಕಾಡುತಿಹರೆಲ್ಲ ಮೀರಿ ಶಕ್ತಿ
ಚನ್ನಬಸವೇಶ್ವರನು ಕೊಡಲೆಂದೆ ಮುಕ್ತಿ !

8
ಹೂವಿಗೆ ನೀರುಣಿಸಲು ಚೆಲುವ ಪೂಜಿಸಿದಂತೆ
ನನ್ನ ನೋಟಕೆ ಚೆಲುವೆ ದೇವರಯ್ಯಾ
ಜೀವಿಯಾಬ್ಬನ ಮನವ ಸಂತೋಷಗೊಳಿಸಿದರೆ
ನನ್ನ ಬಾಳಿಗೆ ಒಲವೆ ದೇವರಯ್ಯ
ವಿಮಲೇಶ ಶ್ರೀ ಚನ್ನಬಸವೇಶ್ವರ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X