ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಸ್ಕಾರ ಸಾರ್‌ ಅಂತೀನಿ

By ಆರ್‌. ಎಸ್‌. ಹೀರೇಮಠ್‌
|
Google Oneindia Kannada News

ಸಿಲಿಕಾನ್‌ ವ್ಯಾಲಿ ವಚನಗಳು

ತಂದೆ ನೀನು, ತಾಯಿ ನೀನು
ಬಂಧು ನೀನು, ಬಳಗ ನೀನು
ನೀನಲ್ಲದೆ ನನಗೆ ಮತ್ತಾರು ಇಲ್ಲವಯ್ಯ
ಬೆಂಗಳೂರು ಗಣಕ ಯಂತ್ರಯ್ಯ

ನೀರಿಗೆ ನೈದಿಲೆಯೇ ಶೃಂಗಾರ
ಸಮುದ್ರಕೆ ತೆರೆಯೆ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕೆ ಚಂದ್ರಮನೆ ಶೃಂಗಾರ
ನಮ್ಮ ಬೆಂಗಳೂರು ಐಟಿ ಹುಡುಗಿಯರಿಗೆ ಈ-ಮೇಯ್ಲ್‌ ಗಳೇ ಶೃಂಗಾರ...

ಪ್ರೊಜೆಕ್ಟ್‌ ಡೆಡ್‌ ಲೈನ್‌ ಎಕ್ಸ್‌ಟೆಂಡ್‌ ಮಾಡದ ಪಿಯಮ್ಮೂ
ಹಗಲೆಲ್ಲಾ ಕಾಡುವ ಕ್ಲೈಂಟೂ
ಈ-ಮೇಯ್ಲಿಗೆ ರಿಪ್ಲೈ ಮಾಡದ ಗೆಳೆಯರು ಶುದ್ಧ ವೈರಿಗಳು ಸರ್ವಜ್ಞ

ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು, ಐಟಿ ಫೀಲ್ಡು
ಎಲ್ಲರಿಗಲ್ಲ ಸರ್ವಜ್ಞ

ಈ ಮೇಯ್ಲ್‌ಗಳು ಸೆಂಡ್‌ ರಿಸೀವ್‌ ಮಾಡಿದರೆ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯದಲ್ಲಿ ಸುತ್ತಿ ಬಂದಂತೆ ಸರ್ವಜ್ಞ

ಬೆಂಗಳೂರಿನ ಐಟಿ ಕಂಪೆನಿಯಲ್ಲಿ , ಸಾಫ್ಟ್‌ವೇರ್‌ ಇಂಜಿನಿಯರಾಗಿ ಕೆಲಸವಿರಲು
ಕುಡಿದು ತಿಂದು ಮಜಾ ಮಾಡುವಷ್ಟು ಸಂಬಳವಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ಕುಡಿದದ್ದು ತನಗೆ, ಕುಡಿಸಿದ್ದು ಪರರಿಗೆ
ಕುಡಿಸಿದ್ದು ಕೆಡಿಸಿತೆನಬೇಡ
ಕುಡಿದವರು, ಒಮ್ಮೆ ನಿನಗೂ ಕುಡಿಸುವರು ಸರ್ವಜ್ಞ

ಸಾಫ್ಟ್‌ವೇರ್‌ ಇಂಜಿನಿಯರ್‌ ಎನ್ನುವವನು ಗರ್ವದಿಂದಾದವನೆ...?
ಸರ್ವರೊಳಗೊಂದಾಗು ಪ್ರೋಗ್ರಾಂ ಕಲಿತು
ಸಾಫ್ಟ್‌ವೇರ್‌ ಪರ್ವತವೇ ಆದ ಸರ್ವಜ್ಞ

ಕೋಡಿಂಗ್‌ ಮಾಡಿದರೆ ಮುತ್ತಿನ ಹಾರದಂತಿರಬೇಕು
ಕೋಡಿಂಗ್‌ ಮಾಡಿದರೆ, ಪ್ರೊಜೆಕ್ಟ್‌ ಬಗ್‌ ಫ್ರೀ ಇರಬೇಕು
ಕೋಡಿಂಗ್‌ ಮಾಡಿದರೆ ಕ್ಲೈಂಟ್‌ ಮೆಚ್ಚಿ ಅಹುದಹುದೆನಬೇಕು
ಹೀಗೆ ಕೋಡಿಂಗ್‌ ಮಾಡದಿದ್ದರೆ ಮೆಚ್ಚ ನಮ್ಮ ಬಾಗಲಕೋಟೆ ಗಣಕ ಯಂತ್ರಯ್ಯ...

ಆಡದೆಲೆ ಕೋಡಿಂಗ್‌ ಮಾಡುವವನು ರೂಢಿಯಾಳಗುತ್ತಮನು
ಆಡಿ ಕೋಡಿಂಗ್‌ ಮಾಡುವವನು ಮಧ್ಯಮನು
ಅಧಮ ತಾನಾಡಿ ಕೋಡಿಂಗ್‌ ಮಾಡದವನು ಸರ್ವಜ್ಞ

English summary
R.S. Hiremaths silicon valley vachanagalu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X