ಯುದ್ಧ ಆದ ಮೇಲೆ ಗೆದ್ದ ಕಡೆಯವರುನಾನು ಹೀಗೆ ಗುದ್ದಿದೆ, ಹಾಗೆ ಹೊಡೆದು ಕೆಡವಿದೆ ;ಹೇಗೆ ಮುನ್ನುಗ್ಗುವುದು ತಿಳಿ ಹೇಳಿ ಧೈರ್ಯ ತಗ್ಗಿದವರನ್ನೂಎಬ್ಬಿಸಿ, ಉಬ್ಬಿಸಿ, ಕಿಚ್ಚು ಹಬ್ಬಿಸಿ, ಲಡಾಯಿಯಲ್ಲಿಎದುರಾದುದನ್ನೆಷ್ಟು ಚುಚ್ಚಿ , ನುಚ್ಚಾಗಿಸಿದೆ - ಎಂದೆಲ್ಲಾ ಬಡಾಯಿಕೊಚ್ಚಿ ಕೊಳ್ಳುವುದು ಲಾಗಾಯ್ತಿನಿಂದಲೂ ಇದ್ದದ್ದೇ.ಈ ಹುಚ್ಚಿಗೆ ಮದ್ದಿಲ್ಲ ; ಮುಚ್ಚಿದ್ದಷ್ಟೂ ಬಿಳಿ ಸುಳ್ಳಿನನವಿರು ಪೊರೆ ನೀರುಳ್ಳಿಗೆ ಅಂದ, ಮೂಗಿಗೂ ಆನಂದ.ಜೇನು ಕಡಿದ ಕೈ ನೆಕ್ಕಲು ಬಿಟ್ಟರೇನೇ ಚಂದ.ಗೊತ್ತ , ಸೋತಿದ್ದರೆ ಇತ್ತಿವರ ಬತ್ತಳಿಕೆಯಲ್ಲಿ ಕುತ್ತುಗಳಿಗೆಅವರಿವರನ್ನೇ ಗುರಿಯಾಗಿಸಲು ಕುರಿತ ನಂಜು ಮುತ್ತುಗಳು.ಹೊಡೆದಾಟವಲ್ಲವೆ ? ಪೆಟ್ಟಾಗಿರಬಹುದು ಎಡವಟ್ಟು ಆಗಿರಬಹುದು . ಅದೆಲ್ಲ ಹೆತ್ತ ಮೇಲೆ ಮರೆವ ಹೆರಿಗೆಯ ನೋವು.ಮತ್ತೆ , ನಿಮ್ಮ ಸುತ್ತಲೂ ಇದ್ದಾರುಕಾದಲು ಬಾರದೆ ಕಾಲುಳುಕಿನ ನೆಪ ಬೆಳೆದು, ಉಳಿದು, ಆಸ್ಪತ್ರೆಯ ಹಾಸಿಗೆಯಿಂದಲೇ ಹರಸಿದ ಸಮರ ವೀರಾಗ್ರಣಿಗಳು.ಬಿಡಿ ಬಿಡಿ, ನಿಮಗೇಕೆ ಅವರಿವರ ಪರಿವೆ ;ಮಾಲೆ ಹಾಕಿದ ಯಶೋಲಕ್ಷ್ಮಿಯ ಹೊತ್ತು ಹೊರಡಿ -ಹನಿಮೂನಿಗೆ.ಅವರು ಹೋದರು !

ಯುದ್ಧ ಆದ ಮೇಲೆ ಗೆದ್ದ ಕಡೆಯವರು
ನಾನು ಹೀಗೆ ಗುದ್ದಿದೆ, ಹಾಗೆ ಹೊಡೆದು ಕೆಡವಿದೆ ;
ಹೇಗೆ ಮುನ್ನುಗ್ಗುವುದು ತಿಳಿ ಹೇಳಿ ಧೈರ್ಯ ತಗ್ಗಿದವರನ್ನೂ
ಎಬ್ಬಿಸಿ, ಉಬ್ಬಿಸಿ, ಕಿಚ್ಚು ಹಬ್ಬಿಸಿ, ಲಡಾಯಿಯಲ್ಲಿ
ಎದುರಾದುದನ್ನೆಷ್ಟು ಚುಚ್ಚಿ , ನುಚ್ಚಾಗಿಸಿದೆ - ಎಂದೆಲ್ಲಾ ಬಡಾಯಿ
ಕೊಚ್ಚಿ ಕೊಳ್ಳುವುದು ಲಾಗಾಯ್ತಿನಿಂದಲೂ ಇದ್ದದ್ದೇ.
ಈ ಹುಚ್ಚಿಗೆ ಮದ್ದಿಲ್ಲ ; ಮುಚ್ಚಿದ್ದಷ್ಟೂ ಬಿಳಿ ಸುಳ್ಳಿನ
ನವಿರು ಪೊರೆ ನೀರುಳ್ಳಿಗೆ ಅಂದ, ಮೂಗಿಗೂ ಆನಂದ.
ಜೇನು ಕಡಿದ ಕೈ ನೆಕ್ಕಲು ಬಿಟ್ಟರೇನೇ ಚಂದ.
ಗೊತ್ತ , ಸೋತಿದ್ದರೆ ಇತ್ತಿವರ ಬತ್ತಳಿಕೆಯಲ್ಲಿ ಕುತ್ತುಗಳಿಗೆ
ಅವರಿವರನ್ನೇ ಗುರಿಯಾಗಿಸಲು ಕುರಿತ ನಂಜು ಮುತ್ತುಗಳು.
ಹೊಡೆದಾಟವಲ್ಲವೆ ? ಪೆಟ್ಟಾಗಿರಬಹುದು ಎಡವಟ್ಟು
ಆಗಿರಬಹುದು .

ಅದೆಲ್ಲ ಹೆತ್ತ ಮೇಲೆ ಮರೆವ ಹೆರಿಗೆಯ ನೋವು.
ಮತ್ತೆ , ನಿಮ್ಮ ಸುತ್ತಲೂ ಇದ್ದಾರು
ಕಾದಲು ಬಾರದೆ ಕಾಲುಳುಕಿನ ನೆಪ ಬೆಳೆದು, ಉಳಿದು,
ಆಸ್ಪತ್ರೆಯ ಹಾಸಿಗೆಯಿಂದಲೇ ಹರಸಿದ ಸಮರ ವೀರಾಗ್ರಣಿಗಳು.

ಬಿಡಿ ಬಿಡಿ, ನಿಮಗೇಕೆ ಅವರಿವರ ಪರಿವೆ ;
ಮಾಲೆ ಹಾಕಿದ ಯಶೋಲಕ್ಷ್ಮಿಯ ಹೊತ್ತು ಹೊರಡಿ -
ಹನಿಮೂನಿಗೆ.

ಅವರು ಹೋದರು !

ಬಹಳ ಜನ ತೆರಳುವರಲ್ಲ -
ಹೋದದ್ದೆ ತಿಳಿಯುವುದಿಲ್ಲ !
ಇದ್ದಾಗಲೂ ಅಷ್ಟೆ , ಇಲ್ಲದಿದ್ದಾಗಲೂ ಅಷ್ಟೆ .
ಲಾಭ- ಕಷ್ಟ- ನಷ್ಟದ್ದು ಏಳದ ಪ್ರಶ್ನೆ
ಧನ- ಋಣದ ಪರಿಣಾಮ ಪೂರ್ಣ ಸೊನ್ನೆ !

ಕೆಲವು ಜನ ಹೋದಾಗ

ಮೋಡ ಚದುರಿದ ಹಾಗೆ, ಬೆಳ್ಳಿ ಮೂಡಿದ ಹಾಗೆ ;
ಇಷ್ಟು ದಿನ ಬರಡಾಗಿ ಕುಳಿತ ಮೂಲೆಯ ಕೊರಡ
ಕುಡಿ ಚಿಗುರಿ, ತೆನೆ ಹೂವು ಮತ್ತೆ ಅರಳಿದ ರೀತಿ
ಬತ್ತಿದ್ದ ಬಾವಿಯಲಿ
ಮತ್ತೆ ಸೆಲೆಯಾಡೆದ ಪರಿ ;
ನೂಲೇಣಿ ಇಳಿಬಿಟ್ಟು , ಬಿದ್ದ ಕಮರಿ !

ಇನ್ನು ಕೆಲವೇ ಜನರ
ಬೀಳ್ಕೊಟ್ಟು ಅಗಲಿದ ಮೇಲೆ
ಹೊಗೆ ಕವಿದು, ಧಗೆ ಎದ್ದು ಕಣ್ಣು ಮುಚ್ಚಿಸಿದ ಬಗೆ ;
ತಳ ಬಿರಿದು ಬಳ್ಳಿಯಾಸರೆ ಕುಸಿಯುವ ಭಾಸ,
ನಾಟಕದ ನಡುವೆ ತೆರೆ- ಮರೆ ಕಳಚಿದಾಭಾಸ .
ಶಕ್ತಿಯ ಬುಗ್ಗೆ ಉಡುಗಿ ಊನವಾದಂತೆ ಅಂಗ ,
ಮೊಳೆ ಚುಚ್ಚಿ , ಮೆಲ್ಲನೆ ಹೊರಗೆ ನುಸುಳುವ ಗಾಳಿ,
ಕೈ ಕೊಟ್ಟ ಎಲಿವೇಟರಿನಲ್ಲಿ ಏರು- ಇಳಿತ.
ಹವೆಯ ತೊಂದರೆ ಕಂಡು ಎತ್ತಲೆತ್ತಲೋ ಪುಷ್ಪಕದ ಅಲೆತ
ಜಾಡು ತಪ್ಪಿದ ಕಾಡು
ನಿಂತ ಹಾಡು!

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+