ಭಾಗ್ಯದಾ ಲಕ್ಷ್ಮಿ ಬಾರಮ್ಮ..ನಮ್ಮಮ್ಮಾ ನೀ ಬ್ಯಾಂಕಿಗೆ ಬೇಗ ಬಾರಮ್ಮಾ


*ವೈಷ್ಣವಿ ಶಿವಕುಮಾರ್‌, ಭದ್ರಾವತಿ

ಭಾಗ್ಯದಾ ಲಕ್ಷ್ಮಿ ಬಾರಮ್ಮ..ನಮ್ಮಮ್ಮಾ
ನೀ ಬ್ಯಾಂಕಿಗೆ ಬೇಗ ಬಾರಮ್ಮಾ ।

ಹೆಜ್ಜೆಯ ಮೇಲೊಂದು ಹೆಜ್ಜೆಯನಿಟ್ಟು
ಆಟೋರಿಕ್ಷದಿ ಇಳಿಯುವ ಹೊತ್ತು ।
ಗಂಟೆಯು ದಾಟಿತು ಹತ್ತೂ ಐವತ್ತು
ಮ್ಯಾನೇಜರ್‌ಗೆ ವಿಪಿ ಏರುವ ಹೊತ್ತು ।

ಕೆಲವು ಹೂಗಳ ವಿಮಲ್ಲು ಸೀರೆ
ಮುಖಕೆ ಮೇಕಪ್‌ ಲಿಪ್‌ಸ್ಟಿಕ್‌ ಬೇರೇ ।
ಕೈಯಲಿ ಜಂಬದ ಚೀಲದ ನೀರೆ
ಬ್ಯಾಂಕಿನ ಲೋಕದ ಸಿನಿಮಾ ತಾರೆ ।

ಭಾಗ್ಯದಾ ಲಕ್ಷ್ಮಿ ಬಾರಮ್ಮ..ನಮ್ಮಮ್ಮಾ
ನೀ ಬ್ಯಾಂಕಿಗೆ ಬೇಗ ಬಾರಮ್ಮಾ ।

ಕೌಂಟರ್‌ನ ಹೊರಗೆ ಗಿರಾಕಿ ಸಾಲು
ಚಲನ್ನು ಚಕ್‌ ಬುಕ್‌ ಗಾಳಿಪಾಲು ।
ಕಾಫೀ ಹೀರುತ ನಕ್ಕಳು ನಾರೀ..
ಗಿರಾಕಿ ಕೋಪ ಓಡಿತು ಹಾರಿ ।

ಸೀರೆ ಮಾರುವ ಮಾರೀ ಮುತ್ತು
ಬ್ಯಾಂಕಿಗೆ ಬಂದನು ಫ್ರೆೃಡೆ ಹೊತ್ತು ।
ನಡೆದಳು ನಾರೀ ನೋಡಲು ಸ್ಯಾರಿ..
ಮ್ಯಾನೇಜರ್‌ಗೆ ಡಿಫರೆನ್ಸ್‌ ತೋರೀ ।

ಒಂದು ಸೀರೆಗೆ ನಾಲ್ಕು ಚೆಕ್ಕು
ಮೂರೇ ದಿನದಲಿ ಖಾಲಿ ಬುಕ್ಕು ।
ಮುಖಕೆ ಮೇಕಪ್‌ ಲಿಪ್ಪೂ ಸ್ಟಿಕ್ಕೂ
ಬ್ಯಾಂಕಿನ ಕೆಲಸ ಸಿಕ್ಕರೆ ಭಾರೀ ಲಕ್ಕೂ...।

ಭಾಗ್ಯದಾ ಲಕ್ಷ್ಮಿ ಬಾರಮ್ಮ..ನಮ್ಮಮ್ಮಾ ಲಕ್ಷ್ಮಿ

ನೀ ಬ್ಯಾಂಕಿಗೆ ಬೇಗ ಬಾರಮ್ಮಾ ।

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+