ಖ್ಯಾತ ಅಂಕಣಕಾರ, ಸಾಹಿತಿ ಎಚ್ಚೆಸ್ಕೆ ನೆನಪು

HSK (1920-2008)ಮೈಸೂರು, ಆ. 30 : ಎಚ್ಚೆಸ್ಕೆ ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ, ಅರ್ಥಶಾಸ್ತ್ರಜ್ಞ,ಅಂಕಣಕಾರ ಎಚ್.ಎಸ್ . ಕೃಷ್ಣಸ್ವಾಮಿ ಅಯ್ಯಂಗಾರ್(89) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಶುಕ್ರವಾರ ರಾತ್ರಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.ರಾತ್ರಿ 9:15ರ ಸುಮಾರಿಗೆ ಹೃದಯಾಘಾತಕ್ಕೊಳಗಾದರು ಎಂದು ಕುಟುಂಬದವರು ತಿಳಿಸಿದರು. ಮೃತರ ಪತ್ನಿ ಸಂತಾನಲಕ್ಷ್ಮಿ 9 ವರ್ಷದ ಹಿಂದೆ ತೀರಿಕೊಂಡಿದ್ದರು. ಪುತ್ರ ಪಾರ್ಥಸಾರಥಿ, ಪುತ್ರಿ ಗೀತಾ ಹಾಗೂ ಅಪಾರ ಅಭಿಮಾನಿಗಳನ್ನು ಎಚ್ಚೆಸ್ಕೆ ಅಗಲಿದ್ದಾರೆ. ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.

ಬಾಲ್ಯ ಹಾಗೂ ವೃತ್ತಿ ಜೀವನ
ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಹಳೆಯೂರಿನಲ್ಲಿ 1920 ರ ಆ. 20 ರಂದು ಜನಿಸಿದ್ದರು.ಅಲ್ಲೇ ಪ್ರಾಥಮಿಕ ಹಾಗೂ ಪ್ರೌಢ ವ್ಯಾಸಂಗ ಮುಗಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್, ಮೈಸೂರು ವಿವಿಯಿಂದ ಎಲ್ ಕಾಂ ಮತ್ತು ಬಿ.ಕಾಂ., ಬನಾರಸ್ ವಿವಿಯಿಂದ ಎಂಎ ಪದವಿ ಗಳಿಸಿದರು. ಪತ್ರಿಕಾ ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರಿನ ದೇಶ ಬಂದು 'ಪತ್ರಿಕೆಯಲ್ಲಿ ಕೆಲ ಸಕ್ಕೆ ಸೇರಿದರು.

ಅಲ್ಲಿಂದಲೇ ಪತ್ರಿಕೋದ್ಯ ಮವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ತೀ.ತಾ. ಶರ್ಮ ಅವರ ವಿಶ್ವಕರ್ನಾಟಕ' ಪತ್ರಿಕೆಯಲ್ಲಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ 20 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದರು. ಆಗಿನ ಬೆಂಗಳೂರು ಜನಜೀವನದ ಕುರಿತೂ ಅವರು ಸಾಕಷ್ಟು ಬರಹಗಳನ್ನು ಬರೆದಿದ್ದಾರೆ.

ಅಂಕಣಕ್ಕೆ ಗೌರವ ತಂದು ಕೊಟ್ಟ ಅಧ್ಯಾಪಕ
ನಾಡಿನ ಅನೇಕ ದಿನಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿ ವಿಷಯಕ್ಕೆ ಸಂಬಂಧಿಸಿದ ಅಂಕಣ ಬರಹಗಳು, ಆರ್ಥಿಕ ಚಿಂತನೆಗಳು, ಸಾಹಿತ್ಯ ವಿಮರ್ಶೆ, ಚುಟುಕ, ಪ್ರಬಂಧಗಳನ್ನು ಬರೆದಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ತೀರಾ ಇತ್ತೀಚಿನವರೆಗೂ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಅಂಕಣವನ್ನು ಬರೆಯುತ್ತಿದ್ದರು.

1957ರಲ್ಲಿ ಮೈಸೂರಿಗೆ ಮರಳಿ, ಬನುಮಯ್ಯ ಕಾಲೇಜಿನ ಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ನಿವೃತ್ತರಾಗುವವರೆಗೂ ಅವರು ಅಲ್ಲಿಯೇ ಕೆಲಸ ನಿರ್ವಹಿಸಿದರು. ಮೈಸೂರು ವಿವಿ ದೇಜಗೌ ಕುಲಪತಿಯಾಗಿದ್ದಾಗ ವಿಶ್ವಕೋಶ ಸಂಪುಟಗಳ ಮಾನವಿಕ ವಿಭಾಗಕ್ಕೆ' ಕೆಲಸಕ್ಕೆ ಸೇರಿದರು. 36 ವರ್ಷ ಸುಧಾ' ವಾರ ಪತ್ರಿಕೆಗೆ ಒಂದು ವಾರವೂ ತಪ್ಪದೆ ವ್ಯಕ್ತಿವಿಷಯವನ್ನು ಬರೆದರು.

ಪ್ರೊ. ಎಚ್ಚೆಸ್ಕೆ ಅವರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ವಿಡಂಬನಾ ಸಾಹಿತ್ಯ ' ಎಂಬ ಅವರ ವಿಮರ್ಶಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಭಾಸ್ಕರ್ ರಾವ್ ಸ್ಮಾರಕ ' ಬಹುಮಾನ ಲಭಿಸಿದೆ. ಧವನದ ಕೊನೆ', ಬಯಕೆಯ ಬಲೆ' ಮತ್ತು ಕಳ್ಳ ಹೊಕ್ಕ ಮನೆ' ಅವರ ಮೂರು ಪ್ರಸಿದ್ಧ ಕಾದಂಬರಿಗಳು. ಮಾನವನ ಐಹಿಕಾಭ್ಯುದ್ಯಯ' ಮತ್ತು ನಮ್ಮ ಶರೀರದ ರಚನೆ' ಅವರ ಭಾಷಾಂತರ ಕೃತಿಗಳು.

ಸಾಹಿತಿಯಾಗಿ ಎಚ್ಚೆಸ್ಕೆ
ಬದುಕು ಬೆಳಕು', ಈ ತರಹದ ವ್ಯಕ್ತಿಗಳು', ಬೆಳಕು ಚೆಲ್ಲಿದ ಬದುಕು' ಮತ್ತು ಮಾನ್ಯರು ಸಾಮಾನ್ಯರು' ಅವರ ವ್ಯಕ್ತಿಚಿತ್ರ ಕೃತಿಗಳು. ಹಲವಾರು ಗಣ್ಯರ ಕುರಿತು ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. 1983 ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಪ್ರಕಟಿಸಲಾದಅವಲೋಕನ 'ಸೇರಿದಂತೆ ಹಲವಾರು
ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಪ್ರೊ. ಎಚ್ಚೆಸ್ಕೆ ಅವರು ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಹೊರ ತಂದಿದ್ದಾರೆ. ಈ ಪೈಕಿ ನಮ್ಮ ಅಭಿವೃದ್ಧಿ ಯೋಜನೆ ' ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ ಲಭಿಸಿದೆ.

ವ್ಯವಹಾರಿಕ ಕನ್ನಡ, ವಾಣಿಜ್ಯ ಶಾಸ್ತ್ರ ಪರಿಚಯ (ಎರಡು ಸಂಪುಟಗಳಲ್ಲಿ) ಬ್ಯುಸಿನೆಸ್ ಇಂಗ್ಲಿಷ್ ಮತ್ತು ಆಡಳಿತ ಕನ್ನಡ, ಭಾರತದ ಭಾಷಾ ಸಮಸ್ಯೆ, ಬ್ಯಾಂಕಿನಲ್ಲಿ ಭಾಷೆ, ಬ್ಯಾಂಕು, ಪ್ರಜಾಪ್ರಭುತ್ವ, ಹಣದ ಮನೆ, ಬ್ಯಾಂಕಿಂಗ್ ಹೆಜ್ಜೆ ಗುರುತುಗಳು ಎಚ್.ಎಸ್.ಕೆ ಅವರ ಇತರ ಕೃತಿಗಳು.

ಪ್ರಶಸ್ತಿ ಬಯಸದ ಕರ್ಮಯೋಗಿ
ಕನ್ನಡ ಸಾಹಿತ್ಯ ಲೋಕ ಎಚ್ಚೆಸ್ಕೆ ಅವರನ್ನು ಸರಿಯಾಗಿ ಪುರಸ್ಕರಿಸಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಲ್ಲಿ ಸದಾ ಇರುತ್ತದೆ. ಆದರೆ ಎಚ್ಚೆಸ್ಕೆ ಎಂದೂ ಪ್ರಶಸ್ತಿಗಾಗಿ ಹಾತೊರೆದವರಲ್ಲ. ನಾಡು ನುಡಿಗಾಗಿ ತಮಗೆ ತಿಳಿದ ರೀತಿಯಲ್ಲಿ ದುಡಿದವರು. ಅಮೂಲ್ಯವಾದ ಬರಹಗಳನ್ನು ನೀಡಿದವರು. ಆ. 26 ರಂದು ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಎಚ್ಚೆಸ್ಕೆ ಅವರಿಗೆ ಅಭಿನಂದನೆ ಹಾಗೂ ಅವರ ಜನ್ಮದಿನ ಆಚರಣೆ ಮಾಡಿ, ಅವರ ಸಮಗ್ರ ಪ್ರಬಂಧ ಕೃತಿ ಅನಾವರಣಗೊಳಿಸಲಾಯಿತು. ಇದು ಅವರಿಗೆ ಪ್ರಶಸ್ತಿಗಿಂತ ಹೆಚ್ಚಿನ ತೃಪ್ತಿಕೊಟ್ಟಿತು ಎಂಬುದು ಆಪ್ತರ ಅನಿಸಿಕೆ.

1980ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,
1986ರಲ್ಲಿ ಕನ್ನಡ ಪತ್ರಿಕಾ ಅಕಾಡಮಿ ಪ್ರಶಸ್ತಿ,
1997ರಲ್ಲಿ ಎಚ್. ಕೆ. ವೀರಣ್ಣಗೌಡ ಪ್ರಶಸ್ತಿ,
1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ,
1989ರಲ್ಲಿ ವಿಶ್ವಮಾನವ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ಮತ್ತೊಮ್ಮೆ ಕನ್ನಡದ ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ, ಅವರು ಬರೆದ ಅನೇಕ ಕೃತಿಗಳನ್ನು ಆಸ್ಥೆಯಿಂದ ಓದಿ,ಎಚ್ಚೆಸ್ಕೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+