• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿನವ್ ಬಿಂದ್ರಾ ಗುರಿಗೆ ಒಲಿದ ಒಲಿಂಪಿಕ್ ಚಿನ್ನ

By Staff
|

ಆ.11 ಭಾರತೀಯ ಕ್ರೀಡಾಪಟುಗಳ ಪಾಲಿಗೆ ಅತ್ಯಂತ ಅವಿಸ್ಮರಣೀಯ ದಿನ. ಬಹುಶಃ ಭಾರತೀಯರೆಲ್ಲರು ಸಂತಸದ ಜೊತಗೆ ಹೆಮ್ಮೆಪಡುವಂತಹ ದಿನವೂ ಹೌದು. 25 ಹರೆಯದ ಚಂಡೀಗಡದ ಅಭಿನವ್ ಬಿಂದ್ರಾ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

*ಮೃತ್ಯುಂಜಯ ಕಲ್ಮಠ

abhinav bindra2004ರಲ್ಲಿ ಅಥೆನ್ಸ್ ಒಲಿಂಪಿಕ್ಸ್ ನ ಶೊಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಚೀನಾದ ಜೂ. ಕಿನಾನ್ ಅವರನ್ನು ಸೋಲಿಸಿ 700.5 ಅಂಕಗಳನ್ನು ಪಡೆಯುವ ಮೂಲಕ 10 ಮೀ. ಏರ್ ರೈಫಲ್ ಶೂಟಿಂಗ್ ನಲ್ಲಿ ಪ್ರಥಮ ಸ್ಥಾನ ಗಳಿಸುವದರೊಂದಿಗೆ ಭಾರತದ ಮುಡಿಗೆ ಚಿನ್ನದ ಗರಿಯನ್ನು ತೊಡಿಸಿದ್ದಾರೆ. ಒಟ್ಟು 600 ಅಂಕಗಳಲ್ಲಿ 595 ಅಂಕಗಳನ್ನು ಪಡೆಯುವ ಮೂಲಕ ಬಿಂದ್ರಾ ಭಾರತೀಯ ಅನೇಕ ಕನಸೊಂದನ್ನು ನನಸು ಮಾಡಿದ್ದಾರೆ.

ಪ್ರತಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತದ ಸ್ಥಾನ ಕೆಳಮಟ್ಟದ್ದಾಗಿರುತ್ತಿತ್ತು. 1980ರಲ್ಲಿ ಭಾರತ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿತ್ತು. ಅಲ್ಲಿಂದ ಇಲ್ಲಿಯವರೆಗೂ ಚಿನ್ನದ ಪದಕ ಕನಸಾಗಿಯೇ ಉಳಿದಿದೆ . ನಂತರ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಕಂಚು ಪ್ರಶಸ್ತಿ ಬಿಟ್ಟರೆ,ಇಲ್ಲಿಯವರೆಗೂ ಭಾರತೀಯ ಯಾವ ಆಟಗಾರರು ಹೇಳಿಕೊಳ್ಳುವಂಥ ಮಟ್ಟದಲ್ಲಿ ತಮ್ಮ ಪ್ರದರ್ಶನವನ್ನು ನೀಡಿರಲಿಲ್ಲ. ಒಂದು ಕಂಚು, ಒಂದು ಬೆಳ್ಳಿ ಪದಕಕ್ಕೆ ನೂರ ಕೋಟಿ ಜನರುಳ್ಳ ಭಾರತೀಯರು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.

ಅಭಿನವ್ ಬಿಂದ್ರಾ ಪ್ರತಿಭಾವಂತ ಎನ್ನುವುದನ್ನು 2000 ರಲ್ಲಿ ಜರುಗಿದೆ ಒಲಿಂಪಿಕ್ಸ್ ನಲ್ಲಿ ಸಾಬೀತುಪಡಿಸಿದ್ದರು. 2000ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಆಟಗಾರರಲ್ಲಿ ಅಭಿನವ್ ಬಿಂದ್ರಾ ಅತ್ಯಂತ ಕಿರಿಯ ಆಟಗಾರರಾಗಿದ್ದರು. 2004ರಲ್ಲಿ ಅಥೆನ್ಸ್ ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಕೂಡಾ ಗಮನಾರ್ಹ ಸಾಧನೆಯನ್ನು ಮಾಡಿದ್ದರು. ಆದರೆ, ಅದೃಷ್ಟವಶಾತ್ ಪದಕ ಗೆಲ್ಲುವ ಕನಸು ಕನಸಾಗಿಯೇ ಉಳಿದಿತ್ತು. ಅಂದು ಚೀನಾ ಶೂಟರ್ ಜೂ. ಕಿನಾನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಸಲ ಚಿನ್ನದ ಪದಕದ ಮೇಲೆ ಗುರಿ ಇಟ್ಟಿದ್ದ ಗುರಿಕಾರ ಅಭಿನವ್ ಬಿಂದ್ರಾ, ಭಾರತೀಯರ ಆಸೆಯನ್ನು ಭಗ್ನಗೊಳಿಸಲಿಲ್ಲ. ಶೂಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭಾರತೀಯ ಅಭಿನವ್ ಬಿಂದ್ರಾ ಗಳಿಸಿದ್ದಾರೆ ಎಂದು ಘೋಷಣೆಯಾಗುತ್ತಿದ್ದಂತೆಯೇ ಬೀಜಿಂಗ್ ನಲ್ಲಿದ್ದ ಭಾರತೀಯ ಕ್ರೀಡಾಪಟುಗಳು, ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇತ್ತ ಭಾರತದಲ್ಲಿಯೂ ಗೆಲುವಿನ ಸಂತಸ ಮುಂದುವರೆದಿದೆ. ಎಂಬಿಎ ಪದವೀಧರ ಅಭಿನವ್ ತನ್ನ ಪ್ರತಿಭೆಯನ್ನು ಜಗತ್ತಿಗೆ ತೋರಿಸುವಲ್ಲಿ ಸಫಲರಾಗಿದ್ದಾರೆ.

ಅಭಿನವ್ ಬಿಂದ್ರಾ ಕಾಮನ್ ವೆಲ್ತ್ ಕ್ರೀಡಾಕೂಟ ಮತ್ತು ಮ್ಯಾಂಚೆಸ್ಟರ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಭಾರತ ಸರ್ಕಾರ ಇವರ ಸಾಧನೆಯನ್ನು ಗುರುತಿಸಿ 2001 ರಲ್ಲಿ ಅರ್ಜುನ್ ಪ್ರಶಸ್ತಿ, 2001-02 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತೀಯ ಕ್ರೀಡಾಕೂಟಗಳ ಇತಿಹಾಸದಲ್ಲಿ ಅಭಿನವ್ ಬಿಂದ್ರಾ ಐತಿಹಾಸಿಕ ಸಾಧನೆಯನ್ನು ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸೆಪ್ಟಂಬರ್ 23, 1983ರಲ್ಲಿ ಚಂಡೀಗಡದಲ್ಲಿ ಅಭಿನವ್ ಬಿಂದ್ರಾ ಜನಿಸಿದರು. ಅವರ ಚಿಕ್ಕ ವಯಸ್ಸಿನಲ್ಲಿಯೇ ಶೂಟಿಂಗ್ ಎಂದರೆ ಇಷ್ಟದ ಕ್ರೀಡೆ. ತಮ್ಮ ಪ್ರತಿಭೆಯನ್ನು ಸಾಕಾರಗೊಳಿಸಲು ಮೊಟ್ಟಮೊದಲ ಬಾರಿಗೆ ಅವರು ಲೆಪ್ಟಿನೆಂಟ್ ಜಿ.ಎಸ್.ಧಿಲ್ಲೋನ್ ಎಂಬುವವರಲ್ಲಿ ತರಬೇತಿ ಪಡೆದರು. ಅಲ್ಲಿಂದ ಅವರ ಶೂಟಿಂಗ್ ಪರ್ವ ಆರಂಭವಾಯಿತು. ಸತತ ಪರಿಶ್ರಮ, ಏಕಾಗ್ರತೆ ಹಾಗೂ ಛಲ ಮೈಗೂಡಿಸಿಗೊಂಡಿದ್ದರಿಂದ ಇಂದು ಬಾರತೀಯರು ಹೆಮ್ಮೆಪಡುವಂತ ಸಾಧನೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರಂತೆಯೇ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಸೈನಾ ನೆಹ್ವಾಲ್, ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಮೇಲೂ ಸಾಕಷ್ಟು ಭರವಸೆಯಿದೆ. ಅವರು ಕೂಡಾ ಪದಕಗಳನ್ನು ಕೊಳ್ಳೆಹೊಡೆಯುವಲ್ಲಿ ಯಶಸ್ವಿಯಾಗಲಿ. ಭಾರತಕ್ಕೆ ಕೀರ್ತಿ ತರಲಿ ಎಂದು ಹಾರೈಸೋಣ.

ಒಲಿಂಪಿಕ್ಸ್ : ಭಾರತದ ಅಭಿನವ್ ಬಿಂದ್ರಾಗೆ ಬಂಗಾರ

ಒಲಿಂಪಿಕ್ಸ್ ನಲ್ಲಿ ಪ್ರಪ್ರಥಮ ಬಂಗಾರ ಪದಕ ಗೆದ್ದ ಬಿಂದ್ರಾರ ಸಂತಸದ ಕ್ಷಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more