• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರಂಗಭೂಮಿ ಸತ್ತರೆ ದೇಶ ಸತ್ತಹಾಗೆ’

By Staff
|

*ನಾಡಿಗೇರ್‌ ಚೇತನ್‌, ಮುಕುಂದ ತೇಜಸ್ವಿ

ಸಾದಾ ಕಾಟನ್‌ ಸೀರೆ. ಕೊರಳಲ್ಲೊಂದು ಕಣ್ಸೆಳೆವ ಹಾರ. ಸಾಧಾರಣ ಅನ್ನುವಂಥಾ ದೇಹದ ಈ ಮಧ್ಯಮ ವಯಸ್ಸಿನ ಹೆಂಗಸಿನ ನಿಲುವು ಬಿಗಿ. ಕೇಳಿದ್ದಕ್ಕಷ್ಟೇ ಉತ್ತರ ಕೊಡುವ ಜಾಯಮಾನ. ನಿಲುವು, ನೋಟ ನೋಡಿ ಈಕೆಯ ಕಂಠದ ಸ್ಥಾಯಿ ಅಳೆಯುವುದಂತೂ ದುಸ್ಸಾಧ್ಯ. ರಂಗ ಕಲೆಯ ಮನೆ- ಮನದ ಸಾಂಗತ್ಯದಲ್ಲೇ ಬೆಳೆದ ಕಲಾವಿದೆ ಬಿ.ಜಯಶ್ರೀ ತಮ್ಮ ಸರಳತೆಯಿಂದಲೇ ಮೆಚ್ಚಾಗೋದು ಹೀಗೆ. ಈಕೆ ಗುಬ್ಬಿ ವೀರಣ್ಣನವರ ಮೊಮ್ಮಗಳು ಅಂತ ಗುರ್ತಿಸಿಕೊಳ್ಳುತ್ತಿದ್ದ ಕಾಲ ಈಗ ಹಳತು. ಬರೋಬ್ಬರಿ 3 ದಶಕಗಳ ಕಾಲ ರಂಗ ತಾಲೀಮು ನಡೆಸಿರುವ ಜಯಶ್ರೀ ಈ ಹೊತ್ತು ಸ್ಯಾಂಡಲ್‌ವುಡ್‌ನ ಯಶಸ್ವಿ ಹಿನ್ನೆಲೆ ಗಾಯಕಿ ಅನ್ನೋದು ರುಜುವಾತಾಗಿರುವ ಬರಕತ್ತು.

‘ಪ್ರೀತಿ ಪ್ರೇಮ ಪ್ರಣಯ’ ಸಿನಿಮಾದ ಕಬ್ಬಿನ ಜಲ್ಲೆ... ಹಾಡು ಜಯಶ್ರೀ ಕಂಠದ ಮಾದಕತೆಯ ಮೊನಚಿಗೆ ಲೇಟೆಸ್ಟ್‌ ಉದಾಹರಣೆ. ಕೇವಲ ಸಿನಿಮಾ ಕಂಠದ ಜಯಶ್ರೀಯನ್ನು ಬಲ್ಲವರಿಗೆ ಆಕೆಯ ರಂಗ ಹೃದಯದ ಪರಿಚಯ ಆಳವಾಗಿ ಇರಲಾರದು. ಜಯಶ್ರೀ ಅವರೇ ಮಾತಾಡುತ್ತಿದ್ದಾರೆ...

ನೀವು ರಂಗಭೂಮಿಗೆ ಕಾಲಿಟ್ಟಿದ್ದು ಹೇಗೆ?

Love the plays my dear : B.Jayashreeರಂಗಭೂಮಿಗೆ ನಾನು ಪ್ರವೇಶಿಸಿದ್ದು 4 ವರ್ಷದ ಹುಡುಗಿಯಾಗಿದ್ದಾಗ. ಆಗೆಲ್ಲ ಥಿಯೇಟರ್‌ ಮನೆಯಾಗಿತ್ತು. ಒಂದರ್ಥದಲ್ಲಿ ನಾವು ಬೆಳೆದದ್ದು ಥಿಯೇಟರ್‌ನಲ್ಲೇ. ಥಿಯೇಟರ್‌ನಲ್ಲೇ ಆಟ ಅಡುತಿದ್ವಿ, ಅಲ್ಲೇ ಮಲಗುತಿದ್ವಿ. ಮನೆಗಿಂತ ಥಿಯೇಟರ್‌ನಲ್ಲೇ ಜಾಸ್ತಿ ಇರ್ತಿದ್ವಿ. ನಮ್ಮ ತಾಯಿ,ತಾತ, ಅಜ್ಜಿ ಎಲ್ಲಾ ನಟಿಸುತ್ತಿದ್ದರು. ಅವರನ್ನು ನೋಡಿ ಕಲಿತಿದ್ವಿ. ಆದರೆ ನನಗೆ ನಾಟಕದ ಬಗ್ಗೆ ನಿಜವಾಗಲೂ ಸ್ಫೂರ್ತಿ ಸಿಕ್ಕಿದ್ದು ನಾನು ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾಗೆ ಸೇರಿದ ನಂತರ. 3 ವರ್ಷ ಕಲಿತಿದ್ದು ಬಹಳ ಅನುಕೂಲವಾಯ್ತು. ಗುಬ್ಬಿ ಕಂಪೆನಿ ಮತ್ತು ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾಗೆ ಹೋಲಿಸಿ ನೋಡಿದಾಗ ಅಲ್ಲಿನ ಪರಿಸರ ಬಹಳ ಇಷ್ಟವಾಯ್ತು. ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಿಂದ ಬಂದ ಮೇಲೆ 1973ರಲ್ಲಿ ಗುಜರಾತಿ ನಾಟಕ ‘ವಡ್ಡರ ಜಸ್ಮಾ’ ಮೂಲಕ ರಂಗಭೂಮಿ ಯಾತ್ರೆ ಪ್ರಾರಂಭ ಮಾಡಿದೆ.

ಇತ್ತೀಚಿಗೆ ರಂಗಭೂಮಿ ಮಂಕಾಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?

ರಂಗಭೂಮಿ ಡಲ್‌ ಆಗಿಲ್ಲ. ಜನ ಡಲ್‌ ಆಗಿದ್ದಾರೆ. ಜನಕ್ಕೆ ಮೊದಲಿನ ಹುಮ್ಮಸ್ಸು ಇಲ್ಲ. ಹೊಟ್ಟೆ ಪ್ರಶ್ನೆ ನೋಡಿದರೆ ರಂಗಭೂಮಿ ಕೆಲಸವಾಗುವುದಿಲ್ಲ. ಜವಾಬ್ದಾರಿಯಿಂದ ತುಂಬಾ ಜನಕ್ಕೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ರಂಗಭೂಮಿ ಮಲಗಿಲ್ಲ. ರಂಗಭೂಮಿ ಸತ್ತಿಲ್ಲ. ರಂಗಭೂಮಿ ಸತ್ತರೆ ದೇಶ ಸತ್ತ ಹಾಗೆ.

ರಂಗಭೂಮಿ ಮತ್ತೆ ಜೀವಂತವಾಗಬೇಕಾದರೆ ಯಾವ ಯಾವ ಕೆಲಸಗಳಾಗಬೇಕು?

ರಂಗಭೂಮಿ ಜೀವಂತವಾದ ಕಲೆ. ನಾಟಕಗಳಲ್ಲಿ ತಪ್ಪು ಮಾಡಿದರೆ ಬಹಳ ಕಷ್ಟ. ರಂಗಭೂಮಿ ಮನುಷ್ಯನಿಗೆ ಆತ್ಮಸ್ಥೈರ್ಯ ಕೊಡುತ್ತೆ. ವ್ಯಕ್ತಿತ್ವ ವಿಕಸನ ಮಾಡುತ್ತೆ. ರಂಗಭೂಮಿ ಮನುಷ್ಯನಿಗೆ ಹವ್ಯಾಸವಾಗಬೇಕು- ವೃತ್ತಿಯಾಗಬೇಕು. ಆದರೂ ಒಳ್ಳೆಯ ನಾಟಕ ಮಾಡಿದರೆ, ಜನ ಬಂದೇ ಬರುತ್ತಾರೆ. ನಾಟಕಗಳು ವೀಕ್ಷಕರನ್ನು ಯೋಚನೆಗೆ ಹಚ್ಚುವಂತಿರಬೇಕು.

ಸಿನಿಮಾ ಹಾಡುಗಳ ಮಧ್ಯೆ ರಂಗಗೀತೆ ಕಳೆದುಹೋಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?

ಪ್ರಪ್ರಥಮವಾಗಿ ರಂಗಗೀತೆಗಳನ್ನು ಹಾಡಲು ಪ್ರಾರಂಭಿಸಿದ್ದು ನಾವು. ಟಿ.ವಿ,ಚಲನಚಿತ್ರಗಳಾದರೆ ನಾಡಿನ ಮೂಲೆಮೂಲೆಗೆ ತಲುಪುತ್ತದೆ. ಆದರೆ ನಾವು ಹಾಗೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೂ ರಂಗಗೀತೆಗಳ ಕಾರ್ಯಕ್ರಮ ಏರ್ಪಡಿಸಿದರೆ ಬಹಳ ಮಂದಿ ಜಮಾಯಿಸುತ್ತಾರೆ. ಬಹಳಷ್ಟು ಜನ ತಮ್ಮ ಮನೆಯ ಮದುವೆಗೆ ರಂಗಗೀತೆಗಳ ಕಾರ್ಯಕ್ರಮಕ್ಕಾಗಿ ನಮ್ಮ ಲ್ಲಿಗೆ ಬರುತ್ತಾರೆ. ನಾವು ಹೊರ ತಂದ ‘ಬಣ್ಣದ ಬದುಕಿನ ಚಿನ್ನದ ಹಾಡು’ಗಳ ಕ್ಯಾಸೆಟ್‌ ಬಹಳ ಜನಪ್ರಿಯವಾಯ್ತು. ಅಶ್ವಿನಿ ಆಡಿಯೋದವರ ಹತ್ತಿರ ಆ ಕ್ಯಾಸೆಟ್‌ನ ಹಕ್ಕಿದೆ. ಅಮೆರಿಕಾದಲ್ಲೂ ಸಾಕಷ್ಟು ಸಿ.ಡಿಗಳು ಮಾರಾಟವಾಯ್ತು.

ಕನ್ನಡ ರಂಗಭೂಮಿಗೆ ಮಾಧ್ಯಮಗಳ ಪ್ರತಿಕ್ರಿಯೆ ಹೇಗಿದೆ?

ಒಂದು ಇಂಗ್ಲೀಷ್‌ ನಾಟಕ ಮಾಡಿದರೆ ಮಾಧ್ಯಮಗಳಿಂದ ಬಹಳ ಪ್ರಚಾರ ಸಿಗುತ್ತದೆ. ಆದರೆ ಕನ್ನಡದಲ್ಲಿ ನಾಟಕಗಳ ಬಗ್ಗೆ ಸಾಕಷ್ಟು ಪ್ರಚಾರದ ಕೊರತೆ ಇದೆ. ಇಂಗ್ಲೀಷ್‌ ನಾಟಕಗಳಿಗೆ ನಮ್ಮಲ್ಲಿ ಬಹಳ ಪ್ರಾಯೋಜಕರು ಸಿಗುತ್ತಾರೆ. ಆದರೆ, ಕನ್ನಡ ನಾಟಕಗಳಿಗೆ ಪ್ರಾಯೋಜಕರು ಸಿಗುವುದು ಬಹಳ ಕಷ್ಟ. ಇಂಗ್ಲೀಷ್‌ ಪತ್ರಿಕೆಗಳು ನಾಟಕಗಳ ಉತ್ಸವ ನಡೆಸುವ ಹಾಗೆ ಕನ್ನಡ ಪತ್ರಿಕೆಗಳೂ ಕೂಡ ಉತ್ಸವ ಮಾಡಿ ರಂಗಭೂಮಿಗೆ ಪ್ರೋತ್ಸಾಹ ನೀಡುವಂತಾಗಬೇಕು.

ನಿಮ್ಮ ಮುಂದಿನ ಯೋಜನೆಗಳೇನು? ‘ಬಣ್ಣದ ಬದುಕಿನ ಚಿನ್ನದ ಹಾಡುಗಳ’ ನಂತರ ಮುಂದೇನು?

ಮಂಥರ ನಾಟಕ ಇನ್ನೂ ನಿರ್ಮಾಣ ಹಂತದಲ್ಲಿದೆ. ಇನ್ನೂ ಒಂದೂ ಸಾರ್ವಜನಿಕ ಪ್ರದರ್ಶನವಾಗಿಲ್ಲ. ರಂಗಗೀತೆಗಳ ಬಗ್ಗೆ ಇನ್ನೊಂದು ಕ್ಯಾಸೆಟ್‌ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ನೀವು ನಟಿಸಿರುವ ಚಲನಚಿತ್ರಗಳಲ್ಲಿ ನೀವು ಇಷ್ಟಪಡುವಂತಹ ಪಾತ್ರ ಯಾವುದು?

ಅಲೆಮಾರಿ, ದೇವೀರಿ, ನಾಗಮಂಡಲ, ಕರಿಯ, ಕೌರವ ಮುಂತಾದ ಚಿತ್ರಗಳಲ್ಲಿ ಪಾತ್ರಗಳು ಚೆನ್ನಾಗಿತ್ತು. ಒಂದೊಂದು ಪಾತ್ರ ಒಂದೊಂದು ರೀತಿಯಾಗಿತ್ತು. ಆದರೆ ಒಳ್ಳೆಯ ಅನುಭವ.

ನೀವು ಮಕ್ಕಳಿಗೆ ನಾಟಕಗಳನ್ನು ಪರಿಚಯಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದೀರಿ. ಅದರ ಬಗ್ಗೆ ಹೇಳಿ?

ಮಕ್ಕಳಿಗೆ ನಾಟಕದ ಹಲವು ಮಜಲುಗಳನ್ನು ಪರಿಚಯಿಸುವ ಸಲುವಾಗಿ ಕಾರ್ಯಾಗಾರವೊಂದನ್ನು ಏರ್ಪಡಿಸಿದ್ದೆವು. ಆ ಕಾರ್ಯಗಾರಕ್ಕೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತ್ತು. ಈಟಿವಿಯಲ್ಲಿ ಮಕ್ಕಳಿಗಾಗಿ 28 ಕಂತುಗಳ ಗೊಂಬೆಯಾಟ ಕಾರ್ಯಕ್ರಮ ನಡೆಸಿಕೊಟ್ಟೆವು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆನೇಕ ಮಕ್ಕಳು ತಮ್ಮನ್ನು ಗುರುತಿಸಿಕೊಂಡು, ಆನೇಕ ಕಾರ್ಯಕ್ರಮಗಳಲ್ಲಿ ನಟಸಿದ್ದಾರೆ.

ನಟನೆ, ಗಾಯನ ಮತ್ತು ನಿರ್ದೇಶನಗಳಲ್ಲಿ ತಮಗಾಗುವುದು ಇಷ್ಟ ?

ನಟನೆ, ಗಾಯನ ಮತ್ತು ನಿರ್ದೇಶನಗಳಲ್ಲಿ ನಟನೆ ಮತ್ತು ಗಾಯನ ಬಹಳ ಇಷ್ಟ.

ನಮ್ಮ ಓದುಗರಿಗೆ ನಿಮ್ಮ ಸಂದೇಶ?

ನಾಟಕದ ಮೇಲೆ ಪ್ರೀತಿ ಉಳಿಸಿಕೊಳ್ಳಿ ಮತ್ತು ನಮ್ಮ ಸಂಸ್ಕೃತಿ ಬೆಳೆಸಿ.

ಮುಖಪುಟ / ಸಾಹಿತ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X