• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಲುಂಡ ತವರಿಗೆ ಅಮೆರಿಕದಿಂದ ಮರಳಿದ ಪ್ರೊಫೆಸರ್‌ ಕಾಯಕಲ್ಪ

By Staff
|
  • ರಾಮಿ ರೆಡ್ಡಿ, ಆನೇಕಲ್‌

ಆನೇಕಲ್‌ ತಾಲ್ಲೂಕಿನ ಹರಪನಹಳ್ಳಿಯ ಮಲ್ಲ ರೆಡ್ಡಿಯ ಅಪ್ಪ ತೀರಿಹೋದಾಗ ಆತನಿಗಿನ್ನೂ ಒಂದು ವರ್ಷ. ಅಮ್ಮ ಅಕ್ಕಮ್ಮ ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಪ್ರಾಥಮಿಕ ಶಾಲೆಯಲ್ಲಿ ಓದಲು ಮೂರು ಮೈಲು ದೂರ ನಡೆದು ಹೋಗಿ ಬರುತ್ತಿದ್ದ ಮಲ್ಲ ರೆಡ್ಡಿ ಮನೆಯಲ್ಲಿ ಒಪ್ಪೊತ್ತು ಊಟಕ್ಕೂ ತೊಂದರೆ. ಆದರೆ ಹುಡುಗನಲ್ಲಿ ಓದುವ ಅಚಲ ಗುರಿ. ಹಾಗೆ ದಿನವೂ ಶಾಲೆಗೆ ಹೋಗುವಾಗ ಒಬ್ಬ ಹಾಲಿನ ವ್ಯಾನ್‌ ಡ್ರೆೃವರ್‌ ಪರಿಚಯವಾಯಿತು.

ಜಿಗಣಿಯಲ್ಲಿದ್ದ ಹೈಸ್ಕೂಲಿಗೆ ದಿನಾ ಓಡಾಡುವುದು ಕಷ್ಟವಾಯಿತು. ವ್ಯಾನ್‌ ಡ್ರೆೃವರ್‌ ಉಳಿದುಕೊಳ್ಳಲು ಜಾಗ ಕೊಟ್ಟ. ಹಾಗೂಹೀಗೂ ಮೆಟ್ರಿಕ್‌ನಲ್ಲಿ ಓದಿ, ಹೈ ಫಸ್ಟ್‌ ಕ್ಲಾಸ್‌ ತೆಗೆದಿದ್ದೂ ಆಯಿತು. ಆಮೇಲೆ ‘ಬೇಡ ಮಗು, ಓದಿದ್ದು ಸಾಕು. ನನ್ನ ಜೊತೆ ಹೊಲದಲ್ಲಿ ಕೆಲಸ ಮಾಡು’ ಅಂತ ಅಮ್ಮ ದುಂಬಾಲು ಬಿದ್ದಳು. ಆದರೆ ಮಲ್ಲ ರೆಡ್ಡಿ ವಿಚಲಿತನಾಗಲಿಲ್ಲ. ‘ಬಸ್ಸಿನಲ್ಲಿ ಯಾರ ಕೈಲಾದರೂ ಬೆಂಗಳೂರಿಗೆ ಒಂದು ಹೊತ್ತಿನ ಊಟ ಕಳಿಸು ಸಾಕು. He haunted the light and now distributing it !ಮಿಕ್ಕಿದ್ದನ್ನು ನಾನು ನೋಡಿಕೊಳ್ಳುತ್ತೇನೆ. ಒಂದು ವೇಳೆ ಆಗದಿದ್ದರೆ ನಾನೇ ಬಂದು ಕೂಲಿ ಕೆಲಸ ಮಾಡುತ್ತೇನೆ’ ಎಂದು ಹೇಳಿದ ಆತ ಸೇರಿದ್ದು ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್‌ಗೆ. ಉಚಿತ ಹಾಸ್ಟೆಲ್‌ನಲ್ಲಿ ಅವಕಾಶ ಪಡೆಯಲು ಎಚ್‌.ನರಸಿಂಹಯ್ಯ ಆಗ ಅದೆಷ್ಟೋ ಸುತ್ತಿನ ಸಂದರ್ಶನ ಮಾಡುತ್ತಿದ್ದರು. ಎಲ್ಲದರಲ್ಲೂ ಪಾಸಾದ ಮಲ್ಲ ರೆಡ್ಡಿಗೆ ಕೊನೆಗೆ ನರಸಿಂಹಯ್ಯನವರ ಪಕ್ಕದ ರೂಮಲ್ಲೇ ಉಳಿದುಕೊಳ್ಳಲು ಜಾಗ ಸಿಕ್ಕಿತು.

ಓದಿನಲ್ಲಿ ಸದಾ ಮುಂದಿದ್ದ ರೆಡ್ಡಿ ಇಂಟರ್ಮೀಡಿಯೇಟ್‌ ನಂತರ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಗಿಟ್ಟಿಸಿಕೊಂಡರು. ಎರಡು ವರ್ಷಗಳ ನಂತರ ಅದೇ ಕಾಲೇಜಲ್ಲಿ ಅಧ್ಯಾಪಕನ ಕೆಲಸ ಸಿಕ್ಕಿತು. ಆಮೇಲೆ ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿಯ ಹಸನಾದ ಕೆಲಸ. ಒಂದಷ್ಟು ವರ್ಷಗಳ ನಂತರ ಮಲ್ಲ ರೆಡ್ಡಿ ಪ್ರೊಫೆಸರ್‌ ಮಲ್ಲ ರೆಡ್ಡಿಯಾದರು.

ಇದು ಯಾವುದೋ ಸಿನಿಮಾ ಕಥೆಯಲ್ಲ. ಹಕೀಕತ್ತು. ಮುಂದೆ ಓದಿ...

ನಲವತ್ತು ವರ್ಷ ಅಲ್ಲಿ ಕೆಲಸ ಮಾಡಿದ ಮಲ್ಲ ರೆಡ್ಡಿ ಈಗ ಹರಪನಹಳ್ಳಿಯಲ್ಲಿದ್ದಾರೆ. ತವರಿಗೆ ಮರಳಿದಾಗ ಹಳ್ಳಿಯಲ್ಲಿ ತಾವು ಓದಿದ ಶಾಲೆ ಹಾಗೇ ಇತ್ತು. ಬಡತನದ ಸ್ವರೂಪ ಕೂಡ ಹೆಚ್ಚೇನೂ ಬದಲಾಗಿರಲಿಲ್ಲ. ಓದಿದ ಶಾಲೆಗೆ 60 ಲಕ್ಷ ರುಪಾಯಿ ಖರ್ಚು ಮಾಡಿ ಹೊಸ ರೂಪ ಕೊಟ್ಟ ಅವರು , ಈ ಶಾಲೆಯನ್ನು ಮರು ಉದ್ಘಾಟಿಸಲು ಕರೆದದ್ದು ತಮ್ಮ ಗುರುಗಳಾಗಿದ್ದ ಎಚ್‌. ನರಸಿಂಹಯ್ಯನವರನ್ನ. ಆಗ ಬಿಚ್ಚಿಕೊಂಡದ್ದು ಮತ್ತವೇ ಕಾಲೇಜಿನ ದಿನಗಳ ನೆನಪು. ಒಬ್ಬ ಒಳ್ಳೆಯ ಶಿಷ್ಯನ ಪಡೆದಿದ್ದಕ್ಕೆ ನರಸಿಂಹಯ್ಯನವರ ಕಣ್ಣಲ್ಲಿ ಆನಂದದ ಕಣ್ಣೀರು ಆಡಿತು.

ನೊಬೆಲ್‌ ಪ್ರಶಸ್ತಿ ವಿಜೇತ ಬಾಂಗ್ಲಾದೇಶದ ಸಾಹಿತಿ ಮೊಹಮ್ಮದ್‌ ಯೂನಿಸ್‌ ಅವರನ್ನು ಓದಿಕೊಂಡಿರುವ ಮಲ್ಲ ರೆಡ್ಡಿ, ವಿಶ್ವ ಬಡತನವನ್ನು ನಿರ್ಮೂಲನೆ ಮಾಡುವ ಆತನ ಕನಸನ್ನು ತಾವೂ ಕಾಣತೊಡಗಿದ್ದಾರೆ. ಸದ್ಯಕ್ಕೆ ಹರಪನಹಳ್ಳಿಯಲ್ಲಿ ಬಡತನ ನಿರ್ಮೂಲನೆಗೆ ಒಂದು ಪ್ರಾಯೋಗಿಕ ಯೋಜನೆಯನ್ನು ಹಾಕಿಕೊಂಡಿದ್ದಾರೆ. ತೀರಾ ಕಾಸಿಲ್ಲದವರಿಗೆ ಉಳ್ಳವರು ನೆರವು ಕೊಡಿ ಎಂದು ಶ್ರೀಮಂತ ವರ್ಗದವರನ್ನು ಒಟ್ಟುಗೂಡಿಸುತ್ತಾ, ತಾವೂ ಕೊಡುಗೈಯನ್ನು ಮುಂದೆ ಮಾಡುತ್ತಾರೆ. ಅರುವತ್ತೊಂಬತ್ತು ವಯಸ್ಸಿನ ಮಲ್ಲ ರೆಡ್ಡಿ ಹಾಗೆ ಕನಸು ಕಾಣುತ್ತಲೇ ತಮ್ಮ ಗುಡಿಸಲಿದ್ದ ಜಾಗವನ್ನು ತೋರುತ್ತಾ ಸಾರ್ಥಕ ನಗೆ ನಗುತ್ತಾರೆ. ಶಾಲೆ ಸುಧಾರಿಸಿದ್ದಕ್ಕೆ ನೆಮ್ಮದಿಯ ನಿಟ್ಟುಸಿರಿಡುತ್ತಾರೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X