ಭಾರತದ ಮಹಾ ಮಿದುಳು ಕಾಪಿ ಎಡಿಟರ್ ಪ್ರಿಯಂವದ
ನವದೆಹಲಿ : ಇಪ್ಪತ್ತೆೈದರ ಹರೆಯದ ಕೇರಳ ಮೂಲದ ಕೆ.ಇ.ಪ್ರಿಯಂವದ ಈಗ ‘ಭಾರತದ ಮಹಾ ಮಿದುಳು’ (ಮಾಸ್ಟರ್ ಮೈಂಡ್ ಆಫ್ ಇಂಡಿಯಾ). ಬಿಬಿಸಿ ಟಿವಿ ಚಾನೆಲ್ ನೋಡುಗರಿಗೆ ಈ ವಿಷಯ ಗೊತ್ತಿರಬಹುದು. ಕರೋಡ್‌ಪತಿಯ ಗುಂಗಲ್ಲೇ ಮುಳುಗಿಹೋಗಿ, ಬೇರೆ ಕ್ವಿಜ್ ಕಾರ್ಯಕ್ರಮಗಳ ಅರಿವೆಯೇ ಇಲ್ಲದ ಬಹುತೇಕರಿಗೆ ಇದು ಗೊತ್ತಿರಲಿಕ್ಕೇ ಇಲ್ಲ.
ಪ್ರತಿ ಸೋಮವಾರ ರಾತ್ರಿ 10 ಗಂಟೆಗೆ ‘ಮಾಸ್ಟರ್ ಮೈಂಡ್ ಆಫ್ ಇಂಡಿಯಾ’ ಎಂಬ ರ್ಯಾಪಿಡ್ ಫೈರ್ ಕ್ವಿಜ್ ಸ್ಪರ್ಧೆ ಬಿಬಿಸಿಯಲ್ಲಿ ಪ್ರಸಾರವಾಗುತ್ತದೆ. ಮೊನ್ನೆಯ ಸಂಚಿಕೆಯಲ್ಲಿ ಫೈನಲ್ಸ್ ಸುತ್ತು ಪ್ರಸಾರವಾಯಿತು. ಅದರಲ್ಲಿ ಗೆದ್ದದ್ದು ‘ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ’ ವೆಬ್‌ಸೈಟಿನಲ್ಲಿ ಉಪ ಸಂಪಾದಕಿಯಾಗಿರುವ ದೆಹಲಿ ವಾಸಿ ಪ್ರಿಯಂವದ ; ಇದ್ದ ನಾಲ್ವರು ಸ್ಪರ್ಧಿಗಳ ಪೈಕಿ ಕಿರಿಯಾಕೆ. ಈಕೆಯನ್ನು ಐಎಎನ್‌ಎಸ್ ಮಾತನಾಡಿಸಿ, ಅಪರೂಪದ ವ್ಯಕ್ತಿತ್ವವನ್ನು ನಿಮಗಾಗಿ ಕಟ್ಟಿ ಕೊಟ್ಟಿದೆ....
- ಈಗ ನೀವು ಮಾಸ್ಟರ್ ಮೈಂಡ್. ಕೆಬಿಸಿಯಲ್ಲಿ ಭಾಗವಹಿಸುವ ಇರಾದೆ ಏನಾದರೂ ಇದೆಯಾ ?
- ಸ್ಪರ್ಧೆಗೆ ಹೇಗೆ ತಯಾರಾಗಿದ್ದಿರಿ?
- ನೀವು ಯಾವ ವಿಷಯ ಗಳಲ್ಲಿ ಎಕ್ಸ್‌ಪರ್ಟ್?
- ನಿಮ್ಮಲ್ಲಿನ ಯಾವ ‘ತನ’ ಗೆಲುವು ದಕ್ಕಿಸಿಕೊಟ್ಟಿತು?
- ‘ಭಾರತದ ಮಹಾ ಮಿದುಳಿನ ’ ಜೀವನ ಇನ್ನು ಬದಲಾಗಲಿದೆಯೇ?
‘ನಾವಂದುಕೊಂಡಿದ್ದು 39 ವರ್ಷದ ಅಧಿಕಾರಿ ಮನೋಜ್ ಕುಮಾರ್ ಗೆಲ್ಲುತ್ತಾರೆಂದು. ಅವರು ಫೈನಲ್ಸ್ ಮುಂಚಿನ ಪ್ರಶ್ನೆಗಳಿಗೆ ಚಕಚಕನೆ ಉತ್ತರ ಕೊಟ್ಟಿದ್ದರು. ಆದರೆ ಪ್ರಿಯಂವದ ಅನಿರೀಕ್ಷಿತ ಹಾಗೂ ಕಾರ್ಯಕ್ರಮದ ದಾಖಲೆ ಫಲಿತಾಂಶ(43 ಅಂಕಗಳು) ಕೊಟ್ಟರು’ ಎನ್ನುತ್ತಾರೆ ಕೆಬಿಸಿಯನ್ನೂ ನಿರ್ಮಿಸಿರುವ ಕ್ವಿಜ್ ಮಾಸ್ಟರ್ ಸಿದ್ಧಾರ್ಥ ಬಸು.
ರಾಜಸ್ಥಾನದ ಜೋಧಪುರದ ಉಮೇೖದ್ ಭವನ ಅರಮನೆಯಲ್ಲಿ ನಡೆದ ಈ ಸ್ಪರ್ಧೆಯ ವಿಶೇಷ ಪ್ರಶ್ನೆಗಳ ಹರಿಯುವ ವೇಗ ಮತ್ತು ಬೆಳಕಿನ ಮೋಡಿ. ಅದರಲ್ಲಿ ಮರೆಯಲಾರದ ಮಾತು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಹೇಳಿದ್ದು- ‘ ಟುಡೇ ದಿಸ್ ಲಿಟ್ಲ್ ಗರ್ಲ್ ಬಿಕೇಮ್ ಟಾಲ್ ಹಿಯರ್’.
ಅನಂತ ಸಾಧನೆಯ ಹಾದಿ ಹಿಡಿದಿರುವ ಪ್ರಿಯಂವದ ಕೊಡುವ ಉತ್ತರ ನಮಗೆ ಅಪೂರ್ಣ ಅನಿಸುತ್ತದೆ. ಅವರ ವ್ಯಕ್ತಿತ್ವವೇ ಹಾಗೆ; ಗಂಧದಂತೆ. ತೇದಷ್ಟೂ ಘಮಘಮ. ಕೆಲವರು ಏನೂ ಗೊತ್ತಿಲ್ಲದಿದ್ದರೂ ಹಣದ ಬಾಲ ಹಿಡಿದು ಹೊರಟರೆ, ಇನ್ನು ಕೆಲವರು ಆಕಾಶ ತಟ್ಟುವ ಬಯಕೆ ಕಟ್ಟಿಕೊಂಡಿರುತ್ತಾರೆ. ಪ್ರಿಯಂವದ ಈ ಎರಡನೇ ಗುಂಪಿಗೆ ಸೇರಿದವರು. ಸಾಧನೆಯ ಹಾದಿಯಲ್ಲಿ ಅವರ ನಡುಗೆಯ ವೇಗ ಇನ್ನಷ್ಟು ಹೆಚ್ಚಲಿ.
(ಐಎಎನ್‌ಎಸ್)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications