• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಎಫ್‌ಐಎಪಿ- ಇದು ನಿಮಗೆ ಗೊತ್ತೆ?

By Staff
|

*ಪ್ರಸಾದ ನಾಯಿಕ

ಛಾಯಾಗ್ರಹಣ ರಂಗದಲ್ಲಿ ಅತ್ಯುತ್ತಮ ಸಾಧನೆ ತೋರಿಸಿದವರನ್ನು ಈಗ ಬೆಲ್ಜಿಯಂನಲ್ಲಿರುವ ‘ಎಫ್‌ಐಎಪಿ’ ಅನೇಕ ವರ್ಷಗಳಿಂದ ಗುರುತಿಸಿ, ಗೌರವವನ್ನು ನೀಡುತ್ತ ಬಂದಿದೆ. ಎಎಫ್‌ಐಎಪಿ ಮೊದಲ ಹಂತದ ಡಿಸ್ಟಿಂಕ್ಷನ್‌ ಆದರೆ, ‘ಇಎಫ್‌ಐಎಪಿ’ (ಎಕ್ಸೆಲೆನ್ಸ್‌ , ಫೆಡರೇಷನ್‌ ಇಂಟರನ್ಯಾಷನಲ್‌ ಡಿ-ಲಾ ಆರ್ಟ್‌ ಫೋಟೋಗ್ರಫಿಕ್‌) ಎರಡನೇ ಹಂತದ ಗೌರವ ಮತ್ತು ‘ಎಮ್‌ಎಫ್‌ಐಎಪಿ’ (ಮಾಸ್ಟರ್‌, ಫೆಡರೇಷನ್‌ ಇಂಟರನ್ಯಾಷನಲ್‌ ಡಿ-ಲಾ ಆರ್ಟ್‌ ಫೋಟೋಗ್ರಫಿಕ್‌) ಅತ್ಯುನ್ನತ ಗೌರವ. ಈ ಗೌರವ ಪಡೆಯುವುದೇ ತಮ್ಮ ಛಾಯಾಗ್ರಹಣದ ನೈಪುಣ್ಯತೆಗೆ, ತಂತ್ರಗಾರಿಕೆಗೆ, ಗುಣಮಟ್ಟಕ್ಕೆ ಹಿಡಿದ ಕನ್ನಡಿ ಎಂದು ಛಾಯಾಗ್ರಾಹಕರು ಭಾವಿಸುತ್ತಾರೆ.

ಈ ಅತ್ಯುನ್ನತ ಗೌರವ ಪಡೆಯುವಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮೇಲುಗೈ ಸಾಧಿಸಿದೆ. ಭಾರತದಲ್ಲಿ ಇಲ್ಲಿಯವರೆಗೆ ಎಮ್‌ಎಫ್‌ಐಎಪಿ ಗೌರವ 7 ಜನರಿಗೆ ದೊರೆತಿದೆ. ಅವರಲ್ಲಿ ಐವರು ಕರ್ನಾಟಕದವರೆನ್ನು-ವು-ದು ನ-ಮ್ಮೆಲ್ಲರ ಪಾಲಿನ ಹೆಮ್ಮೆಯ ಸಂಗತಿ. ‘ಪಿಕ್ಟೋರಿಯಲ್‌’ ವಿಭಾಗದಲ್ಲಿ ಕಪ್ಪು-ಬಿಳುಪು ಛಾಯಾಗ್ರಹಣಕ್ಕಾಗಿ ಸಿ. ರಾಜಗೋಪಾಲ್‌ ಅವರಿಗೆ ಮೊದಲ ಬಾರಿ ಅತ್ಯುನ್ನತ ಗೌರವ ನೀಡಲಾಗಿದೆ. ಈ ಗೌರವ ಪಡೆದಂಥ ವಿಶ್ವದ ಎರಡನೇ ವ್ಯಕ್ತಿ ರಾಜಗೋಪಾಲ್‌. ಅವರ ನಂತರ ವನ್ಯಜೀವಿ ಛಾಯಾಗ್ರಹಣಕ್ಕಾಗಿ(ಕಪ್ಪು-ಬಿಳುಪು) ಎಮ್‌.ವೈ. ಘೋರ್ಪಡೆ, ಅದೇ ವಿಭಾಗಕ್ಕಾಗಿ ಟಿ.ಎನ್‌.ಎ. ಪೆರುಮಾಳ್‌, ಬಿ. ಶ್ರೀನಿವಾಸ್‌ ಅವರಿಗೆ ಮತ್ತು 1999ರಲ್ಲಿ ಪ್ರಕೃತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳನ್ನು ತೆಗೆದಿರುವ ಎಚ್‌. ಸತೀಶ್‌ ಅವರಿಗೆ ಈ ಗೌರವ ದೊರೆತಿದೆ. ಎಮ್‌ಎಫ್‌ಐಎಪಿ ಪಡೆದ ಮತ್ತಿಬ್ಬರೆಂದರೆ ಕೊಲ್ಕತಾದ ಬೆನುಸೆನ್‌ ಮತ್ತು ಸುಸಾಂತಾ ಬ್ಯಾನರ್ಜಿ.

ಗೌರವಕ್ಕಾಗಿ ಅರ್ಜಿ ಹೇಗೆ?

ಛಾಯಾಚಿತ್ರದ ಸ್ಪಷ್ಟತೆ, ವಿಶಿಷ್ಟತೆ, ತಾಂತ್ರಿಕತೆ, ಚಿತ್ರ ತೆಗೆದ ಸ್ಥಳದ ನಿಖರವಾದ ವಿವರಗಳೇ ಅಂತಾರಾಷ್ಟ್ರೀಯ ಮನ್ನಣೆಯ ಮಾನದಂಡಗಳು. ಎಎಫ್‌ಐಎಪಿ ಗೌರವಕ್ಕೆ ಅರ್ಹತೆ ಪಡೆಯಬೇಕಾದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೆಲಾನ್‌ (ಸ್ಪರ್ಧೆ)ಗಳಲ್ಲಿ ಕನಿಷ್ಠ ಐದು ವರ್ಷ ಭಾಗವಹಿಸಿರಬೇಕು. ಈ ಐದು ವರ್ಷದಲ್ಲಿ ಕನಿಷ್ಠ 10 ಚಿತ್ರಗಳು ಅಂತಾರಾಷ್ಟ್ರೀಯ ಎಕ್ಸೆಪ್ಟನ್ಸ್‌ ಪಡೆದಿರಬೇಕು. ಆ 10 ಚಿತ್ರಗಳಲ್ಲಿ ಕನಿಷ್ಠ 5 ಚಿತ್ರಗಳು ಬೇರೆಬೇರೆಯಾಗಿರಬೇಕು.

ಭಾರತದಲ್ಲಿರುವ ಎಫ್‌ಐಎಪಿಯ ಅಧೀನ ಸಂಸ್ಥೆಯಾದ ‘ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೋಗ್ರಫಿ’ (ಎಫ್‌ಐಪಿ) ಮೊದಲ ಹಂತದ ವೀಕ್ಷಣೆ ಮಾಡಿದ ನಂತರ ಬೆಲ್ಜಿಯಂನಲ್ಲಿರುವ ಸಂಸ್ಥೆಗೆ ಚಿತ್ರಗಳನ್ನು ಕಳುಹಿಸುತ್ತದೆ. ಕೊಲ್ಕತ್ತಾದಲ್ಲಿರುವ ಎಫ್‌ಐಪಿಯ ಐವರು ತೀರ್ಪುಗಾರರು ಛಾಯಾಚಿತ್ರಗಳನ್ನು ವೀಕ್ಷಿಸುತ್ತಾರೆ. ಅವರಲ್ಲಿ ಕನಿಷ್ಠ ಮೂರು ತೀರ್ಪುಗಾರರು ಅಂತಾರಾಷ್ಟ್ರೀಯ ಸಂಸ್ಧೆಗೆ ಚಿತ್ರಗಳನ್ನು ಕಳುಹಿಸಲು ಒಪ್ಪಬೇಕು. ಎಎಫ್‌ಐಎಪಿ ಗೌರವಕ್ಕೆ ಅರ್ಜಿ ಸಲ್ಲಿಸ ಬಯಸುವವರು 10 ಚಿತ್ರಗಳನ್ನು ಎಫ್‌ಐಪಿಗೆ ಕಳುಹಿಸಬೇಕು.

ಎಎಫ್‌ಐಎಪಿ ಗೌರವ ಪಡೆದ ನಂತರ ಇಎಫ್‌ಐಎಪಿ ಗೌರವಕ್ಕಾಗಿ ಕನಿಷ್ಠ ಮೂರು ವರ್ಷ ಕಾಯಬೇಕು. ಈ ಗೌರವಕ್ಕಾಗಿ ಕನಿಷ್ಠ 50 ಅಂತಾ/ಜ್ಞಿಛಛ್ಡಿ.ಜಠಿಞ್ಝ/ಠಚಜಜಿಠಿಢಚ/್ಜಚ್ಞಚ/ಟ್ಟಚಡಛಿಛ್ಞಿ1.ಜಠಿಞ್ಝರಾಷ್ಟ್ರೀಯ ಎಕ್ಸೆಪ್ಟನ್ಸ್‌ ಪಡೆದ ಛಾಯಾಗ್ರಾಹಕ ಮಾತ್ರ ಪ್ರಯತ್ನಿಸಬಹುದು ಮತ್ತು 20 ಬೇರೆ ಬೇರೆ ಛಾಯಾಚಿತ್ರಗಳನ್ನು ಕಳುಹಿಸಬೇಕು. ಎಮ್‌ಎಫ್‌ಐಎಪಿ ಗೌರವಕ್ಕಾಗಿ ಮತ್ತೆ ಕಾಯುವ ಅಗತ್ಯವಿಲ್ಲ. ಆದರೆ ಈ ಹಂತದಲ್ಲಿಯೂ 20 ಛಾಯಾಚಿತ್ರಗಳನ್ನು ಕಳುಹಿಸಬೇಕು.

ವಿಭಾಗಗಳು

ಒಟ್ಟು 7 ವಿಭಾಗಗಳಲ್ಲಿ ಎಎಫ್‌ಐಎಪಿ ಗೌರವಕ್ಕಾಗಿ ಛಾಯಾಗ್ರಾಹಕರು ಅರ್ಜಿ ಸಲ್ಲಿಸಬಹುದು. ಅವುಗಳೆಂದರೆ,

ಮೊನೊಕ್ರೋಮ್‌ (ಕಪ್ಪು - ಬಿಳುಪು)
ಕಲರ್‌ ಪ್ರಿಂಟ್‌
ಕಲರ್‌ ಸ್ಲೈಡ್‌
ನೇಚರ್‌ ಪ್ರಿಂಟ್‌
ನೇಚರ್‌ ಸ್ಲೈಡ್‌
ಪೋಟೋಜರ್ನಲಿಸಂ (ಕಲರ್‌ ಮತ್ತು ಸ್ಲೈಡ್‌)
ಪೋಟೋಟ್ರಾವೆಲ್‌

ಲಂಡನ್‌ನಲ್ಲಿರುವ ರಾಯಲ್‌ ಫೋಟೋಗ್ರಫಿಕ್‌ ಸೊಸೈಟಿ (ಆರ್‌ಪಿಎಸ್‌) ಕೂಡ ಛಾಯಾಗ್ರಹಣದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಮೂರು ಹಂತಗಳ ಗೌರವ ನೀಡುತ್ತಿದೆ. ಅವು,
ಲೈಸೆನ್ಸಿಯೇಟ್‌ಶಿಪ್‌ (ಎಲ್‌ಆರ್‌ಪಿಎಸ್‌)
ಅಸೋಸಿಯೇಟ್‌ಶಿಪ್‌ (ಎಆರ್‌ಪಿಎಸ್‌)
ಫೆಲೋಶಿಪ್‌ (ಎಫ್‌ಆರ್‌ಪಿಎಸ್‌)


ಹೆಚ್ಚಿನ ವಿವರಗಳಿಗಾಗಿ www.rps.org ವೆಬ್‌ಸೈಟನ್ನು ನೋಡಬಹುದು.

ಈ ಗೌರವಗಳನ್ನು ಪಡೆಯಲಿಚ್ಛಿಸುವ ಛಾಯಾಗ್ರಾಹಕರು ಸತತವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೆಲಾನ್‌ಗಳಲ್ಲಿ ಭಾಗವಹಿಸಬೇಕಾಗಿರುವುದು ಅಗತ್ಯ. ಇದಕ್ಕಾಗಿ ಇಂಥದೇ ಕ್ಯಾಮೆರಾ ಇರಬೇಕೆಂದೇನೂ ಇಲ್ಲ. ಆಟೋ ಫೋಕಸ್‌ ಕ್ಯಾಮೆರಾ ಆದರೂ ಆಯಿತು. ಬಟ್‌ ಯು ಶುಡ್‌ ಹ್ಯಾವ್‌ ಎನ್‌ ಐ ಫಾರ್‌ ಪೋಟೋಗ್ರಫಿ.

ಬೆಂಗಳೂರಿನ ಯವನಿಕಾದಲ್ಲಿರುವ ಯೂಥ್‌ ಪೋಟೋಗ್ರಫಿಕ್‌ ಸೊಸೈಟಿ(ವೈಪಿಎಸ್‌)ಯನ್ನು ಅಥವ ಕೊಲ್ಕೊತಾದಲ್ಲಿರುವ ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೋಗ್ರಫಿ (ಎಫ್‌ಐಪಿ)ಯನ್ನು ರಾಷ್ಟ್ರೀಯ ಅಥವ ಅಂತಾರಾಷ್ಟ್ರೀಯ ಸೆಲಾನ್‌ಗಳಲ್ಲಿ ಭಾಗವಹಿಸಲು ಮಾಹಿತಿಗಾಗಿ ಸಂಪರ್ಕಿಸಬಹುದು.

ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೀವು ಖುದ್ದಾಗಿ ಎಚ್‌.ವಿ. ಪ್ರವೀಣ್‌ ಕುಮಾರ ಅವರನ್ನು ಸಂಪರ್ಕಿಸಬಹುದು.

What do you think about this story?

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X