ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ನಲ್ಲಿ ಎಲ್ಲಾ ತರಗತಿ ಪಠ್ಯಪುಸ್ತಕ: ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

|
Google Oneindia Kannada News

ಬೆಂಗಳೂರು, ಜೂ. 2: ಕರ್ನಾಟಕ ರಾಜ್ಯದಲ್ಲಿ ಪಠ್ಯಪುಸ್ತಕದ ಗೊಂದಲ ವಿಪರೀತವಾಗಿದೆ. ಪಠ್ಯಪುಸ್ತಕದ ವಿವಾದದಿಂದ ಪುಸ್ತಕ ವಿತರಣೆಗೂ ಗೊಂದಲ ಉಂಟಾಗಿದೆಯ ಸರ್ಕಾರವೂ ಪುಸ್ತಕ ವಿತರಣೆಯಲ್ಲಿ ವಿಳಂಬವನ್ನು ಮಾಡುತ್ತಿದೆ. ಪಠ್ಯಪುಸ್ತವನ್ನು ಪೂರ್ಣಪ್ರಮಾಣದಲ್ಲಿ ವಿತರಿಸಿಲ್ಲ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಪಠ್ಯಪುಸ್ತಕವಿಲ್ಲದೇ ಪಾಠವನ್ನು ಮಾಡುತ್ತಿದ್ದಾರೆ. ಈ ನಡುವೆ ಪಠ್ಯಪುಸ್ತಕಕ್ಕೆ ಕಂಗಾಲಾಗದೇ ವಿದ್ಯಾರ್ಥಿಗಳು, ಪೋಷಕರು ತಮಗೆ ಬೇಕಾದ ಪಠ್ಯಪುಸ್ತಕವನ್ನು ಕರ್ನಾಟಕ ಪಟ್ಯಪುಸ್ತಕ ಸಂಘದ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸರ್ಕಾರ ಪಠ್ಯಪುಸ್ತಕವನ್ನು ಮರುಪರಿಷ್ಕರಣೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಆರರಂದ ಹತ್ತನೇ ತರಗತಿಯವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಪರಿಷ್ಕರಣೆಗೆ ಒಳಪಡಿಸಿದ್ದು. ಕೆಲವು ಗದ್ಯವನ್ನೇ ತೆಗೆದು ಹೊಸದಾಗಿ ಸೇರಿಸಿದ್ದಾರೆ. ಇನ್ನು ಕೆಲವು ಪಠ್ಯದಲ್ಲಿ ಹೆಚ್ಚುವರಿ ಅಂಶವನ್ನು ಸೇರಿಸಲಾಗಿದೆ. ಇದರಿಂದಾಗಿ ಪಠ್ಯಪುಸ್ತಕದ ವಿತರಣೆ ವಿಳಂಬವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಇನ್ನು ಹದಿನೈದು ದಿನಗಳವರೆಗೂ ನಡೆಸಲಾಗುತ್ತದೆ. ಇದರಿಂದಾಗಿ ಪಠ್ಯಪುಸ್ತಕ ತಡವಾಗಿ ಬಂದರೂ ನಷ್ಟವಿಲ್ಲ. ಆದರೂ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ನಿಗದಿತ ಸಮಯದಲ್ಲಿ ಪಠ್ಯಪುಸ್ತಕವನ್ನು ಪೂರೈಸುವುದು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿತ್ತು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ರೋಹಿತ್ ಚಕ್ರತೀರ್ಥ ಸಮಿತಿ ಬರಖಾಸ್ತು? ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ರೋಹಿತ್ ಚಕ್ರತೀರ್ಥ ಸಮಿತಿ ಬರಖಾಸ್ತು?

ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ ಮಾಡಿದ್ದೇ ಆದರೇ ತಾತ್ಕಾಲಿಕವಾಗಿ ಪಠ್ಯಪುಸ್ತಕಗಳನ್ನು ಈ ಮೌಲವನ್ನು ಪಡೆಯುವ ಅವಕಾಶ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಕ್ಕಿದೆ.

ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದಿದ್ದರು ಕಲಿಕೆ

ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದಿದ್ದರು ಕಲಿಕೆ

ಕರ್ನಾಟಕ ಪಠ್ಯಪುಸ್ತಕ ಸಂಘ ಎಲ್ಲಾ ಪುಸ್ತಕಗಳನ್ನೂ ಆನ್‌ಲೈನ್ ಮೂಲಕ ಒದಗಿಸಿದೆ. ವಿದ್ಯಾರ್ಥಿಯು ಯಾವ ತರಗತಿಯಲ್ಲಿ ಓದುತ್ತಿದ್ದಾನೆ. ಯಾವ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಯಾವ ಪಠ್ಯಪುಸ್ತಗಳು ಬೇಕು ಎಂಬುದನ್ನು ಆಯ್ಕೆ ಮಾಡುವ ಮೂಲಕ ಡೌನ್‌ಲೋಡ್ ಮಾಡಿಕೊಂಡಿಕೊಳ್ಳಬಹುದಾಗಿದೆ. ಆ ಮೂಲಕ ತಾತ್ಕಾಲಿಕವಾಗಿ ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದಿದ್ದರು ಕಲಿಕೆಗೆ ಅನುವಾಗುವಂತೆ ಪಠ್ಯಪುಸ್ತಕವನ್ನು ರೆಫರ್ ಮಾಡಬಹುದಾಗಿದೆ.

KTBSನಲ್ಲಿ ಪಠ್ಯ ಪುಸ್ತವನ್ನು ಡೌನ್‌ಲೋಡ್ ಮಾಡೋದು ಹೇಗೆ..?

KTBSನಲ್ಲಿ ಪಠ್ಯ ಪುಸ್ತವನ್ನು ಡೌನ್‌ಲೋಡ್ ಮಾಡೋದು ಹೇಗೆ..?

ಗೂಗಲ್‌ನಲ್ಲಿ ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆ ಪಠ್ಯಪುಸ್ತಕದ ಹೋಮ್ ೇ ಪೇಜ್ ತೆರೆದುಕೊಳ್ಳುತ್ತದೆ. Choose class / ತರಗತಿ ಹಾಗೂ Choose medium/ ಮಾಧ್ಯಮ, Choose subject / ವಿಷಯ ಎಂಬ ಮೂರು ಅಂಶಗಳಿರುತ್ತವೆ. ತರಗತಿಯನ್ನು ಕ್ಲಿಕ್ ಮಾಡಿದಾಗ 1ನೇ ತರಗತಿಯಿಂದ 10ನೇ ತರಗತಿಯವರಿಗಿನ ಆಯ್ಕೆಯನ್ನು ತೋರಿಸುತ್ತದೆ. ಆ ಬಳಿಕ ಮಾಧ್ಯಮಕ್ಕೆ ಹೋಗಬೇಕು ಅಲ್ಲಿ ಲಾಂಗ್ವೇಜ್ ಮತ್ತು ವಿಷಯದ ಹಾಗೂ ಮಾಧ್ಯಮದ ಆಯ್ಕೆ ಇರಲಿದೆ ಇದನ್ನು ಸರಿಯಾಗಿ ಸೆಲೆಕ್ಟ್ ಮಾಡಬೇಕು. ಆ ಬಳಿಕ ವಿಷಯದ ಆಯ್ಕೆಯನ್ನು ಮಾಡಿದಾಗ ವಿಷಯದ ಹೆಸರು ಸಹಿತ ಡೌನ್‌ಲೋಡ್ ಎಂದು ಹಳದಿ ಬಣ್ಣದಲ್ಲಿ ತೋರಿಸುತ್ತಿರುತ್ತದೆ. ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೇ ನಿಮ್ಮ ಆಯ್ಕೆಯ ಪುಸ್ತಕ ಕೇಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಆಗುತ್ತದೆ.

ಪೋಷಕರು ಮಕ್ಕಳಿಗೆ ಹೇಳಿಕೊಡಲು ಅನುಕೂಲ

ಪೋಷಕರು ಮಕ್ಕಳಿಗೆ ಹೇಳಿಕೊಡಲು ಅನುಕೂಲ

ವಿದ್ಯಾರ್ಥಿಗಳು ಚನ್ನಾಗಿ ಕಲಿಯಲು ಶಾಲೆಗಳು ಹೇಗೆ ಅವಶ್ಯವೋ ಹಾಗೆಯೇ ಪಠ್ಯಪುಸ್ತಕ ಅತ್ಯಮೂಲ್ಯ. ಆದರೆ ಪಠ್ಯಪುಸ್ತಕ ಲಭ್ಯವಿಲ್ಲದ ವೇಳೆಯಲ್ಲಿ ತಾತ್ಕಾಲಿಕವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಯ ಪಠ್ಯವನ್ನು ಡೌನ್‌ಲೋಡ್ ಮಾಡಿಕೊಂಡು ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬಹುದಾಗಿದೆ.

ತರಗತಿಯಲ್ಲಿ ಮಕ್ಕಳ ಕಲಿಕೆಗೆ ಪೂರಕ

ತರಗತಿಯಲ್ಲಿ ಮಕ್ಕಳ ಕಲಿಕೆಗೆ ಪೂರಕ

ಪಠ್ಯಪುಸ್ತಕವನ್ನು ಪೂರೈಸದೇ ಇರೋದು ಸರ್ಕಾರ ದೌರ್ಭಾಗ್ಯವಾಗಲಿದೆ. ಸರ್ಕಾರ ಪಠ್ಯವನ್ನು ಪೂರೈಸೋದು ತಡವಾದ ಕಾರಣದಿಂದಾಗಿ ಶಿಕ್ಷಕರು ಹಿಂದಿನ ವರ್ಷದ ಪಠ್ಯವನ್ನಿಟ್ಟುಕೊಂಡು ಪಾಠವನ್ನು ಬೋಧಿಸುವಂತಾಗಿದೆ. ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯಲ್ಲಿ ಪಠ್ಯಪುಸ್ತಕವನ್ನು ಡೌನ್‌ಲೋಡ್ ಮೂಲಕ ಶಿಕ್ಷಕರ ರೆಫರೆನ್ಸ್‌ಗೆ ಮತ್ತು ಮಕ್ಕಳಿಗೆ ಬೋದಿಸಲು ಅನುಕೂಲವಾಗಿದೆ.

English summary
Karnataka Text Book Row: Students and Parents Can Download Textbook of their own choice at Karnataka Text Book Society in Online. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X