ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತ್ಯವಿಲ್ಲದ ಗಾಯಕ ರಾಜು ಅಜರಾಮರ

By Mahesh
|
Google Oneindia Kannada News

Birthday tribute Musician Raju Ananthaswamy
ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಕಂಠಸಿರಿ ಮೂಲಕ ಎಲ್ಲರ ಮನ ತಣಿಸಿದ ಗಾಯಕ ರಾಜು ಅನಂತಸ್ವಾಮಿಗೆ ನಾಳೆ ಜನ್ಮದಿನ. ಹಸನ್ಮುಖಿ ಗುರುವಿನ ಅಗಲಿಕೆ ಸಂಗೀತ ಲೋಕದ ದುರಂತಗಳಲ್ಲಿ ಒಂದು. ಆದರೆ ನೊಂದ ಮನಸ್ಸಿಗೆ ರಾಜು ಗಾಯನ ಸದಾ ಸಾಂತ್ವನ ನೀಡುವ ಟಾನಿಕ್. ರತ್ನನ ಪದಗಳು, ಮಂಕುತಿಮ್ಮನ ಕಗ್ಗ ಗೀತೆಗಳನ್ನು ರಾಜು ಹಾಡಿದಂತೆ ಮತ್ತೊಬ್ಬರು ಹಾಡಲಾರರು. ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಆತನ ಶಿಷ್ಯರು ಪಣತೊಟ್ಟಿದ್ದಾರೆ.

ಜನಪ್ರಿಯ ಗೀತೆಗಳ ಸರದಾರ: ಎದೆ ತುಂಬಿ ಹಾಡುವೆನು...ಬೇಂದ್ರೆ ಅವರ ಆವು ಈವಿನ...ಕೋಳಿಕೇ ರಂಗ...ಪುಟ್ನಂಜಿ...ಯಾವ ಮೋಹನ ಮುರಳಿ...ಶರೀಫಜ್ಜನ ಗೀತೆಗಳು ಸೇರಿದಂತೆ ಭಾವಗೀತೆ, ಜನಪದ ಗೀತೆಯಳ ಮಾಧುರ್ಯವನ್ನು ಕನ್ನಡ ಜನತೆಗೆ ಸುಮಾರು 15 ವರ್ಷಗಳ ಕಾಲ ಉಣಬಿಡಿಸಿದರು.

ಆಲ್ ರೌಂಡರ್ ರಾಜು: ಅಪ್ಪನಂತೆ ಹಾರ್ಮೋನಿಯಂ ಹಿಡಿದು ರಾಜು ಹಾಡಲು ಕುಳಿತರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಿದ್ದರು. ಹಾರ್ಮೋನಿಯಂ ಅಲ್ಲದೆ, ತಬಲಾ, ಗಿಟಾರ್, ಮ್ಯಾಂಡೋಲಿನ್ ಹಾಗೂ ಕೀಬೋರ್ಡ್ ನಲ್ಲೂ ನಿಷ್ಣಾತರಾಗಿದ್ದ ರಾಜು, ಆಕಾಶವಾಣಿಯಲ್ಲಿ ಏ ಗ್ರೇಡ್ ಕಲಾವಿದರಾಗಿದ್ದರು.

ದೂರದರ್ಶನ, ಉದಯ ಟಿವಿ, ಜೀ ಕನ್ನಡ, ಈ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಭಾವಗೀತೆಗಳಿಗೆ ಸ್ವರ ಸಮ್ಯೋಜನೆ ಮಾಡಿದ್ದಾರೆ. ಬೆಂಗಳೂರು ಸುಗಮ ಸಂಗೀತ ಶಾಲೆ ರೂಪಿಸಿ ಅನೇಕಾನಕ ಶಿಷ್ಯರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ರಾಜುಗೆ ಸಲ್ಲುತ್ತದೆ.

ವಿಡಿಯೋ:
ರಾಜು ಅನಂತಸ್ವಾಮಿ ಜನ್ಮದಿನ ಸ್ಮರಣೆ

ಹಂಪಿ ಉತ್ಸವ, ಸಾರ್ಕ್ ಸಮ್ಮೇಳನ, ವಸಂತ ಹಬ್ಬ, ದಸರಾ ಹಬ್ಬ, ಅಂತಾರಾಷ್ಟ್ರೀಯ ವಾಣಿಜ್ಯ ಸಮಾವೇಶ ಮುಂತಾದೆಡೆ ಅಲ್ಲದೆ, ಆಸ್ಟ್ರೇಲಿಯಾ, ಅಬುದಾಬಿ, ಮಲೇಷಿಯಾ, ನ್ಯೂಜಿಲೆಂಡ್, ಸಿಂಗಪುರ, ಯುಕೆ, ಯುಎಸ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ಜನರ ಮನ ತಣಿಸಿದ್ದಾರೆ.

ಹಲವಾರು ಟಿವಿ, ಸಿನಿಮಾಗಳಲ್ಲೂ ರಾಜು, ಗಾಯಕರಾಗಿ, ನಟರಾಗಿ ಜನಮೆಚ್ಚುಗೆ ಗಳಿಸಿದರೂ, ಜನಪದ ಹಾಗೂ ಭಾವಗೀತೆ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯ. ಅವರ ಸಂಗೀತಸುಧೆ ಜನಮನದಲ್ಲಿ ಸದಾ ಹರಿಯುತ್ತಿರಲಿ.

English summary
Late Kannada Musician Raju Ananthaswamy ruled Kannada Sugama Sangeetha (Light Music) fieldfor more than 15 years. Raju Anathaswamys Birthday ( 19 April) A birth day tribute by her Sister Sunitha Ananthaswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X