ಜೇಸುದಾಸ್‌ರ ಅಹಿಂಸಾ ಈಸ್ಟ್ ಮೀಟ್ಸ್ ಆಲ್ಬಂ ಮಾರುಕಟ್ಟೆಗೆ
ನವದೆಹಲಿ : ಇಂಗ್ಲಿಷ್, ಲ್ಯಾಟಿನ್ ಮತ್ತು ಸಂಸ್ಕೃತ ಭಾಷೆಯ ಹಾಡುಗಳ ಕೆ.ಜೆ. ಜೇಸುದಾಸ್ ಅವರ ಅಹಿಂಸಾ ಈಸ್ಟ್ ಮೀಟ್ಸ್ ಆಲ್ಬಂ ಈಗ ಮಾರುಕಟ್ಟೆಯಲ್ಲಿ ಲಭ್ಯ. ರವೀಂದ್ರನಾಥ್ ಟಾಗೋರ್, ಮಹಾತ್ಮಾ ಗಾಂಧಿ ಮತ್ತು ಜರ್ಮನ್‌ನ ಥಾಮಸ್ ಕೆಂಪಿಸ್ ಅವರ ಸಾಹಿತ್ಯಗಳು ಈ ಆಲ್ಬಂನಲ್ಲಿ ಹಾಡಾಗಿವೆ.
ಆಲ್ಬಂ ಬಿಡುಗಡೆಯಾದದ್ದು ದೆಹಲಿಯ ಅಶೋಕ ಹೋಟೆಲ್‌ನಲ್ಲಿ , ಶುಕ್ರವಾರ ರಾತ್ರಿ. ಅದೇ ಸಂದರ್ಭದಲ್ಲಿ ಜೇಸುದಾಸ್ ಕಚೇರಿ ನಡೆಸಿಕೊಟ್ಟರು. ವೆದರ್ ರಿಪೋರ್ಟ್, ಯಾನ್ನಿ, ಸಂತಾನಾ ಮತ್ತು ಸ್ಟೀಲಿ ಡಾನ್ ಬ್ಯಾಂಡಿನ ಸದಸ್ಯರು ಈ ಆಲ್ಬಂ ತಯಾರಿಯಲ್ಲಿ ಕೈ ಜೋಡಿಸಿದ್ದಾರೆ. ಹಾಡು ಮಾತ್ರವಲ್ಲದೆ ಮಾತನಾಡಿದ ಜೇಸುದಾಸ್ ಪೂರ್ಣ ಆರ್ಕೆಸ್ಟ್ರಾ ಮೇಳ ಇಲ್ಲದೆ ಮೈಕೆಲ್ ಜಾಕ್ಸ್ ಅಥವಾ ಯಾನ್ನಿಯಂತೆ ಭಾರತೀಯರು ಸಂಪೂರ್ಣ ಕಚೇರಿ ನೀಡುವುದು ಸಾಧ್ಯವಾಗಿಲ್ಲ . ದೇವರು ಕೈಗೂಡಿಸಿದರೆ ನಾನು ಪ್ರಯತ್ನಿಸುತ್ತೇನೆ ಎಂದರು.
ಒಂದು ಗಂಟೆ ತಡವಾಗಿ ಆರಂಭವಾದ ಆಲ್ಬಂ ಬಿಡುಗಡೆ ಕಾರ್ಯಕ್ರಮ ಕಾರ್ಗಿಲ್‌ನ ಯುದ್ಧ ಮತ್ತು ಶಾಂತಿ ಹಾಗೂ ಅಹಿಂಸೆಯ ಬಗೆಗಿನ ಮೂರು ನಿಮಿಷಗಳ ವೀಡಿಯೋ ಚಿತ್ರದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರು, ಸಂಗೀತಕ್ಕಾಗಿ ಕಾಯುತ್ತಿದ್ದ ಸಭಿಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಭಾಷಣ ತ್ಯಾಗ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications