ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಭಕ್ತಿ ಗೀತೆಗಳ ಹಿಂದಿ ಆಲ್ಬಂನಲ್ಲಿ ಅಟಲ್‌ ಹಾಗೂ ಅವರ ಕವಿತೆ

By Staff
|
Google Oneindia Kannada News

ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಿಂದಿ ಮ್ಯೂಸಿಕ್‌ ಆಲ್ಬಂ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ !

ಭಯೋತ್ಪಾದಕರ ಸಮಸ್ಯೆ ತಲೆ ಮೇಲೆ ಹೊತ್ತಿದ್ದರೂ, ತಮ್ಮ ಕವಿ ಹೃದಯ ಸಮಸ್ಯೆಗಳನ್ನು ಸಡಿಲ ಮಾಡುವಷ್ಟು ಶಕ್ತ ಎಂದು ನಂಬಿದವರು ವಾಜಪೇಯಿ. ಅವರ ಕವನ ಸಂಕಲನ ‘ಮೇರಿ ಇಕ್ಯಾವನ್‌ ಕವಿತಾಯೇ’ (ನನ್ನ ಐವತ್ತೊಂದು ಕವಿತೆಗಳು) ಪ್ರಕಟವಾದದ್ದೂ ರಾಜಕೀಯ ಜೀವನದ ನಡುವೆಯೇ. ಯಾವುದೋ ಜಟಿಲ ಸಮಸ್ಯೆಯ ಚರ್ಚೆಯಲ್ಲೂ ಹಸನಾದ ಪ್ರಾಸ ಆಶು ಕವನ ಹೊಮ್ಮಿಸಿ, ಪರಿಸ್ಥಿತಿಯ ಸ್ವರೂಪವನ್ನೇ ತಿಳಿಗೊಳಿಸಿರುವ ಹ್ಯೂಮರಿಸ್ಟ್‌ ಕೂಡ ಹೌದು ನಮ್ಮ ಪ್ರಧಾನಿ. ಈಗ ಇವರ ಕವನವೊಂದು ಕೆಸೆಟ್ಟು ತುಂಬಲಿದೆ, ಅದೂ ದೃಶ್ಯಾವಳಿಗಳ ಸಮೇತ. ‘ಮುಘಲ್‌-ಎ-ಆಝಮ್‌’ನಂಥಾ ಚಿತ್ರಕ್ಕೆ ಹಿಟ್‌ ಸಂಗೀತ ನೀಡಿರುವ ಹಳೆ ತಲೆ ನೌಶಾದ್‌ ಅಲಿ ಇದಕ್ಕೆ ಟ್ಯೂನ್‌ ಹಾಕಿದ್ದಾರೆ.

‘ಉನ್‌ಕಿ ಯಾದ್‌ ಕರೇಂ’ ಎಂಬ ವಾಜಪೇಯಿ ವಿರಚಿತ ಕವನ ದೇಶಭಕ್ತಿ ಗೀತೆಗಳ ಆಲ್ಬಂ ಸೇರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಈ ಅಪರೂಪದ ಕೆಸೆಟ್‌ ಒಂದು ಗಿಫ್ಟು. ಇಂಥಾ ಯೋಜನೆಗೆ ಕೈಹಾಕಿದ್ದು ಜಲಗಾವ್‌ನ ಕೇಶವ್‌ ಕಮ್ಯುನಿಕೇಷನ್ಸ್‌ . ಈ ಐಡಿಯಾ ಕೊಟ್ಟದ್ದು ಭಾರತ್‌ ಧಬೋಲ್ಕರ್‌ ಎಂಬುವರು. ವಿರಾಸತ್‌, ಸಝಾಯೇ ಕಾಲಾ ಪಾನಿಯಂಥ ಚಿತ್ರಗಳನ್ನು ನಿರ್ದೇಶಿಸಿದ ಪ್ರಿಯದರ್ಶನ್‌ ಈ ಆಲ್ಬಂನ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Mughal-E-Azham fame music director Naushad Ali ವಾಜಪೇಯಿ ಒಪ್ಪಿದ್ದು ಹೇಗೆ?
ತಮ್ಮ ಮಂಡಿ ನೋವಿನ ಶಸ್ತ್ರಚಿಕಿತ್ಸೆ ನಂತರ ಮುಂಬಯಿಯ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ವಿರಮಿಸುತ್ತಿದ್ದರು ವಾಜಪೇಯಿ. ಬಿಗಿ ಪೊಲೀಸ್‌- ರಕ್ಷಣಾ ಪಹರೆಯನ್ನು ಒಪ್ಪಿಸಿ, ಒಳ ಬಂದವರು ಹಿರಿಯ ಸಂಗೀತ ನಿರ್ದೇಶಕ ನೌಶಾದ್‌. ಕೈಯಲ್ಲಿ ಪುಟ್ಟ ಟೇಪ್‌ ರೆಕಾರ್ಡರ್‌. ಉಭಯ ಕುಶಲೋಪರಿಯ ನಂತರ ಟೇಪ್‌ ರೆಕಾರ್ಡರ್‌ ಪ್ಲೇ ಮಾಡಿದರು ನೌಶಾದ್‌. ವಾಜಪೇಯಿ ಮೊಗದಲ್ಲಿ ನಗು. ಅವರ ಕವನ ‘ಉನ್‌ಕಿ ಯಾದ್‌ ಕರೇಂ’ ಹಾಡಾಗಿತ್ತು.
ಅಂದು ನೌಶಾದ್‌ ಹೇಳಿದ್ದು- ‘ರಾಜಕಾರಣ, ಗದ್ದುಗೆ ಶಾಶ್ವತವಲ್ಲ. ನಿಮ್ಮ ಕವಿ ಹೃದಯ ಮಾತ್ರ ಸದಾ ನಿಮ್ಮದೇ. ನೀವು ಹೊಸೆದ ಕವನಗಳು ಸದಾ ಜೀವಂತ. ಅವು ಸುಮ್ಮನೆ ಪುಸ್ತಕದಲ್ಲೇ ಹುದುಗಿಹೋಗಬಾರದು. ಜನ ಅವನ್ನು ಕೇಳಬೇಕು. ಅರ್ಥ ಅನುಭವಿಸಬೇಕು’. ತಕ್ಷಣವೇ ಅದನ್ನು ಕೆಸೆಟ್ಟಿಗೆ ತುಂಬಿಸಿ, ಮಾರುಕಟ್ಟೆಗೆ ಬಿಡಲು ವಾಜಪೇಯಿ ಒಪ್ಪಿದರು.

ಈಗ ಅದಕ್ಕೆ ಆಲ್ಬಂ ಸ್ವರೂಪ ಕೊಡುವ ಯತ್ನಗಳು ನಡೆದಿವೆ. ತಮ್ಮ ದಿನದ ಎರಡು ತಾಸನ್ನು ಕೊಡುವಂತೆ ಪ್ರಧಾನಿ ಮುಂದೆ ಪ್ರಿಯದರ್ಶನ್‌ ಇಟ್ಟ ಕೋರಿಕೆಗೂ ವಾಜಪೇಯಿ ಅಸ್ತು ಅಂದಿದ್ದಾರೆ.

ಕೆಸೆಟ್ಟಿನಲ್ಲಿ....

ಪುಟ್ಟ ಹುಡುಗಿ. ಬಡ ಹುಡುಗಿ. ಚಿಕ್ಕಾಸಿಗೆ ಏನೆಲ್ಲಾ ಪರದಾಟ. ಸ್ವಾತಂತ್ರ್ಯ ದಿನಾಚರಣೆಯ ದಿನ ರಾಷ್ಟ್ರಧ್ವಜಗಳನ್ನು ಮಾರಲು ಆಕೆ ಪಡುತ್ತಿರುವ ಪಡುಪಾಟಲು ಅಷ್ಟಿಷ್ಟಲ್ಲ. ಇದು ವಾಜಪೇಯಿ ಕವನದ ಸಾರ. ಆ ಹುಡುಗಿ ಧ್ವಜವನ್ನು ವಾಜಪೇಯಿ ಅವರಿಗೆ ಕೊಡುವ ಮೂಲಕವೇ ಹಾಡು ಮುಗಿಯುತ್ತದೆ. ಅಂದಹಾಗೆ ಭೈರವಿ ರಾಗದ ಈ ಹಾಡನ್ನು ಎಪ್ಪತ್ತಕ್ಕೂ ಹೆಚ್ಚು ಜನರ ವಾದ್ಯವೃಂದ ಸಾಥಿಯಲ್ಲಿ ಹಾಡಿರುವವರು ಹರಿಹರನ್‌!

Have you read Ataljis poems?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X