ಹುಡುಗಿ ನಿನ್ನ ನೆನಪಲ್ಲಿ ಇಷ್ಟಿಷ್ಟೇ ಸವೆಯುತ್ತಿರುವ...

Posted By:
Subscribe to Oneindia Kannada

ನಿನ್ನ ಹೆಸರು ಕೂಡ ಬರೆಯಬೇಕು ಅಂತನ್ನಿಸ್ತಿಲ್ಲ. ಊರಿಗೆ ಹೊರಟ ನಿಂತು, ಬಸ್ ಟಿಕೆಟ್ ನ ಬ್ಯಾಗ್ ನೊಳಗೆ ಹಾಕಿಕೊಳ್ಳಬೇಕು ಅನ್ನೋಷ್ಟರಲ್ಲಿ ಫೋನ್ ಮಾಡಿದ ನೀನು, ಊರಿಗೆ ಬರೋದು ಬೇಡ. ನನ್ನನ್ನು ನೋಡಕ್ಕೂ ಬರಬೇಡ. ನನ್ನ ಮನೆಯವರು ಹುಡುಗನ್ನ ಗೊತ್ತು ಮಾಡಿದ್ದಾರೆ ಎಂದು ಒಂದೇ ಉಸಿರಿಗೆ ಹೇಳಿ ಫೋನಿಟ್ಟು ಬಿಟ್ಟೆ.

ಒಂದು ಕ್ಷಣಕ್ಕೆ ಈಗಲೇ ಈ ಜಗತ್ತು ಏಕೆ ಕೊನೆಯಾಗಬಾರದು ಅನ್ನಿಸಿತು ಕಣೆ. ಅಮ್ಮನಿಗೆ ಹೇಳಿ ಬಂದಿದ್ದೆ, ಈ ಸಲ ಊರಿಗೆ ಬಂದಾಗ ನಿನ್ನ ಸೊಸೆಯನ್ನು ತೋರಿಸ್ತೀನಿ. ಈಗಿರುವ ಮನೆಯನ್ನು ಕೆಡವಿ ದೊಡ್ಡದನ್ನು ಕಟ್ಟೋಣ ಅಂತ. ಆದರೆ ಇಪ್ಪತ್ತು-ಮೂವತ್ತು ಸೆಕೆಂಡ್ ಗಳ ಒಂದು ಫೋನ್ ಕಾಲ್ ನಲ್ಲಿ ಇಡೀ ಕನಸಿನ ಗೋಪುರವನ್ನೇ ಕೆಡವಿ ಬಿಟ್ಟೆಯಲ್ಲಾ!

ಕಡ್ಲೇಕಾಯಿ ಪರಿಷೆಗೆ ಕೆ.ಸಿ.ದಾಸ್ ಸ್ವೀಟ್ಸ್ ಮುಂದೆ ನಿನಗಾಗಿ ಕಾಯುವ ಕರ್ಪೂರ

ನಾನು ಊರಿಗೇನೋ ಬರಲಿಲ್ಲ. ಆದರೆ ಕೆಲಸಕ್ಕೆ ಹೋಗದಿರುವುದಂತೂ ಸಾಧ್ಯವಿಲ್ಲವಲ್ಲ. ಪ್ರತಿ ದಿನ ಸಮಯಕ್ಕೆ ಸರಿಯಾಗಿ ನನ್ನ ದೇಹವನ್ನು ಎಳೆದುಕೊಂಡು ಅಲ್ಲಿವರೆಗೆ ಹೋಗ್ತೀನಿ. ಮನೆಯಿಂದ ಆಫೀಸಿನವರೆಗೆ ನಡೆದುಕೊಂಡೇ ಹೋಗ್ತೀನಿ ಆದ್ದರಿಂದ ದಾರಿಯುದ್ದಕ್ಕೂ ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರು, ಕೈ ಕೈ ಹಿಡಿದು ನಗುತ್ತಿರುವ ಹೊಸ ಪ್ರೇಮಿಗಳು ಕಾಣ್ತಾರೆ.

Love

ಈ ಪ್ರೀತಿ-ಪ್ರೇಮ ಎಲ್ಲ ಬೇಡ ಎಂದು ಹೇಳಿಬಿಡೋಣ ಅಂತ ಕಾಲು ಆ ಕಡೆ ಎಳೆಯುತ್ತೆ. ಆದರೆ ಮನಸ್ಸು ಗದರತ್ತೆ. ಎಲ್ಲರೂ ನಿಮ್ಮ ಹಾಗೇ ಇರಲ್ಲ. ಬಾಯಿ ಮುಚ್ಚಿಕೊಂಡು ನಿನ್ನ ದಾರಿ ನೋಡಿಕೋ ಅಂತ. ಅದೂ ನಿಜ ಅಂದುಕೊಂಡು ಸುಮ್ಮನಾಗ್ತೀನಿ.

ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!

ಆದರೂ ಅದ್ಯಾಕೋ ನಿನ್ನ ಮೇಲೆ ಸಿಟ್ಟೂ ಬರ್ತಿಲ್ಲ. ಅಷ್ಟೊಂದು ಪ್ರೀತಿಸಿಬಿಟ್ಟೆನಾ ಅಂತ ಈಗ ನನಗೇ ಗಾಬರಿಯಾಗುತ್ತದೆ. ಇರಲಿ ಬಿಡು, ನಿನ್ನ ಕಾಲ್ ಬರುತ್ತದೆ. ಮತ್ತೊಂದು ಸಲ ಮನಸು ಬದಲಿಸ್ತಿಯಾ ಅಂತ ಕಾಯ್ತಾ ಇರ್ತೀನಿ.

ಇಷ್ಟಿಷೇ ಸವೆಯುತ್ತಿರುವ, ಇನ್ನೂ ನಿನ್ನವನೇ
ಸ...ನಂದ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Love letter by a boy in a disappointment of denial by girl friend.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ