ಬೆಂಗಳೂರಿನಲ್ಲಿ ಕವಲು ವಿಚಾರಗೋಷ್ಠಿ

ವಿಚಾರ ಗೋಷ್ಠಿಯಲ್ಲಿ ವಿವಿಧ ಲೇಖಕರಿಂದ ಪ್ರಬಂಧ ಮಂಡನೆ ಹಾಗೂ ಕವಲು ಕಾದಂಬರಿಯ ಎಂಟನೇ ಮುದ್ರಣದ ಪ್ರತಿ ಬಿಡುಗಡೆ ಸಮಾರಂಭವಿರುತ್ತದೆ.
ಡಾ. ಎಸ್ ಆರ್ ಲೀಲಾ, ಮೀರಾ ಫಡ್ಕೆ, ಡಾ. ಸುಮತೀಂದ್ರ ನಾಡಿಗ, ಶತಾವಧಾನಿ ಆರ್ ಗಣೇಶ್, ಸುರೇಶ್ ಕೃಷ್ಣಮೂರ್ತಿ ಅವರು ಪ್ರಬಂಧ ಮಂಡಿಸಲಿದ್ದಾರೆ. ಇದರ ಜೊತೆಗೆ ಸಾಹಿತಿ ಡಾ. ಎಸ್ ಎಲ್ ಭೈರಪ್ಪ ಅವರೊಡನೆ ಸಂವಾದ ಕಾರ್ಯಕ್ರಮವಿರುತ್ತದೆ.
ಸ್ಥಳ: ಆರ್ ವಿ ಟೀಚರ್ಸ್ ಕಾಲೇಜು, ಜಯನಗರ 2ನೇ ಬ್ಲಾಕ್, ಬೆಂಗಳೂರು
ದಿನಾಂಕ/ದಿನ: 08/08/2010, ಭಾನುವಾರ
ಸಮಯ: ಸಂಜೆ 4 ಗಂಟೆ
ಛಂದದಿಂದ ಹೊಸ ಪುಸ್ತಕಗಳು : ಎಸ್.ಸುರೇಂದ್ರನಾಥ್ ಅವರ 'ಕಟ್ಟು ಕಥೆಗಳು', ಗುರುಪ್ರಸಾದ್ ಕಾಗಿನೆಲೆ ಅವರ 'ಗುಣ' ಮತ್ತು ವಸುಧೇಂದ್ರ ಅವರ 'ಹರಿಚಿತ್ತ ಸತ್ಯ' ಕೃತಿಗಳು ಇದೀಗ ಅಂಗಡಿಗೆ ಬಂದಿದೆ. ಪುಸ್ತಕಗಳನ್ನು ಎಂದಿನಂತೆ ಪ್ರೀತಿಯಿಂದ ಕೈಗೆತ್ತಿಕೊಳ್ಳಬೇಕೆಂದು ಛಂದ ಪುಸ್ತಕ ಪ್ರಕಾಶನದ ಪ್ರಕಟಣೆ ತಿಳಿಸಿದೆ.












Click it and Unblock the Notifications