ಮೈಸೂರಿನಲ್ಲಿ ಏಳು ದಿನಗಳ ಪುಸ್ತಕ ಕುಂಭಮೇಳ

ನ್ಯಾಷನಲ್ ಬುಕ್ ಟ್ರಸ್ಟ್ ನವದೆಹಲಿ, ತುಳುನಾಡು ಪ್ರಕಾಶನ, ಕರ್ನಾಟಕ ನಾಟಕ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಒಟ್ಟು ಸುಮಾರು ಒಂದು ಸಾವಿರ ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಮೇಳದ ವಿಶೇಷತೆಯೆಂದರೆ ಕೇವಲ ಕನ್ನಡ ಪುಸ್ತಕಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಸಾಹಿತ್ಯ ಸಮ್ಮೇಳನ ನಡೆಯುವ ಗಾತ್ರದಲ್ಲಿ ಪುಸ್ತಕ ಮೇಳ ಇರುತ್ತದೆ ಎಂದು ಸಿದ್ಧಲಿಂಗಯ್ಯ ಹೇಳಿದ್ದಾರೆ. ಮೇಳದಲ್ಲಿ ಭಾಗವಹಿಸುವ ಪ್ರಕಾಶಕರು ಮತ್ತು ಅವರ ಸಿಬ್ಬಂದಿ ವರ್ಗಕ್ಕೆ ಊಟ ವಸತಿ ಮತ್ತು ಮೈಸೂರಿಗೆ ಬಂದು ಹೋಗುವ ಖರ್ಚು ವೆಚ್ಚಗಳನ್ನು ಪ್ರಾಧಿಕಾರ ಕೊಡುತ್ತದೆ. ಮೇಳದ ಏಳೂದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವವು. ಪ್ರಖ್ಯಾತ ಸಾಹಿತಿಗಳು ಮತ್ತು ಚಿಂತಕರು ಮತ್ತು ಪುಸ್ತಕ ಪ್ರಿಯರ ಸಾಗರ ಈ ಹಬ್ಬಕ್ಕೆ ಸಾಕ್ಷಿಯಾಗಲಿದೆ. ಮೇಳವು ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಜರಗುತ್ತದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications