• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.27ಕ್ಕೆ ಲತಾ ಮಂಗೇಶ್ಕರ್ ಪುಸ್ತಕ ಲೋಕಾರ್ಪಣೆ

|
Google Oneindia Kannada News
ಬೆಂಗಳೂರು, ಅ. 23 : ಬೆಂಗಳೂರು: ವಿಜಯ ಕರ್ನಾಟಕ ಸುದ್ದಿ ಸಂಪಾದಕ ವಸಂತ ನಾಡಿಗೇರ ಬರೆದಿರುವ ಲತಾ ಮಂಗೇಶ್ಕರ್ ಜೀವನ ಚರಿತ್ರೆ 'ಹಾಡು ಹಕ್ಕಿಯ ಹೃದಯಗೀತೆ" ಪುಸ್ತಕವು ಅಕ್ಟೋಬರ್ 27ರಂದು ಲೋಕಾರ್ಪಣೆಗೊಳ್ಳಲಿದೆ.

ಆನಂದರಾವ್ ವೃತ್ತದ ಬಳಿ ಇರುವ ಕೆಇಬಿ ಎಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಸಂಜೆ 6.30ಕ್ಕೆ ಖ್ಯಾತ ಹಿನ್ನೆಲೆ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಗೀತ ಗಾಯನ: ಪುಸ್ತಕ ಬಿಡುಗಡೆಗೂ ಮುನ್ನ ಖ್ಯಾತ ಗಾಯಕಿ ಶ್ರೀಮತಿ ಚಂದ್ರಿಕಾ ಗುರುರಾಜ್ ಮತ್ತು ತಂಡದವರಿಂದ ಲತಾ ಹಾಡಿರುವ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
***
'ಹಾಡು ಹಕ್ಕಿಯ ಹೃದಯಗೀತೆ'ಯ ಸುತ್ತ ಮುತ್ತ..

* ಈ ಪುಸ್ತಕವು ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ. ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ ಕುರಿತಾದ, ದಕ್ಷಿಣ ಭಾರತದ ಮೊದಲ ಪುಸ್ತಕ ಇದು.
*ಇದು ವಿಜಯಕರ್ನಾಟಕದಲ್ಲಿ 50 ವಾರ ಪ್ರಕಟವಾದ ಲೇಖನ ಮಾಲಿಕೆಯ ಸಂಗ್ರಹ. ಲೇಖನಗಳನ್ನು ಪರಿಷ್ಕರಿಸಿ, ಸಾಕಷ್ಟು ಬಿಗಿಗೊಳಿಸಿ, ಅಪ್‌ಡೇಟ್ ಮಾಡಿ, ಹೆಚ್ಚುವರಿ ಹಾಗೂ ಇತ್ತೀಚಿನ ಮಾಹಿತಿಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ತರಲಾಗಿದೆ.
*215ಕ್ಕೂ ಮಿಕ್ಕಿ ಪುಟಗಳುಳ್ಳ ಈ ಪುಸ್ತಕವನ್ನು ಸುಮುಖ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಮುನ್ನುಡಿಯಲ್ಲಿ ಲತಾ ಮಂಗೇಶ್ಕರ್ ಅವರ ಒಟ್ಟಾರೆ ವ್ಯಕ್ತಿತ್ವದ ಸ್ಥೂಲ ಚಿತ್ರಣವಿದೆ.


ಪುಸ್ತಕವು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿದೆ.

1. ಜನನ-ಯೌವನ:
ಲತಾ ಮಂಗೇಶ್ಕರ್ ಅವರ ಪೂರ್ವಿಕರು, ಅವರ ತಂದೆ ಹಾಗೂ ಬಾಲ್ಯ ಜೀವನದ ಬಗ್ಗೆ ವಿವರ.
2. ಸಂಘರ್ಷ-ಉತ್ಕರ್ಷ: ಲತಾ ಅವರು ನಟಿಯಾಗಿ ಚಿತ್ರರಂಗ ಸೇರಿದ್ದು, ಬಳಿಕ ಗಾಯಕಿಯಾಗಿ ನೆಲೆಯೂರಲು ನಡೆಸಿದ ಸಂಘರ್ಷ. ಜನಪ್ರಿಯ ಗಾಯಕಿಯಾಗಿದ್ದು, ಹಲವು ಸಂಗೀತ ನಿರ್ದೇಶಕರೊಟ್ಟಿಗೆ ಕಾರ್ಯ ನಿರ್ವಹಣೆ, ಕೆಲವರೊಡನೆ ವೃತ್ತಿ ಸಂಬಂಧ ಮತ್ತು ವಿರಸ, ಗಾಯಕರು ಹಕ್ಕುಗಳಿಗಾಗಿ ವಿಶೇಷವಾಗಿ ಸಂಭಾವನೆ ವಿಚಾರದಲ್ಲಿ ಹೋರಾಟ, ಲತಾ ಅನುಭವಿಸಿದ ಒತ್ತಡ-ಪ್ರಭಾವ ಮತ್ತು ಆರೋಪ-ಅಪವಾದಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿಗಳಿವೆ.
3. ಮನೆ-ಮನ: ಲತಾ ಅವರು ಹಲವು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆಲವು ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ಒಂದೊಂದು ಹಾಡಿಗೂ ಒಂದೊಂದು ಕಥೆ ಇರುವುದನ್ನು ಹೇಳಿದ್ದಾರೆ. ಅದರ ವಿವರ ಜತೆಗೆ ಅವರ ಮನೆ ಬಗ್ಗೆ ಮಾಹಿತಿ..
4. ಲತಾ-ಜೀವಂತ ದಂತ ಕಥಾ: ಲತಾ ಅವರ ಕೆಲವು ವೈಯಕ್ತಿಕ ಆಸಕ್ತಿಗಳು, ಹವ್ಯಾಸಗಳು, ವ್ಯಕ್ತತ್ವ ಕುರಿತ ವಿವರಗಳಿವೆ.
5. ಲತಾ ಕುರಿತ ಈ ವಿಷಯಗಳು ಗೊತ್ತಾ? : ಲತಾ ಅವರು ಹಾಡಿರುವ ಗೀತೆಗಳು, ಯುಗಳ ಗೀತೆ, ಕೆಲವು ಸ್ವಾರಸ್ಯಕರ ಸಂಗತಿಗಳ ವಿವರಗಳು ಪುಸ್ತಕದಲ್ಲಿ ಇವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X