ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿನ್ನಾ ಕುರಿತ ಪ್ರತಾಪ್ ಸಿಂಹ, ಜಿಬಿ ಹರೀಶ್ ಪುಸ್ತಕ

By Staff
|
Google Oneindia Kannada News

Pratap Simha
ದೇಶ ವಿಭಜನೆಯ ಖಳನಾಯಕ ಎಂದೇ ಕುಖ್ಯಾತರಾಗಿರುವ ಮಹಮದ್ ಅಲಿ ಜಿನ್ನಾ ಬಗ್ಗೆ ಒಂದೇ ಒಂದು ಒಳ್ಳೆಯ ಮಾತನ್ನೂ ಆಡುವ ಪರಿಸ್ಥಿತಿ ಭಾರತದಲ್ಲಿರಲಿಲ್ಲ. ಆದರೆ ಆಗಿನ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಆಡ್ವಾಣಿಯವರು 2005ರಲ್ಲಿ ಪಾಕಿಸ್ತಾನಕ್ಕೆ ನೀಡಿದ ಭೇಟಿಯ ಸಂದರ್ಭದಲ್ಲಿ, “1947, ಅಗಸ್ಟ್ 11ರಂದು ಪಾಕಿಸ್ತಾನದ ಪ್ರಜಾಪ್ರತಿನಿಧಿ ಸಭೆಯನು ಉದ್ದೇಶಿಸಿ ಮಾಡಿದ್ದ ಭಾಷಣ"ವನ್ನು ಆಧಾರವಾಗಿಟ್ಟುಕೊಂಡು “ಜಿನ್ನಾ ಕೂಡ ಸೆಕ್ಯುಲರ್ಆಗಿದ್ದರು" ಎಂಬ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಅದರಲ್ಲೂ ಹಿಂದುತ್ವವಾದಿ ಪಕ್ಷದ ಮೇರು ನಾಯಕನೇ ಜಿನ್ನಾರನ್ನು ಸೆಕ್ಯುಲರ್ ಎಂದು ಕರೆದಾಗ ಆರೆಸ್ಸೆಸ್ ಎಷ್ಟು ಮುನಿಸಿಕೊಂಡಿತೆಂದರೆ ಆಡ್ವಾಣಿಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿಯುವಂತೆ ಮಾಡಿತು. ಆನಂತರ ಯಾರೂ ಅಂತಹ ಸಾಹಸಕ್ಕೆ ಕೈಹಾಕಲಿಲ್ಲ.

2009ರಲ್ಲಿ, “ಜಿನ್ನಾ: ಇಂಡಿಯಾ ಪಾರ್ಟಿಶನ್, ಇಂಡಿಪೆಂಡೆನ್ಸ್" ಎಂಬ ಪುಸ್ತಕ ಬರೆದಿರುವ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು, ಜಿನ್ನಾರನ್ನು ಹೊಗಳಿ ಬಿಜೆಪಿಯಿಂದಲೇ ಉಚ್ಛಾಟಿತರಾಗಿದ್ದಾರೆ. ಇಷ್ಟು ವರ್ಷ ದೇಶ ವಿಭಜನೆ ಸಲುವಾಗಿ ಭಾರತೀಯರು ಯಾವ ವ್ಯಕ್ತಿಯನ್ನು ಖಳನೆಂಬಂತೆ ಕಾಣುತ್ತಾ ಬಂದಿದ್ದರೋ ಅಂತಹ ವ್ಯಕ್ತಿಯ ಬಗ್ಗೆ ಅಖಂಡ ಭಾರತದ ಕನಸ್ಸು ಕಾಣುತ್ತಿರುವ ಬಿಜೆಪಿ ನಾಯಕರೇ ಏಕೆ ಮುಗಿಬಿದ್ದು ಹೊಗಳುತ್ತಿದ್ದಾರೆ? ಹಾಗಾದರೆ ಜಿನ್ನಾ ಯಾರು? ವಾಸ್ತವದಲ್ಲಿ ಜಿನ್ನಾ ನಿಜಕ್ಕೂ ಒಬ್ಬ ರಾಷ್ಟ್ರವಾದಿ, ಸೆಕ್ಯುಲರ್‌ವಾದಿಯಾಗಿದ್ದರೆ?

ಜಿನ್ನಾ ಸಮಕಾಲೀನರು ಬರೆದಿರುವ 50ಕ್ಕೂ ಹೆಚ್ಚು ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತ ಪ್ರತಾಪ್ ಸಿಂಹ ಮತ್ತು ಡಾ. ಜಿ.ಬಿ. ಹರೀಶ್ “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?" ಎಂಬ ಪುಸ್ತಕ ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಆಯಾ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳನ್ನು ದಾಖಲಿಸಿರುವ ಈ ಪುಸ್ತಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಜಿನ್ನಾ-ಗಾಂಧಿ-ನೆಹರು ಅವರ ನಿಜಸ್ವರೂಪದ ಮೇಲೆ ಹೊರಗೆಡವುವ ಪ್ರಯತ್ನ ಮಾಡಿದೆ.

ಸೆಪ್ಟೆಂಬರ್ 24ರಂದು ಅಪರಾಹ್ನ 12.30 ಗಂಟೆಗೆ ಬೆಂಗಳೂರಿನ 'ಭಾರತೀಯ ವಿದ್ಯಾಭವನ"ದಲ್ಲಿ ಖ್ಯಾತ ಗಾಂಧೀವಾದಿ ಮತ್ತೂರು ಕೃಷ್ಣಮೂರ್ತಿಯವರು ಮೊದಲ ಪ್ರತಿ ಸ್ವೀಕರಿಸಿ ಅನೌಪಚಾರಿಕವಾಗಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಹುಬ್ಬಳ್ಳಿಯ 'ಸಾಹಿತ್ಯ ಪ್ರಕಾಶ"ನ ಜಿನ್ನಾ ಕೃತಿಯನ್ನು ಹೊರತರುತ್ತಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X