ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳ ಬಂತು ಹಳ್ಳ ಕೃತಿಗೆ ಅಕಾಡೆಮಿ ಗೌರವ

By Staff
|
Google Oneindia Kannada News

Akademi award to Srinivas Vaidya
ನವದೆಹಲಿ, ಡಿ. 24 : ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಶ್ರೀನಿವಾಸ ವೈದ್ಯ ಸೇರಿ 21 ಮಂದಿ ಸಾಹಿತಿಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು, ತಾಮ್ರದ ನಾಮಫಲಕ ಒಳಗೊಂಡಿರುತ್ತದೆ. ಫೆ. 17 ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಧಾರವಾಡ ಜಿಲ್ಲೆಯವರಾದ ವೈದ್ಯ ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯ ಕೃಷಿಗೆ ಇಳಿದವರು, 'ಹಳ್ಳ ಬಂತು ಹಳ್ಳ' ( 2004) ಅವರ ಚೊಚ್ಚಲ ಕಾದಂಬರಿಯಾಗಿದೆ. ಆಧುನಿಕ ಕನ್ನಡ ಕಾದಂಬರಿ ಇತಿಹಾಸದಲ್ಲಿ ಅತ್ಯಂತ ಮನೋಜ್ಞ ಕೃತಿ ಎಂಬ ಮನ್ನಣೆಗೆ ಪಾತ್ರವಾದ ಕೃತಿ ಇದಾಗಿದೆ. ಹಾಸ್ಯ ಸಾಹಿತ್ಯ ಮತ್ತು ಸಣ್ಣಕತೆಗಳ ಮೂಲಕ ಬೆಳಕಿಗೆ ಬಂದ ವೈದ್ಯ ಅವರು, ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರು. ಇದೀಗ ವೈದ್ಯ ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ನರಗುಂದ-ನವಲಗುಂದ ತಾಲ್ಲೂಕಿನ ಬ್ರಾಹ್ಮಣ ಕುಟುಂಬಗಳ ನೋವು- ನಲಿವು ತಲ್ಲಣಗಳನ್ನು ಒಳಗೊಂಡ ಈ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ. 'ತಲೆಗೊಂದು ಥರಾ ಥರಾ' ಮತ್ತು 'ಮನಸುಬರಾಯನ ಮನಸ್ಸು' ಅವರ ಇನ್ನೆರಡು ಪ್ರಮುಖ ಕೃತಿಗಳಾಗಿವೆ. 'ಅಪರಂಜಿ' ಪತ್ರಿಕೆಗೆ ಸೀನು ಎಂಬ ಕಾವ್ಯನಾಮದಡಿ ಅವರು ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದ ಇತರ ಸಾಹಿತಿಗಳ ಹೆಸರುಗಳು.

* ಅಶೋಕ್ ಕಾಮತ್ (ಕೊಂಕಣಿ)
* ರೀಟಾ ಚೌಧರಿ (ಅಸ್ಲಾಮಿಸ್)
* ಬಿದ್ಯಾಸಾಗರ್ ನಾರ್ಝರಿ (ಬೋಡೋ)
* ಗೋವಿಂದ ಮಿಶ್ರಾ (ಹಿಂದಿ)
* ಶ್ಯಾಮಮನೋಹರ್ ( ಮರಾಠಿ)
* ಮಿತ್ತೆರ್ ಸೈ ಮೀತ್ (ಪಂಜಾಬಿ)
* ಶರತ್ ಕುಮಾರ್ ಬಂಡೋಪಾಧ್ಯಯ (ಬಂಗಾಲಿ)
* ಚಂಪಾ ಶರ್ಮಾ (ಡೋಗ್ರಿ)
* ಎ ಒ ಮೆಮ್ ಚೌಬಿ (ಮಣಿಪುರಿ)
* ಪ್ರಮೋದ್ ಕುಮಾರ್ ಮೊಹಂತಿ (ಒರಿಯಾ)
* ಓಂ ಪ್ರಕಾಶ್ ಪಾಂಡೆ (ಸಂಸ್ಕೃತ)
* ಜಯಂತ್ ಪರ್ಮರ್ (ಉರ್ದು)
* ಸುಮನ್ ಸಹಾ (ಗುಜರಾತಿ)
* ಶ್ರೀ ಕೀರಟ್ (ನೇಪಾಳಿ)
* ದಿನೇಶ ಪಂಚಾಳ್ (ರಾಜಸ್ತಾಮ)
* ಬಾದಲ್ ಹಂಬಮ್ (ಸಂತಾಲಿ)
* ಮೆಲನ್ ಮನಿ ಪೊನ್ನು ಸ್ವಾಮಿ (ತಮಿಳು)
* ಗುಲಾಂ ನಭೀ ಶ್ಯೂಕಾನಿ (ಸಿಂಧಿ)
* ಕೆ ಪಿ ಅಪ್ಪನ್ (ಮಲೆಯಾಳಿ)

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X