ಛಂದ ಪುಸ್ತಕ ಐದು ವರ್ಷಗಳಿಂದ ಪ್ರಕಾಶಿಸುತ್ತಿದೆ!

ಸಿಡಿ ಮತ್ತು ಬ್ರೈಲ್ ಲಿಪಿಯಲ್ಲಿ ಕೂಡ ಪುಸ್ತಕ ಪ್ರಕಟಿಸಿರುವ ಛಂದ, ಅತ್ಯುತ್ತಮ ಮುಖಪುಟ ವಿನ್ಯಾಸ ಸ್ಪರ್ಧೆಯನ್ನೂ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಪ್ರವೀಣ್ ಹೆಗಡೆ ಎಂಬುವವರು ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಐದು ವರ್ಷಗಳಲ್ಲಿ 25 ಚಂದನೆಯ ಪುಸ್ತಕಗಳನ್ನು ಪ್ರಕಟಿಸಿ ಬಿಡುಗಡೆಗೊಳಿಸಿರುವ ಛಂದ, ಡಿಸೆಂಬರ್ 25ರಂದು ಸಂಭ್ರಮಾಚರಣೆಯ ಪ್ರಯುಕ್ತ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ನೆಪದಲ್ಲಿ ಪುಸ್ತಕ ಪ್ರೇಮಿಗಳನ್ನು ಮತ್ತೆ ಒಗ್ಗೂಡಿಸುತ್ತಿದೆ. ಇದೇ ಸಂದರ್ಭದಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದೆ.
ಲೇಖಕರು ಮತ್ತು ಪುಸ್ತಕಗಳು : ಸಚ್ಚಿದಾನಂದ ಹೆಗಡೆ ಬರೆದಿರುವ 'ಕಾರಂತಜ್ಜನಿಗೊಂದು ಪತ್ರ', ದಕ್ಷಿಣ ಆಫ್ರಿಕಾದ ತಂಜಾನಿಯಾ ನಿವಾಸಿಯಾಗಿರುವ ಪ್ರಶಾಂತ್ ಬೀಚಿ ಬರೆದಿರುವ 'ಲೇರಿಯೊಂಕ' ಮತ್ತು ವಸುಧೇಂದ್ರ ಬರೆದಿರುವ 'ಹಂಪಿ ಎಕ್ಸ್ ಪ್ರೆಸ್' ಪುಸ್ತಕಗಳು ಡಿಸೆಂಬರ್ 25ರಂದು ಓದುಗರ ಕೈಗೆ ದಕ್ಕಲಿವೆ.
ಕಥೆಗಾರ ಮತ್ತು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ, ಅಮೆರಿಕಾದ ವೈದ್ಯ ಮತ್ತು ಲೇಖಕ ಗುರುಪ್ರಸಾದ್ ಕಾಗಿನೆಲೆ, ವಿಮರ್ಶಕರಾದ ಕೆ.ವಿ. ನಾರಾಯಣ ಮತ್ತು ಸಿರಾಜ್ ಅಹಮದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿವರ ಮತ್ತೊಮ್ಮೆ ಗುರುತಿಸಿಕೊಳ್ಳಿ
ದಿನಾಂಕ : ಗುರುವಾರ, ಡಿಸೆಂಬರ್ 25, 2008
ಸಮಯ : ಬೆಳಿಗ್ಗೆ 10 ಗಂಟೆ
ಸ್ಥಳ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು
'ಕಂಪಲ್ಸರಿ ಬಂದ್ರೆ ಸರಿ' ಎಂದು ಓದುಗ ಮಹಾಶಯರನ್ನು ಸಂಘಟಕರು ಎಚ್ಚರಿಸಿದ್ದಾರೆ!


Click it and Unblock the Notifications
