ಕಸಾಪ ಅಧ್ಯಕ್ಷ ನಲ್ಲೂರರ ಕೃತಿ ನವಿಲ ಜಾಗರ
ಬೆಂಗಳೂರು, ಸೆ.29: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರ 'ನವಿಲ ಜಾಗರ' ಆಯ್ದ ಕವಿತೆಗಳ ಸಂಕಲನವನ್ನು ಮಂಗಳವಾರ(ಸೆ. 30) ನಗರದಲ್ಲಿ ಲೋಕಾರ್ಪಣೆ ಮಾಡಲಾಗುವುದು.
ಕೃತಿ ಬಿಡುಗಡೆ ಮಾಡಲು ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಆಗಮಿಸಲಿದ್ದಾರೆ. ಪುಸ್ತಕ ಕುರಿತು ವಿಮರ್ಶಕ ಕಿ.ರಂ.ನಾಗರಾಜ ಅವರು ಮಾತಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ವಹಿಸಿಕೊಳ್ಳಲಿದ್ದಾರೆ.
ಕವನ ಸಂಕಲನ ಅನಾವರಣಗೊಂಡ ನಂತರ ಮೃತ್ಯುಂಜಯ ದೊಡ್ಡವಾಡ ಮತ್ತು ಸಂಗಡಿಗರಿಂದ ನಲ್ಲೂರರ ಭಾವಗೀತೆಗಳ ಗಾಯನವಿದೆ.
ಸ್ಥಳ: ಶಿವರಾತ್ರೀಶ್ವರ ಕೇಂದ್ರ, ಜೆಎಸ್ಎಸ್ ಸಭಾಂಗಣ
1 ಮುಖ್ಯರಸ್ತೆ, ಜಯನಗರ 8 ನೇ ಬ್ಲಾಕ್, ಬೆಂಗಳೂರು
ಸಮಯ: 5:30ಕ್ಕೆ
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications