‘ಗಾಂಧಿ ಉಪನಿಷತ್’ : ಮತ್ತೂರು ಕೃಷ್ಣಮೂರ್ತಿ ಕೊಡುಗೆ
ಗಾಂಧಿ ತತ್ವ ಹೇಳೋಕೆ ಸುಲಭ, ಅಳವಡಿಸಿಕೊಳ್ಳೋಕೆ ಕಷ್ಟ -ಎಚ್.ಡಿ.ಕುಮಾರಸ್ವಾಮಿ.
ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಮತ್ತೂರು ಕೃಷ್ಣಮೂರ್ತಿ ಅವರ ಗಾಂಧಿ ಉಪನಿಷತ್ ಕೃತಿಯ 7ನೇ ಸಂಪುಟ(ಕನ್ನಡ) ಮತ್ತು 3ನೇ ಸಂಪುಟ(ಇಂಗ್ಲಿಷ್) ಹಾಗೂ ಯಕ್ಷಪ್ರಶ್ನೆ ಎಂಬ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಕುಮಾರಸ್ವಾಮಿ ಮಾತನಾಡಿದರು.
ಗಾಂಧಿ ತತ್ವ-ಸಿದ್ಧಾಂತ ಮತ್ತು ಆದರ್ಶಗಳು ಸಮಾಜಕ್ಕೆ ಬೇಕು. ಇವುಗಳನ್ನು ಪ್ರಸ್ತುತ ರಾಜಕೀಯ ವಲಯದಲ್ಲಿ ಅಳವಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಜಿ.ನಾರಾಯಣ, ಎನ್.ರಾಮಾನುಜ, ಅನಂತ್, ಎಚ್.ಎನ್.ಸುರೇಶ್, ಎಸ್.ಎನ್.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications