ಅಕ್ಷರ,ನವಕರ್ನಾಟಕ,ಅಭಿನವ ಪ್ರಕಾಶನಕ್ಕೆ ರಾಜ್ಯಪ್ರಶಸ್ತಿ
24ಕೃತಿಗಳ ಪ್ರಕಟಣೆಗೆ ನೆರವು, ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ, ಈ ಪ್ರಶಸ್ತಿ 25,000 ರೂಪಾಯಿ ನಗದು ಒಳಗೊಂಡಿದೆ. ನವೆಂಬರ್‌ನಲ್ಲಿ ನಡೆಯುವ ಧಾರವಾಡ ಜಿಲ್ಲಾ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಪುಸ್ತಕ ಸೊಗಸು ಬಹುಮಾನ ಹಾಗೂ ಯುವ ಬರಹಗಾರರಿಗೆ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಹೆಸರುಗಳನ್ನೂ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಪುಸ್ತಕ ಸೊಗಸು ವಿಭಾಗದ ಪ್ರಥಮ ಬಹುಮಾನ ಬೆಂಗಳೂರಿನ ನವಕರ್ನಾಟಕ ಪ್ರಕಾಶನಕ್ಕೆ, ದ್ವಿತೀಯ ಬಹುಮಾನ ಬೆಂಗಳೂರಿನ ಅಭಿನವ ಪ್ರಕಾಶನಕ್ಕೆ, ತೃತೀಯ ಬಹುಮಾನ ತಿಪಟೂರಿನ ಊರುಕೇರಿ ಪ್ರಕಾಶನಕ್ಕೆ ದೊರೆತಿದ್ದು, ದಾವಣಗೆರೆಯ ಪ್ರೇಮಾ ಪ್ರಕಾಶನಕ್ಕೆ ವಿಶೇಷ ಬಹುಮಾನ ಲಭಿಸಿದೆ. 24ಕ್ಕೂ ಹೆಚ್ಚು ಯುವ ಬರಹಗಾರರ ಕೃತಿಗಳ ಮುದ್ರಣಕ್ಕೆ ಆರ್ಥಿಕ ನೆರವು ಲಭಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications