ಸುಕುಮಾರ್ ಕವನ ಸಂಕಲನ ಜೂ.24ರಂದು ಬಿಡುಗಡೆ
ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಅಪರೂಪದ ಕಾರ್ಯಕ್ರಮ. ತಂದೆ, ತಾಯಿ, ಮಗ ರಚಿಸಿದ ಮೂರು ಕೃತಿಗಳ ಬಿಡುಗಡೆ.
ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಶನಿವಾರ ಸಂಜೆ 6.30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭವನ್ನು
ತಾರಿಣಿ ಪ್ರಕಾಶನ(ರಿ.)ಮತ್ತು ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್(ರಿ.) ಜಂಟಿಯಾಗಿ ಆಯೋಜಿಸಿವೆ. ‘ಒಂಟಿ ಹುಡುಗನ ಕನಸುಗಳು’ ಕವನ ಸಂಕಲನವನ್ನು ವಿಜಯಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಬಿಡುಗಡೆ ಮಾಡುವರು.
ಈ ಸಮಾರಂಭದಲ್ಲಿ ಎಚ್.ಆರ್.ಲೀಲಾವತಿ ಅವರ ‘ಚಿಕ್ಕಮ್ಮನ ಕಥೆಗಳು’(ಮಕ್ಕಳ ಕಥಾ ಸಂಕಲನ), ಎಸ್.ಜಿ.ರಘುರಾಂ ಅವರ ‘ಹಬ್ಬದೂಟ ಮತ್ತಿತರ ಮಕ್ಕಳ ನಾಟಕಗಳು’ ಕೃತಿಗಳನ್ನು ಜಾನಪದ ಲೋಕದ ಅಧ್ಯಕ್ಷ ಜಿ.ನಾರಾಯಣ ಬಿಡುಗಡೆ ಮಾಡಲಿದ್ದಾರೆ.
ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್(ರಿ.) ಅಧ್ಯಕ್ಷ ಕೆ.ವಿ.ಮೂರ್ತಿ ಅಧ್ಯಕ್ಷತೆವಹಿಸುವರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಂ.ಡಿ.ಪಲ್ಲವಿ ಅವರು ಸುಗಮ ಸಂಗೀತ ಕಾರ್ಯಕ್ರಮವೂ ಇದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications