ವಸುಧೇಂದ್ರರ 4 ಪುಸ್ತಕಗಳು ಆ.20ರಂದು ಬಿಡುಗಡೆ


ದೃಷ್ಟಿವಿಹೀನರಿಗಾಗಿ ‘ಅದೃಶ್ಯ ಕಾವ್ಯ’ ಹೊರಬರಲಿದ್ದು, ಈ ಪುಸ್ತಕ ‘ಬೆರಳ್ಗಣ್ಣರಿಗೆ’ ಅರ್ಪಿತ

ಬೆಂಗಳೂರು : ಛಂದ ಪುಸ್ತಕವು ವಸುಧೇಂದ್ರ ಅವರ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದು, ಪುಸ್ತಕಗಳ ಬಿಡುಗಡೆ ಸಮಾರಂಭ ಆ.20ರಂದು ನಡೆಯಲಿದೆ.

ನಗರದ ನಯನ ಸಭಾಂಗಣ(ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು)ದಲ್ಲಿ ಭಾನುವಾರ(ಆ.20) ಬೆಳಗ್ಗೆ 10.30ಕ್ಕೆ ಸಮಾರಂಭ ನಡೆಯಲಿದೆ. ಗಿರೀಶ್‌ ಕಾಸರವಳ್ಳಿ, ಓ.ಎಲ್‌. ನಾಗಭೂಷಣ ಸ್ವಾಮಿ ಮತ್ತು ಮಧು ಸಿಂಘಾಲ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಪರ್ಣಾ ಕಾರ್ಯಕ್ರಮ ನಿರೂಪಿಸುವರು.

ವಸುಧೇಂದ್ರ ಅವರ ಅದೃಶ್ಯ ಕಾವ್ಯ (ಬ್ರೈಲ್‌ನಲ್ಲಿ), ಚೇಳು (ಕಥಾ ಸಂಕಲನ), ನಮ್ಮಮ್ಮ ಅಂದ್ರೆ ನಂಗಿಷ್ಟ (ಸುಲಲಿತ ಪ್ರಬಂಧಗಳು), ಮನೇಷೆ (ಕಥಾ ಸಂಕಲನ - ದ್ವಿತೀಯ ಆವೃತ್ತಿ) ಕೃತಿಗಳು ಅಂದು ಬಿಡುಗಡೆಯಾಗಲಿವೆ. ‘ಅದೃಶ್ಯ ಕಾವ್ಯ’ - ಸುಲಲಿತ ಪ್ರಬಂಧಗಳ ಸಂಕಲನವು ಕನ್ನಡ ಬ್ರೈಲ್‌ನಲ್ಲಿ ಮುದ್ರಣಗೊಂಡಿದೆ. ದೃಷ್ಟಿವಿಹೀನರಿಗಾಗಿ ಪ್ರಕಟಿಸಿದ ಈ ಪುಸ್ತಕವನ್ನು ‘‘ಬೆರಳ್ಗಣ್ಣರಿಗೆ’’ ಅರ್ಪಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ಇ-ವಿಳಾಸ : [email protected]

ದೂರವಾಣಿ : 98444 22782

(ದಟ್ಸ್‌ ಕನ್ನಡ ವಾರ್ತೆ)

ಇದನ್ನೂ ಓದಿ :


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+