ಬಿ.ವಿ. ವೈಕುಂಠರಾಜು ಆತ್ಮಕಥನ ‘ತಹತಹ’ ಬಿಡುಗಡೆ


ಚಿತ್ರದುರ್ಗದಲ್ಲಿ ಅಭಿಮಾನಿಗಳ ಮಧ್ಯೆ ಬಿವಿವೈ 70ನೇ ಹುಟ್ಟುಹಬ್ಬಆಚರಣೆ

ಚಿತ್ರದುರ್ಗ : ಹಿರಿಯ ಪತ್ರಕರ್ತ ಡಾ.ಬಿ.ವಿ.ವೈಕುಂಠರಾಜು ಅವರಿಗೀಗ 70ರ ಸಂಭ್ರಮ. ಈ ಸಂದರ್ಭದಲ್ಲಿ ಅವರ ಆತ್ಮಕತೆ ‘ತಹತಹ’ ಬಿಡುಗಡೆಗೊಂಡಿದೆ.

ನಗರದ ಐಎಂಎ ಸಭಾಂಗಣದಲ್ಲಿ ಅಭಿರುಚಿ ವೇದಿಕೆ, ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಶೋಧಕ ಬಿ.ವಿ.ರಾಜಶೇಖರಪ್ಪ, ನವ್ಯ ಸಾಹಿತ್ಯ ಪಂಥವನ್ನು ಚಳವಳಿಯಾಗಿ ಕಟ್ಟಿ ಬೆಳೆಸಿದ ಕೀರ್ತಿ ವೈಕುಂಠರಾಜುಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ತಮ್ಮ ವೃತ್ತಿ ಬದುಕಿನ ನೋವು-ನಲಿವುಗಳನ್ನು ವೈಕುಂಠರಾಜು ಈ ಸಂದರ್ಭದಲ್ಲಿ ನೆನೆದರು. ಕವಿ ಚಂದ್ರಶೇಖರ ತಾಳ್ಯ, ಅಭಿರುಚಿ ವೇದಿಕೆಯ ಪ್ರೊ.ಬಿ.ಪಿ.ವೀರೇಂದ್ರ ಕುಮಾರ್‌, ಪ್ರೊ.ಎಚ್‌.ಶ್ರೀಶೈಲ ಆರಾಧ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವೈಕುಂಠರಾಜು ಅವರ ‘ವಾರಪತ್ರಿಕೆ’, ಕನ್ನಡದ ಪ್ರಯೋಗಶೀಲ ಪತ್ರಿಕೆಗಳಲ್ಲಿ ಒಂದು. ತಮ್ಮ ಹರಿತವಾದ ಲೇಖನಿಯಿಂದ ವೈಕುಂಠರಾಜು, ಓದುಗರಿಗೆ ಪರಿಚಿತರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+