ಕನ್ನಡದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಆತ್ಮಕಥನ
ಮಂಗ್ಳೂರು ವಿಜಯ ಅನುವಾದಿಸಿರುವ ‘ನನ್ನ ಹೆಜ್ಜೆಯ ಗುರುತುಗಳು’ ಏ.17ರಂದು ಬಿಡುಗಡೆ
ಅಂದು ಸಂಜೆ 6ಗಂಟೆಗೆ ನಗರದ ಕನ್ನಡಭವನದ ನಯನ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಮಂಗ್ಳೂರು ವಿಜಯ ಅವರು ಚಂದ್ರಶೇಖರ್ ಅವರ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಮಾರಂಭದಲ್ಲಿ ಮಾಜಿ ಸಚಿವ ಎಂ.ಪಿ.ಪ್ರಕಾಶ್, ಸಿದ್ದರಾಮಯ್ಯ, ಪಿ.ಜಿ.ಆರ್.ಸಿಂಧ್ಯ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಉತ್ತರ ಪ್ರದೇಶದ ಇಬ್ರಾಹಿಂ ಪಟ್ಟಿ ಎಂಬ ಕುಗ್ರಾಮದಲ್ಲಿ ಜನಿಸಿದ ಚಂದ್ರಶೇಖರ್, ಭಾರತದ ಪ್ರಧಾನಿಯಾದ ಕತೆ ಸ್ವಾರಸ್ಯಕರವಾಗಿದೆ. ಸಾಧನೆಯ ಹಾದಿಯಲ್ಲಿ ಬಂದ ಕಲ್ಲುಮುಳ್ಳುಗಳನ್ನು ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ. ಅವರು ಜಯಪ್ರಕಾಶ್ ನಾರಾಯಣ್ ಪ್ರಭಾವಕ್ಕೆ ಒಳಗಾದವರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications