ಡಿ.17 : ರಘುನಾಥ ಚ.ಹ.ರ ಕಥಾಸಂಕಲನ ಬಿಡುಗಡೆ

ಬೆಂಗಳೂರು : ಒಬ್ಬೊಬ್ಬರದು ಒಂದೊಂದು ಕತೆ, ಒಂದೊಂದು ಕವಿತೆ! ಯಾರ ಕತೆ/ಕವಿತೆ ಕೇಳೋದು, ಯಾರದು ಬಿಡೋದು?

ಇಷ್ಟು ಸಾಲದು ಎಂಬಂತೆ, ಇತ್ತೀಚೆಗಂತೂ ಕತೆ/ಕವಿತೆ ರಂಗದಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಈ ಮಧ್ಯೆಯೂ ಒಂದಿಷ್ಟು ಭರವಸೆ ಹುಟ್ಟಿಸುವ ಕತೆಗಾರರು ಕೆಲವರಿದ್ದಾರೆ. ಅಂಥವರಲ್ಲಿ ರಘುನಾಥ ಚ.ಹ. ಒಬ್ಬರು. ಅವರ ಚೊಚ್ಚಲ ಕಥಾ ಸಂಕಲನ, ‘ಹೊರಗೂ ಮಳೆ ಒಳಗೂ ಮಳೆ’ ಭಾನುವಾರ(ಡಿ.17) ನಗರದಲ್ಲಿ ಲೋಕರ್ಪಣೆಗೊಳ್ಳಲಿದೆ.

ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಆರಂಭಗೊಳ್ಳಲಿದೆ. ‘ಸಂಚಯ’ ಸಾಹಿತ್ಯ ಪತ್ರಿಕೆಯ ಪ್ರಹ್ಲಾದ್‌ ಪ್ರಕಾಶನದ ಹೊಣೆಹೊತ್ತಿದ್ದಾರೆ. ಪುಸ್ತಕದ ಬೆಲೆ ರೂ.100. ಅಂದು ರಿಯಾಯಿತಿ ದರದಲ್ಲಿ ಮಾರಾಟವೂ ಇದೆ. ಬಿಡಿಬಿಡಿ ಕತೆಗಳ ಮೂಲಕವೇ ಬೆರಗು ಮೂಡಿಸಿದವರು ರಘುನಾಥ ಚ.ಹ. ಅವರ ಕತೆಗಳನ್ನು ಒಟ್ಟಿಗೆ ಓದುವ ಖುಷಿಯನ್ನು ಮಿಸ್‌ ಮಾಡಿಕೊಳ್ಳಬೇಡಿ.

ಪುಸ್ತಕ ಬಿಡುಗಡೆಯ ನಂತರ ‘ಕಥೆಗಳ ಕತೆಗಳು’ ಎಂಬ ಸಂವಾದ ಸಹಾ ಉಂಟು. ಕತೆಗಾರರಾದ ರಾಘವೇಂದ್ರ ಪಾಟೀಲ, ಎಸ್‌. ದಿವಾಕರ್‌, ಅಶೋಕ ಹೆಗಡೆ, ಆನಂದ ಋಗ್ವೇದಿ, ಮಂಜುನಾಥ್‌ ಲತಾ ಅವರ ಜೊತೆ, ಸಾಹಿತ್ಯ ಪ್ರೇಮಿಗಳು ಸಂವಾದ ನಡೆಸಬಹುದು.

ಕಥಾಲೋಕದ ಮಿಂಚುಗಳನ್ನು, ಸಂಕಷ್ಟಗಳನ್ನು, ಇಷ್ಟಗಳನ್ನು ಕುರಿತು ಮಾತಿಗೆ ಮಾತು ಸೇರಿಸಬಹುದು. ಸಂವಾದವನ್ನು ಚೆಂದಗೊಳಿಸಲು ಸಾಹಿತ್ಯ ಪ್ರೇಮಿಗಳೆಲ್ಲರೂ ಬನ್ನಿ... ಬರಹಗಾರರು ಮತ್ತು ಪ್ರಕಾಶಕರನ್ನು ಉಳಿಸಲು ಪುಸ್ತಕವನ್ನು ಕೊಂಡು ಓದಲು ಸಾಧ್ಯವಾದರೆ ಮನಸ್ಸು ಎಂದು ಪ್ರೀತಿಯಿಂದ ‘ಸಂಚಯ’ದ ಪ್ರಹ್ಲಾದ್‌ ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಸಂಚಯ,
ನಂ.100, 2ನೇ ಮುಖ್ಯರಸ್ತೆ,
8ನೇ ಬ್ಲಾಕ್‌, ಬನಶಂಕರಿ 3ನೇ ಹಂತ,
ಬೆಂಗಳೂರು-85

ದೂರವಾಣಿ : 98440 63514, 98459 78848

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+