ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪ್ರಪಂಚದಲ್ಲೂ ಪೈರಸಿ ಕಾಟ : ಕೋಟ್ಯಂತರ ನಷ್ಟ

By Staff
|
Google Oneindia Kannada News


ಬೆಂಗಳೂರು : ನಕಲು ಪುಸ್ತಕಗಳ ಮಾರಾಟ ನಗರದಲ್ಲಿ ಹೆಚ್ಚುತ್ತಿದೆ. ಹೊಸ ಪುಸ್ತಕ ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ನಕಲು ಪುಸ್ತಕಗಳು ರಾಜಧಾನಿ ನಗರದ ರಸ್ತೆಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಪ್ರಕಾಶಕರ ಗೋಳು ಹೇಳತೀರದು.

ವಿಡಿಯೋ ಮತ್ತು ಸಿ.ಡಿ.ಪೈರಸಿ ತಡೆಗೆ ಸರ್ಕಾರ ಗೂಂಡಾ ಕಾಯ್ದೆ ಜಾರಿಗೆ ತಂದು, ಕಡಿವಾಣ ಹಾಕುತ್ತಿದೆ. ಅದೇ ರೀತಿ ಪುಸ್ತಕ ಪೈರಸಿ ತಡೆಗೂ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು ಎಂದು ಪ್ರಕಾಶಕರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ವಾರ್ಷಿಕ 25ಕೋಟಿ ರೂ.ಗಳ ಆಂಗ್ಲ ಪುಸ್ತಕಗಳ ವಹಿವಾಟು ನಡೆಯುತ್ತದೆ. ಅದರಲ್ಲಿ ಶೇ.40ರಷ್ಟು ಭಾಗವನ್ನು ನಕಲು ಪ್ರಕಾಶಕರು ಬಾಚುತ್ತಿದ್ದಾರೆ. ನಕಲು ಪುಸ್ತಕಗಳು ಹೈದರಾಬಾದ್‌ನಿಂದ ಮುದ್ರಣಗೊಂಡು, ಇಲ್ಲಿಗೆ ಬರುತ್ತವೆ. ಅಧಿಕ ಬೆಲೆಯ ಪುಸ್ತಕಗಳನ್ನು, ಕಳಪೆ ಕಾಗದಲ್ಲಿ ಅಕ್ರಮವಾಗಿ ಮುದ್ರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ಬಲರಾಮ್‌ ಸಾಧ್ವಾನಿ ಆಗ್ರಹಿಸಿದ್ದಾರೆ.

ಕನ್ನಡ ಪುಸ್ತಕಗಳ ನಕಲು ಕಡಿಮೆ : ಇಂಗ್ಲಿಷ್‌ ಪುಸ್ತಕಗಳಿಗೆ ಹೋಲಿಸಿದರೆ, ಕನ್ನಡ ಪುಸ್ತಕಗಳ ಬೆಲೆ ಕಡಿಮೆ. ಹೀಗಾಗಿ ಪೈರಸಿ ಮಾಡುವುದರಿಂದ ಪ್ರಯೋಜನವಿಲ್ಲ ಎಂಬ ಲೆಕ್ಕಾಚಾರ ನಕಲು ಪ್ರಕಾಶಕರದು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X