ಮೇ 9ರಂದು ವಿಶ್ವೇಶ್ವರ ಭಟ್‌ರ ಪುಸ್ತಕ ಬಿಡುಗಡೆ
ರಾಜಭವನದಲ್ಲಿ ಸಮಾರಂಭ, ರವಿ ಬೆಳಗೆರೆ-ಮನು ಬಳಿಗಾರರಿಂದ ಪುಸ್ತಕ ಪರಿಚಯ
ಈ ಕುರಿತ ಸಮಾರಂಭ ರಾಜಭವನದಲ್ಲಿ ಮಧ್ಯಾಹ್ನ 12ಗಂಟೆಗೆ ನಡೆಯಲಿದ್ದು, ರಾಜ್ಯಪಾಲ ಟಿ.ಎನ್.ಚತುರ್ವೇದಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಹಾಗೂ ಬೆಂಗಳೂರು ನಗರಪಾಲಿಕೆ ಉಪ ಆಯುಕ್ತ ಮನು ಬಳಿಗಾರ್ ಪುಸ್ತಕದ ಕುರಿತು ಮಾತನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಭಾಷಾ ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲವೀರರೆಡ್ಡಿ, ಸಾಹಿತಿ ಆರ್.ಎನ್.ಜಯಗೋಪಾಲ್, ದಳಪತಿ ಎನ್.ನರಸಿಂಹಯ್ಯ, ನಾಟಕಕಾರ ಎ.ಎಸ್.ಮೂರ್ತಿ ಮತ್ತು ಲೇಖಕಿ ಎಚ್.ಎಸ್.ಪಾರ್ವತಿ ಅವರನ್ನು ಸನ್ಮಾನಿಸಲಾಗುವುದು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications