ಬಲ್ಲಾಳ ಮತ್ತು ಎಚ್.ಎಸ್.ವಿ ಅವರ ಪುಸ್ತಕ ಬಿಡುಗಡೆ
ಬೆಂಗಳೂರು : ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಮತ್ತು ಕವಿ ಎಚ್.ಎಸ್. ವೆಂಟಕೇಶ ಮೂರ್ತಿ ಅವರ ನೂತನ ಕೃತಿಗಳ ಬಿಡುಗಡೆ ಸಮಾರಂಭ ನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಿತು.
ಸುಂದರ ಪ್ರಕಾಶನ ಹೊರತಂದಿರುವ ಬಲ್ಲಾಳರ ‘ವ್ಯಾಸ ಸಾಹಿತ್ಯ’ ಗ್ರಂಥವನ್ನು ಜ್ಞಾನಪೀಠ ಪುರಸ್ಕೃತ ಅನಂತ ಮೂರ್ತಿ , ವೆಂಕಟೇಶ ಮೂರ್ತಿ ಅವರ ‘ಸಿಂಗಾರಿ’ ಎಂಬ ಸಿಂಗಪುರದ ಪ್ರವಾಸ ಕಥನವನ್ನು ಎಲ್.ಎಸ್.ಶೇಷಗಿರಿ ರಾವ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ, ಯಾವಾಗ ಸಮುದಾಯಕ್ಕೆ ಧಕ್ಕೆ ಉಂಟಾಗುತ್ತದೆಯೋ ಅಲ್ಲಿ ವ್ಯಕ್ತಿಯಾಬ್ಬನ ಸಾಮಾಜಿಕ ಜವಾಬ್ದಾರಿ ಹೆಚ್ಚುವುದರ ಜೊತೆಗೆ ಆದರ್ಶಮಯ ಕಾದಂಬರಿಗಳು ಹುಟ್ಟುತ್ತದೆ. ಬಲ್ಲಾಳರ ಕಾದಂಬರಿಗಳಲ್ಲಿ ಈ ಅಂಶಗಳನ್ನು ಕಾಣಬಹುದು ಎಂದರು.
ಡಾ.ಸುಮತೀಂದ್ರ ನಾಡಿಗ್, ಸುಂದರ ಪ್ರಕಾಶನದ ಗೌರಿ ಸುಂದರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಜುಗಲ್ ಬಂದಿ : ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಗಾಯನ ಮತ್ತು ಅರುಣ್‌ಕುಮಾರ್ ಅವರ ಡ್ರಮ್ ಜುಗಲ್ ಬಂದಿ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು. ಅದಕ್ಕೂ ಮಿಗಿಲಾಗಿ ನಿಜ ಜೀವನದಲ್ಲೂ ಜುಗಲ್‌ಬಂದಿ ಮುಂದುವರೆಸಲು, ಇಬ್ಬರು ನಿರ್ಧರಿಸಿದ್ದಾರೆ. ಪಲ್ಲವಿ ಮತ್ತು ಅರುಣ್‌ಕುಮಾರ್ ಸದ್ಯದಲ್ಲಿಯೇ ಬಾಳಸಂಗಾತಿಗಳಾಗುತ್ತಿರುವ ಬಗ್ಗೆ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
(ಇನ್ಫೋ ವಾರ್ತೆ)












Click it and Unblock the Notifications