ಸುಭಾಷ್‌ ಸಾವಿನ ಸುತ್ತ

Subhash Savina Sutta book review by Srikanth
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಬಗ್ಗೆ ಆಸಕ್ತಿ ಇರುವವರಿಗೆಲ್ಲಾ ಕಾಡುವ ಪ್ರಶ್ನೆಗಳು ಹಲವು. ಸುಭಾಷ್‌ ವಿಮಾನ ಅಪಘಾತದಲ್ಲೇ ಸಾವನ್ನಪ್ಪಿದರೆ ? ಅಥವಾ ಯಾರಾದರೂ ಅವರನ್ನು ಕೊಂದು ಹಾಕಿದರೆ ? ಹೀಗೆ ನೂರಾರು ಆನುಮಾನಗಳು ಇಂದೂ ಕೆಲವರನ್ನು ಕಾಡುತ್ತಿವೆ. ಸುಭಾಷ್‌ ಸಾವನ್ನಪ್ಪಿದ ನಂತರ ಭಗವಾನ್‌ ಎಂಬ ಸ್ವಾಮೀಜಿ ಭಾರತದಲ್ಲಿ ಬಂದು ನೆಲಸಿದ್ದು, ಅವರು ಸಂಪೂರ್ಣ ಸುಭಾಷ್‌ ಅವರ ವ್ಯಕ್ತಿತ್ವವನ್ನೇ ಹೋಲುತ್ತಿದ್ದು ಜನರಲ್ಲಿ ಸುಭಾಷ್‌ ಬದುಕಿದ್ದಾರೆಂಬ ಗುಮಾನಿಗಳು ಅಂದಿನ ಜನರಲ್ಲಿ ಕಾಡುತ್ತಿದ್ದವು. ಈ ಅನುಮಾನಗಳ ಜತೆಗೆ ಕಾಡುತ್ತಿದ್ದ ಮತ್ತೊಂದು ಪ್ರಶ್ನೆ 'ಧೀರೋದ್ಧಾತ ನಾಯಕ'ನಾಗಿದ್ದ ಸುಭಾಷ್‌ ಬದುಕಿದ್ದರೂ 'ಇಂಥ ಬಾಳನ್ನೇಕೆ' ಬಾಳುತ್ತಿದ್ದರು ?

-ಇಂಥ ಎಲ್ಲಾ ಪ್ರಶ್ನೆಗಳು ಪತ್ರಕರ್ತ ಶಿವಪ್ರಸಾದ್‌.ಟಿ.ಆರ್‌ ಅವರಿಗೂ ಆಗಾಗ್ಗೆ ಕಾಡುತ್ತಿತ್ತು. ಆ ಎಲ್ಲಾ ಪ್ರಶ್ನೆಗಳ ಬೆನ್ನು ಹತ್ತಿ ಮಾಹಿತಿ ಸಂಗ್ರಹಿಸಿ 200 ಪುಟಗಳ ಪುಸ್ತಕವನ್ನಾಗಿಸಿದರು. ಅದೇ '' ಪುಸ್ತಕ.

ಈ ಪುಸ್ತಕದಲ್ಲಿ ಸುಭಾಷ್‌ ಬಾಲ್ಯ, ಯೌವ್ವನ, ರಾಜಕೀಯ ಪ್ರವೇಶ, ಐಎನ್‌ಎ ಸೇನೆ ಕಟ್ಟುವುದು ಎಲ್ಲವೂ ಇದೆ. ಅವೆಲ್ಲಾ ವಿಶೇಷವಲ್ಲ. ಆದರೆ ಸುಭಾಷ್‌ ವಿಮಾನ ಅಪಘಾತದಲ್ಲಿ ಸಾವನ್ನಿಪ್ಪಿದಾಗ ಅವರ ಜತೆ ಇದ್ದ ಸ್ನೇಹಿತರು ಏನು ಹೇಳುತ್ತಾರೆ ? ಸುಭಾಷ್‌ ಸಾವಿನ ತನಿಖೆ ಕೈಗೊಂಡ ಮುಖರ್ಜಿ, ಖೋಸ್ಲಾ ಆಯೋಗ ಏನು ಹೇಳುತ್ತವೆ. ಸುಭಾಷ್‌ ಸಾವನ್ನಪ್ಪಿದ ಮೇಲೆ ಭಾರತಕ್ಕೆ ಬಂದ ಭಗವಾನ್‌ ಸ್ವಾಮೀಜಿ ಯಾರು. ಆ ಸ್ವಾಮೀಜಿ ಸುಭಾಷರೇ ಎನ್ನುವುದಕ್ಕೆ ಬಲವಾದ ಸಾಕ್ಷಿಗಳೇನು ? ಎಂಬ ಸತ್ಯಕ್ಕೆ ಸಮೀಪವಾದ ಮಾಹಿತಗಳನ್ನು ಲೇಖಕ ಶಿವಪ್ರಸಾದ್‌ ಎಳೆ ಎಳೆಯಾಗಿ ವಿವರಿಸಿದ್ದಾರೆ.

ನೇತಾಜಿಯವರ ಜಾಣತನ, ಅವರ ದೂರದೃಷ್ಟಿ, ಅವರ ಕಾಳಜಿ, ರಹಸ್ಯ ಕಾಪಾಡುವ ಚಾಣಾಕ್ಷ್ಯತೆ, ಅವರ ಜೀವನ ಪ್ರೀತಿ, ಯಾರೂ ಯಾವತ್ತು ಪ್ರಶ್ನಿಸಲಾಗದ ಅವರ ದೇಶಭಕ್ತಿ ಈ ಪುಸ್ತಕದಲ್ಲಿ ಅಕ್ಷರದ ರಂಗವಲ್ಲಿಯಾಗಿ ಅರಳಿಕೊಂಡಿದೆ.

ಇವೆಲ್ಲದರ ಮಧ್ಯೆ ಆಗಾಗ್ಗೆ ಸ್ವಾಮೀಜಿ ಮತ್ತು ಸುಭಾಷ್‌ ಹೋಲಿಕೆ, 1975ರಲ್ಲಿ ನೆಹರು ಮರಣಹೊಂದಿದಾಗ ಅವರ ಶವದ ಮುಂದೆ ನಿಂತು ಶ್ರದ್ಧಾಂಜಲಿ ಅರ್ಪಿಸಿದ ಸ್ವಾಮೀಜಿಯೇ ಸುಭಾಷ್‌ ಎಂಬ ಹೋಲಿಕೆ ದಾಖಲೆ, ಸಾಕ್ಷಿಗಳು ತುಂಬಾ ಕುತೂಹಲ ಮೂಡಿಸುವ ಅನೇಕ ಮಾಹಿತಿಗಳು ಪುಸ್ತಕದಲ್ಲಿ ಲಭ್ಯವಿವೆ.

ಇಷ್ಟೆಲ್ಲಾ ವಿಚಾರಗಳನ್ನು ಪುಸ್ತಕದಲ್ಲಿ ವಿವರಿಸಿ ಯಾವುದೇ ತೀರ್ಮಾನವನ್ನು ಬರೆಯದೇ ಲೇಖಕ ಶಿವಪ್ರಸಾದ್‌, ವಾಸ್ತವವನ್ನು ಓದುಗರ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಕನ್ನಡದಲ್ಲಿ ಸುಭಾಷ್‌ ಬಗ್ಗೆ ಸಮಗ್ರ ವಿಚಾರ ಹೊತ್ತ ಯಾವುದೇ ಪುಸ್ತಕ ಇಲ್ಲದಿರುವುದು, ಈ ಪುಸ್ತಕ ಹೊರತರಲು ಕಾರಣ ಎಂಬುದು ಲೇಖಕರ ಅಭಿಪ್ರಾಯವಾಗಿದೆ. ಸುಭಾಷ್‌ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರಿಗೆ ಇದು ಒಂದು ಅರ್ಥಪೂರ್ಣ ಹೊತ್ತಿಗೆಯಾಗಲಿದೆ.

ನಿಮ್ಮ ಗಮನಕ್ಕೆ :

ಪುಸ್ತಕದ ಹೆಸರು :
ಪ್ರಕಾಶನ : ಚಿಂತನಗಂಗಾ ಪ್ರಕಾಶನ, ದಾವಣಗೆರೆ
ಲೇಖಕ : ಶಿವಪ್ರಸಾದ್‌ ಟಿ.ಆರ್‌.
ಮುದ್ರಣ : ರಾಷ್ಟ್ರೋತ್ಥಾನ ಪರಿಷತ್‌
ಪುಸ್ತಕ ದೊರೆಯುವ ಸ್ಥಳ : ರಾಷ್ಟ್ರೋತ್ಥಾನ ಪರಿಷತ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+