ವಿಚಿತ್ರಾನ್ನ ಪ್ರಿಯರಿಗೆ ಶನಿವಾರ ಭೂರಿ ಭೋಜನ!!!

www.thatskannada.comನ ಜನಪ್ರಿಯ ಅಂಕಣ ‘ವಿಚಿತ್ರಾನ್ನ ’ ಪುಸ್ತಕ ರೂಪದಲ್ಲಿ ಓದುಗರ ಮುಂದೆ ನಿಲ್ಲಲು ಸಜ್ಜಾಗುತ್ತಿದೆ. ವಿಚಿತ್ರಾನ್ನದ ಪ್ರಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ವಿಶ್ವಕನ್ನಡಿಗರ ಮನಗೆದ್ದಿರುವ infotainment ಹೂರಣ ‘ವಿಚಿತ್ರಾನ್ನ ಪುಸ್ತಕ’ದ ಬಿಡುಗಡೆ ಸಮಾರಂಭವನ್ನು ಶನಿವಾರ ಸಂಜೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಢ್‌ ಕಲ್ಜರ್‌ನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಓದುಗರ ಆಸಕ್ತಿ ಕೆರಳಿಸಿ, ಮನರಂಜನೆಯಾಂದಿಗೆ ಮಾಹಿತಿ ನೀಡುವ ಪಂಚ್‌ ಬರಹಗಳ ಈ ಸಂಕಲನವನ್ನು, ತಮ್ಮ ಬರಹದಿಂದ ಎಂಥವರನ್ನೂ ನಗಿಸುವ ತಾಕತ್ತು ಹೊಂದಿರುವ ಸಾಹಿತಿ ಪ್ರೊ.ಆ.ರಾ.ಮಿತ್ರ ಬಿಡುಗಡೆ ಮಾಡುವರು. ‘ವಿಚಿತ್ರಾನ್ನ’ದ ಶುಚಿ-ರುಚಿಯನ್ನು ಚಿತ್ರನಟ ಮತ್ತು ರಂಗಭೂಮಿಯ ಮಹಾಪ್ರಚಂಡ ಸಿ.ಆರ್‌.ಸಿಂಹ ವಿವರಿಸುವರು.

ವಿಶ್ವದ ನಂ.1 ಕನ್ನಡ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ವಿಚಿತ್ರಾನ್ನದ ಸೃಷ್ಟಿಕರ್ತ ಜೋಶಿ ಅವರ ಬಗೆಗಿನ ನೂರೆಂಟುಮಾತುಗಳಲ್ಲಿ, ಕೆಲವನ್ನಷ್ಟೇ ಸಮಾರಂಭದಲ್ಲಿ ಹಂಚಿಕೊಳ್ಳುವರು. ಸುಗಮ ಸಂಗೀತ ಕ್ಷೇತ್ರದ ಹಾಡುಹಕ್ಕಿ ಮಾಲತಿ ಶರ್ಮ ತಮ್ಮ ಮಧುರ ಕಂಠದಿಂದ ಕಾರ್ಯಕ್ರಮವನ್ನು ನಿರೂಪಿಸುವರು.

ಹನಿಗವನಗಳ ಮಂಡಿಯ ಒಡೆಯ ಕವಿ ಎಚ್‌.ಡುಂಡಿರಾಜ್‌, ವಿಚಿತ್ರಾನ್ನಕ್ಕೆ ಮುನ್ನುಡಿಯ ಪಂಚ್‌ ನೀಡಿದ್ದಾರೆ. ಮೈಸೂರಿನ ಗೀತಾ ಬುಕ್‌ ಹೌಸ್‌ ಪುಸ್ತಕವನ್ನು ಅಂದವಾಗಿ ಮುದ್ರಿಸಿದೆ.

ಸ್ವಾಗತ : ಅನಿವಾಸಿ ಕನ್ನಡಿಗರೊಬ್ಬರ ಪುಸ್ತಕವನ್ನು ಅಕ್ಕರೆಯಿಂದ ಸ್ವಾಗತಿಸುವ ಲಕ್ಷಣಗಳು ಕಾಣಿಸುತ್ತಿವೆ. ಅಂತರ್ಜಾಲವೊಂದರಲ್ಲಿ ಪ್ರಕಟಗೊಂಡ ಅಂಕಣ ಬರಹಗಳು, ಪುಸ್ತಕ ರೂಪದಲ್ಲಿ ಅರಳುತ್ತಿರುವುದು ನಿಜಕ್ಕೂ ದಾಖಲೆಯೇ ಸರಿ ಎಂದು ‘ಕನ್ನಡ ಪ್ರಭ’ ಪತ್ರಿಕೆ ಜೋಶಿ ಅವರ ಬೆನ್ನು ತಟ್ಟಿದೆ. ಓದುಗರ ಸಂಗ್ರಹದ ಕಪಾಟಿನಲ್ಲಿ ವಿಚಿತ್ರಾನ್ನ ಇರಲೇ ಬೇಕು ಎಂದು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರು ಷರಾ ಬರೆದಿದ್ದಾರೆ. ಇತರೆ ಪತ್ರಿಕೆಗಳು ಸಹಾ ಪುಸ್ತಕದ ಬಗ್ಗೆ ಕುತೂಹಲ ತೋರಿವೆ.

ಓದುಗ ಪ್ರಭುಗಳಿಗೆ ಕಾರ್ಯಕ್ರಮಕ್ಕೆ ಪ್ರೀತಿಯ ಸ್ವಾಗತ ಕೋರಿರುವ ವಿಚಿತ್ರಾನ್ನದ ಸ್ಪೆಷಲಿಸ್ಟ್‌ ಶ್ರೀವತ್ಸ ಜೋಶಿ, ದಯವಿಟ್ಟು ಬನ್ನಿ...ಸಮಯಕ್ಕೆ ಸರಿಯಾಗಿ ಬನ್ನಿ ಎಂದಿದ್ದಾರೆ.

ಮತ್ತೊಮ್ಮೆ ನಿಮ್ಮ ಗಮನಕ್ಕೆ :

ದಿನಾಂಕ : ಶನಿವಾರ, 13 ಆಗಸ್ಟ್‌ 2005
ಸ್ಥಳ : ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣ,
ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-4
ಸಮಯ : ಸಾಯಂಕಾಲ 4:30

ಮತ್ತಷ್ಟು ವಿವರಕ್ಕಾಗಿ ಸಂಪರ್ಕಿಸಿ :

ಶ್ರೀವತ್ಸ ಜೋಶಿ; ವಾಷಿಂಗ್‌ಟನ್‌ ಡಿಸಿ
ಮೊಕ್ಕಾಂ: ಬೆಂಗಳೂರು.
ದೂರವಾಣಿ : 26698433
ಇ-ಅಂಚೆ : [email protected]

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+