ಹೊಸ ಕಥೆಗಾರರ ಕಥಾ ಸಂಕಲನಕ್ಕೆ‘ಛಂದ’ದ ಆಹ್ವಾನ

ಬೆಂಗಳೂರು : ಪ್ರತಿ ವರ್ಷ ಒಬ್ಬ ಹೊಸ ಕತೆಗಾರನ ಕಥಾ ಸಂಕಲನವನ್ನು ಪ್ರಕಟಿಸಲು ಮುಂದಾಗಿರುವ ಛಂದ ಪುಸ್ತಕ, ಕಳೆದ ವರ್ಷದಂತೆ ಈ ವರ್ಷವೂ ಹೊಸ ಬರಹಗಾರರ ಕತೆಗಳನ್ನು ಆಹ್ವಾನಿಸಿದೆ.

ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಅವಕಾಶ. ಸುಮಾರು 10 ಪ್ರಕಟಿತ/ಅಪ್ರಕಟಿತ ಕತೆಗಳನ್ನು ಬರೆದು ಅಥವಾ ಡಿಟಿಪಿ ಮಾಡಿಸಿ ಕಳಿಸಬೇಕು. ಅಕ್ಷರಗಳು ಸ್ಫುಟವಾಗಿರುವುದು ಕಡ್ಡಾಯ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

Chanda Pustaka invites Short story collectionsಆಯ್ಕೆಯಾದ ಒಬ್ಬರ ಸಂಕಲನವನ್ನು ಛಂದ ಪುಸ್ತಕ ಪ್ರಕಾಶಿಸಲಿದೆ. ಕತೆಗಾರರಿಗೆ 2000ರೂ ಗೌರವಧನವನ್ನೂ ನೀಡಲಾಗುವುದು. ಸುಮಾರು 100 ಪುಟಗಳ ಚೆಂದ ಮುದ್ರಣದ ಈ ಪುಸ್ತಕವನ್ನು 2006ರ ಜನವರಿ 26ರಂದು ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.

ಎಲ್ಲ ವಿಷಯಗಳಲ್ಲೂ ಪ್ರಕಾಶಕರದೇ ಅಂತಿಮ ನಿರ್ಧಾರ. ಕಥಾ ಸಂಕಲನ ಕಳುಹಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್‌ 30. 2005.

ಕತೆಗಳನ್ನು ತಲುಪಿಸಬೇಕಾದ ವಿಳಾಸ :

ಛಂದ ಪುಸ್ತಕ
C/o ವಸುಧೇಂದ್ರ,
ಐ-004, ಮಂತ್ರಿ ಪ್ಯಾರಡೈಸ್‌,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು - 76.

ಹೆಚ್ಚಿನ ವಿವರಗಳಿಗೆ : [email protected]

(ಇನ್ಫೋ ವಾರ್ತೆ)


ಪೂರಕ ಓದಿಗೆ-
‘ಛಂದ’ದಿಂದ ಮೂರು ಚೆಂದದ ಪುಸ್ತಕಗಳು!


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+