‘ಕಾವ್ಯಎಲ್ಲಿಯೋ ಇದೆ’ -ಮೂವತ್ತು ಮಳೆಗಾಲದ ಸಮಾಧಾನಿ ಎಚ್.ಎಸ್.ವಿ
*ಇನ್ಫೋ ಇನ್‌ಸೈಟ್
ಯಾರು ನೋಡಲಿ, ಬಿಡಲಿ ಮಗು ತಂತಾನೇ ಆಟವಾಡುತ್ತದೆ. ಅದರ ಆನಂದ ಅದಕ್ಕೆ. ಕವಿಯೂ ಅಷ್ಟೇ ತನ್ನ ಪಾಡಿಗೆ ತಾನು ಕವಿತೆ ಬರೆಯುತ್ತಾನೆ. ಕವಿತೆ ಬರೆಯುವುದು ಸಂತೋಷ ಕೊಡುತ್ತದೆ. ಆದರೆ, ಇಷ್ಟೆಲ್ಲಾ ಯಾಕೆ ಬರೆದೆ? ಬರೆದದ್ದೆಲ್ಲ ನಿರರ್ಥಕವೇ ಎನ್ನುವ ಸಂದೇಹವೂ ಕೆಲವೊಮ್ಮೆ ಕಾಡುತ್ತದೆ.
ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ -ಕಾವ್ಯ ಸಂಬಂಧ ಹಾಗೂ ಕಾವ್ಯ- ಓದುಗರ ನಡುವಣ ಸಂಬಂಧ, ಆತಂಕಗಳನ್ನು ಬಿಚ್ಚಿಟ್ಟಿದ್ದು ಹೀಗೆ. ತಮ್ಮ ಕವಿತೆಗಳಲ್ಲಿ ಕೆಲವಾದರೂ ಮುಂದೆ ಉಳಿಯಬಹುದು ಅಥವಾ ಯಾರೂ ಓದದೆ ಇರಬಹುದು ಎಂಬ ದ್ವಂದ್ವದಲ್ಲಿ ಸಿಲುಕಿದ ಅವರು, ನನ್ನ ಕವಿತೆ ನಿಮ್ಮೆಲ್ಲರ ಕವಿತೆಯಾದರೆ ಸಾರ್ಥಕ ಎಂದರು.
ತಮ್ಮ ಮೂವತ್ತು ಮಳೆಗಾಲ: ಸಮಗ್ರ ಕಾವ್ಯ ಹಾಗೂ ಆಕಾಶದ ಹಕ್ಕು ವಿಮರ್ಶಾ ಸಂಕಲನ ಕೃತಿಗಳ ಬಿಡುಗಡೆಯ ಸಂದರ್ಭದಲ್ಲಿ ವೆಂಕಟೇಶಮೂರ್ತಿ ಈ ಆತ್ಮ ಜಿಜ್ಞಾಸೆಯಲ್ಲಿ ತೊಡಗಿದ್ದರು. ಕಾರ್ಯಕ್ರಮ ನಡೆದದ್ದು ಭಾನುವಾರ.
ಬರವಣಿಗೆ ಸಂತೋಷವನ್ನು ಕೊಡುತ್ತದೆ. ಅದೊಂದು ಅದ್ಭುತ ಅನುಭವ. ಹೊಗಳಿಕೆ- ತೆಗಳಿಕೆ, ಬೇಸರ- ಸಂತೋಷ, ಕವಿ-ಓದುಗ, ಈ ನಡುವೆ ಕಾವ್ಯ ಎಲ್ಲಿಯೋ ಇದೆ ಅನ್ನಿಸಿ ನಿರಾಳವಾಗುತ್ತದೆ ಎಂದು ವೆಂಕಟೇಶ್‌ಮೂರ್ತಿ ಹೇಳಿದರು.
ಎಚ್‌ಎಸ್‌ವಿ ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ?
ಎಚ್.ಎಸ್.ವೆಂಕಟೇಶಮೂರ್ತಿ ಅವರ ಪ್ರತಿಯಾಂದು ಕಥನ ಕಾವ್ಯ ಪ್ರಯೋಗಗಳೂ ಹೊಸತಾಗಿವೆ. ಈ ಕವನಗಳ ಮೂಲಕ ಅವರು ಮಹತ್ವದ ಕೃತಿಯಾಂದಕ್ಕೆ ಸಿದ್ಧತೆ ನಡೆಸಿದ್ದಾರೆ. ಎಚ್.ಎಸ್.ವಿ. ಅವರ ಕಾವ್ಯವನ್ನು ನಾವು ಇನ್ನಷ್ಟು ಗಂಭೀರವಾಗಿ ಪರಿಗಣಿಸುವ, ಚರ್ಚಿಸುವ ಅವಶ್ಯಕತೆಯಿದೆ ಎಂದು ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಜಿ.ಎಸ್.ಶಿವರುದ್ರಪ್ಪ ಹೇಳಿದರು.
ಕಾಲದ ಅನಂತತೆ ಜೊತೆಗಿನ ಸಂವಾದವೇ ಕಾವ್ಯ. ಕಾಲದ ಅನಂತತೆ ಬಗೆಗೆ ವಿಶ್ವಾಸ ಇಲ್ಲದವನು ಕವಿಯಾಗಲಾರ. ಸಮಕಾಲೀನತೆ ಬಿಟ್ಟು ಬದುಕಲು ಸಾಧ್ಯವಾಗದು ನಿಜವಾದರೂ, ಕಾಲದ ಅನು ಸಂಧಾನದೊಂದಿಗೆ ಮಾತ್ರ ಕವಿತೆ ಕಟ್ಟಲು ಸಾಧ್ಯ ಎಂದು ಜಿಎಸ್‌ಎಸ್ ಹೇಳಿದರು.
ಅಭಿಜಾತ ಹಾಗೂ ಆಧುನಿಕ ಕಾವ್ಯ ಪರಂಪರೆಯಾಂದಿಗೆ ನಿರಂತರ ಅನುಸಂಧಾನದ ಯಶಸ್ಸಿನಿಂದಲೇ ವೆಂಕಟೇಶಮೂರ್ತಿಯವರು ತಮ್ಮ ಸಮಕಾಲೀನ ಕವಿಗಳಿಗಿಂತ ಭಿನ್ನರಾಗಿದ್ದಾರೆ. ಸಮೃದ್ಧತೆ ಹಾಗೂ ವೈವಿಧ್ಯತೆ ಎಚ್‌ಎಸ್‌ವಿ ಕಾವ್ಯದಲ್ಲಿ ಕಾಣುತ್ತದೆ. ಕವಿತೆ ಬಗೆಗಿನ ಅವರ ಪ್ರೀತಿ ಅನನ್ಯವಾದುದು ಎಂದು ಶಿವರುದ್ರಪ್ಪ ಬಣ್ಣಿಸಿದರು.
ಎಚ್‌ಎಸ್‌ವಿ ಅವರ ಸಮಗ್ರ ಕಾವ್ಯ ಮೂವತ್ತು ಮಳೆಗಾಲ ಕೃತಿಯನ್ನು ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಬಿಡುಗಡೆ ಮಾಡಿದರು. ಪ್ರೊ.ಎಂ.ಎಚ್.ಕೃಷ್ಣಯ್ಯ ಆಕಾಶದ ಹಕ್ಕು ವಿಮರ್ಶಾ ಸಂಕಲನ ಬಿಡುಗಡೆ ಮಾಡಿದರು. ಸಂವಾದ ಪ್ರಕಾಶನದ ರಾಘವೇಂದ್ರ ಪಾಟೀಲ, ಸಿವಿಜಿ ಪ್ರಕಾಶನದ ಸಿವಿಜಿ ಚಂದ್ರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕವಿತೆ ಬದುಕಿದೆಯೇ? ನೈಪಾಲ್ ಹೇಳುತ್ತಾರೆ..
ಮುಖಪುಟ / ಸಾಹಿತ್ಯ ಸೊಗಡು
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications