ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇಕ್ಸ್‌ಪಿಯರನ 100 ಸಾನೆಟ್‌ಗಳನ್ನು ಕನ್ನಡಕ್ಕೆ ತಂದಿದ್ದಾರೆ ಲ.ನಾ. ಭಟ್ಟರು

By Staff
|
Google Oneindia Kannada News

Dr. N.S. LakshniNarayana Bhattಬೆಂಗಳೂರು : ಡಾ. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಶೇಕ್ಸ್‌ಪಿಯರನ ಸಾನೆಟ್‌ಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ. ಶೇಕ್ಸ್‌ಪಿಯರ್‌ನ ನೂರು ಆಯ್ದ ಸಾನೆಟ್‌ಗಳ ಕನ್ನಡಾನುವಾದದ ಕೃತಿ ‘ಶೇಕ್ಸ್‌ಪಿಯರ್‌ ಸಾನೆಟ್‌ ಚಕ್ರ’ ಇದೇ ಏಳರಂದು ಬನಶಂಕರಿ ಎರಡನೇ ಹಂತದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಬಿಡುಗಡೆಯಾಗಲಿದೆ.

ಕ್ಷಮಾ ಪ್ರಕಾಶನ 297 ಪುಟಗಳ ಈ ಕೃತಿಯನ್ನು ಹೊರತಂದಿದೆ. ಶೇಕ್ಸ್‌ಪಿಯರನ ಸಾನೆಟ್‌ ಚಕ್ರವು ಮುನ್ನುಡಿ, ಪ್ರಸ್ತಾವನೆ, ಟಿಪ್ಪಣಿ, ಅನುಬಂಧಗಳನ್ನೊಳಗೊಂಡಿದೆ. ಎಲಿಯಟ್‌ ನಂತರ ಭಟ್ಟರು ಶೇಕ್ಸ್‌ಪಿಯರನನ್ನು ಕನ್ನಡಕ್ಕೆ ತಂದಿದ್ದಾರೆ.

ಇದೇ ಸಂದರ್ಭದಲ್ಲಿ ಭಟ್ಟರ ಮತ್ತೊಂದು ಕೃತಿ ‘ಕಿನ್ನರಲೋಕ’ದ ಬಿಡುಗಡೆಯೂ ನೆರವೇರಲಿದೆ. ಇದು ಮಕ್ಕಳಿಗಾಗಿ ಬರೆದ ಕವಿತೆಗಳ ಸಮಗ್ರ ಸಂಪುಟ. ಈಗಾಗಲೇ ಕ್ಯಾಸೆಟ್‌ಗಳ ಮೂಲಕ ಜನಪ್ರಿಯವಾಗಿರುವ ‘ಬಾಳಾ ಒಳ್ಳೇವ್ರು ನಮ್ಮ ಮಿಸ್ಸು’ , ‘ಗೇರ್‌ ಗೇರ್‌ ಮಂಗಣ್ಣ, ಕಡ್ಳೇಕಾಯ್‌ ನುಂಗಣ್ಣ’ ಮೊದಲಾದ ಶಿಶುಗೀತೆಗಳು ಈ ಸಂಪುಟದಲ್ಲಿವೆ.

ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಜಿ.ಎಸ್‌. ಶಿವರುದ್ರಪ್ಪ ಅವರು ವಹಿಸುತ್ತಿದ್ದು, ಪ್ರೊ. ಎಲ್‌.ಎಸ್‌. ಶೇಷಗಿರಿರಾಯರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ರಿಬಾಬಾರೀ ಖ್ಯಾತಿಯ ಅರ್ಚನಾ ಉಡುಪ ಭಾವಗೀತೆಗಳನ್ನು ಹಾಡಲಿದ್ದಾರೆ.

(ಇನ್‌ಫೋ ವಾರ್ತೆ)

ವಾರ್ತಾ ಸಂಚ-ಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X