ಪೋಸ್ಟ್‌ಕ್ರಾಸಿಂಗ್ : ಪತ್ರಗಳ ಮೂಲಕ ವಿಶ್ವವನ್ನು ಬೆಸೆಯುವ ಯತ್ನ

By: ತೇಜಸ್ ಎ.ಆರ್
Subscribe to Oneindia Kannada

'ಪತ್ರ ಬರೆಯಲಾ? ಇಲ್ಲಾ ಚಿತ್ರ ಬಿಡಿಸಲಾ?' ಎನ್ನುವ ಕಾಲ ಈಗ ಇಲ್ಲ. ಮೊಬೈಲ್ ಜಮಾನಾದಲ್ಲೂ ಅಂಚೆ ಕಚೇರಿ, ಪತ್ರ ಬರೆಯುವವರು, ಹಂಚಿಕೊಳ್ಳುವವರನ್ನು ಕಾಯುವ ಪ್ರೀತಿಯ ಗುಂಪೊಂದಿದೆ.

'ಪೋಸ್ಟ್‌ಕ್ರಾಸಿಂಗ್' ಎಂಬ ಸಮುದಾಯ ಅಂತರ್ಜಾಲತಾಣ ನಿಮಗೆ ಗೊತ್ತೆ? ಇದರ ಮುಖ್ಯ ಉದ್ದೇಶ ಪೋಸ್ಟ್ ಕಾರ್ಡ್‌ಗಳ ಬೇರೆ ದೇಶಗಳ ಸಮಾನ ಆಸಕ್ತರೊಡನೆ ವಿನಿಮಯ ಮಾಡಿಕೊಳ್ಳುವುದು. ಈ ಪೋಸ್ಟ್ ಕ್ರಾಸಿಂಗ್ ನಲ್ಲಿ ಭಾಗಿಯಾಗಿ ಬೆಂಗಳೂರಿನ ತೇಜಸ್ ಅವರು ಅನಭವ ಇಲ್ಲಿ ಓದಿ..

ಇತ್ತೀಚಿನ ದಿನಗಳಲ್ಲಿ ಪತ್ರ ಬರೆಯುವ ಹವ್ಯಾಸ ಬಹಳ ವಿರಳ. ನಮ್ಮ ಪ್ರೀತಿಪಾತ್ರರಿಂದ ಒಂದು ಮಿಂಚಂಚೆಯೊ ಅಥವ ಚರದೂರವಾಣಿಗೆ ಒಂದು ಸಂದೇಶವೊ ಬಂದಿರುವುದಕ್ಕೂ 100 ಪಟ್ಟು ಹೆಚ್ಚು ಮನೆಯ ಬಾಗಿಲಲ್ಲಿ ಒಂದು ಸುಂದರ ಪತ್ರ ಇದ್ದಾಗ ಅತೀವ ಸಂತಸವಾಗುತ್ತದೆ.

'ಪೋಸ್ಟ್‌ಕ್ರಾಸಿಂಗ್' ಎಂಬ ಸಮುದಾಯ ಅಂತರ್ಜಾಲತಾಣವನ್ನು ಪೋರ್ಚುಗಲ್ ದೇಶದ ಪೌಲೊ ಎಂಬುವವರು ಜುಲೈ 14 2005 ರಲ್ಲಿ ಶುರು ಮಾಡಿದರು. ಅವರ ಮುಖ್ಯ ಉದ್ದೇಶ ಪೋಸ್ಟ್ ಕಾರ್ಡ್‌ಗಳ ಬೇರೆ ದೇಶಗಳ ಸಮಾನ ಆಸಕ್ತರೊಡನೆ ವಿನಿಮಯ ಮಾಡಿಕೊಳ್ಳುವುದು. ಇದು ಜನರನ್ನು ಬಹಳ ಬೇಗ ತಲುಪಿತು, ಹಲವು ದೇಶಗಳ ಆಸಕ್ತರು ಪೋಸ್ಟ್‌ಕಾರ್ಡ್‌ಗಳ ವಿನಿಮಯ ಮಾಡಿಕೊಳ್ಳಲು ಶುರು ಮಾಡಿದರು. ಮುಂದೆ ಹೇಗೆ ಬೆಳೆಯಿತು...

 ನಲವತ್ತು ದಶಲಕ್ಷಕ್ಕೂ ಹೆಚ್ಚು

ನಲವತ್ತು ದಶಲಕ್ಷಕ್ಕೂ ಹೆಚ್ಚು

ಮೂರು ವರ್ಷದಲ್ಲೆ ಒಂದು ದಶಲಕ್ಷ ಪೋಸ್ಟ್‌ಕಾರ್ಡ್‌ಗಳು ವಿನಿಮಯಗೊಂಡಿತು. ಈಗ ನಲವತ್ತು ದಶಲಕ್ಷಕ್ಕೂ ಹೆಚ್ಚು ಪೋಸ್ಟ್‌ಕಾರ್ಡ್‌ಗಳು ವಿನಿಮಯಗೊಂಡಿದೆ. ಆರು ಮುಕ್ಕಾಲು ಲಕ್ಷ ಜನ ಸದಸ್ಯರು ಇದ್ದಾರೆ. ಖೇದ ಸಂಗತಿ ಎಂದರೆ ಭಾರತ ಸದಸ್ಯರ ಸಂಖ್ಯೆ ಎಂಟುವರೆ ಸಾವಿರದಷ್ಟು, ಅದರಲ್ಲಿ ಸಕ್ರೀಯ ಸದಸ್ಯರ ಸಂಖ್ಯೆ ಇನ್ನು ಕಮ್ಮಿ. ಚಿತ್ರದಲ್ಲಿ: ಜೋಹಾನಾ, ಪೋಲೆಂಡ್ ಕಳಿಸಿದ ಪತ್ರ

ಮಾಹಿತಿ ವಿನಿಮಯವಾಗುತ್ತಿದೆ

ಮಾಹಿತಿ ವಿನಿಮಯವಾಗುತ್ತಿದೆ

ಈಗಾಗಲೆ ಹಲವಾರು ದೇಶಗಳಿಂದ ಪೋಸ್ಟ್‌ಕಾರ್ಡ್‌ಗಳು ನನಗೆ ಬಂದಿವೆ. ಅಲ್ಲಿನ ಪ್ರಸಿದ್ಧ ಸ್ಥಳಗಳು, ಅಲ್ಲಿನ ಸಂಸ್ಕೃತಿ, ಅವರ ಆಸಕ್ತಿಗಳು, ಪ್ರಸಿದ್ಧ ವ್ಯಕ್ತಿಗಳ ಪರಿಚಯ ಈ ಹವ್ಯಾಸದಿಂದ ಆಗುತ್ತಲೆ ಬಂದಿದೆ. ಚಿತ್ರದಲ್ಲಿ : ಹಾಲೆಂಡಿನಿಂದ ಲೆನಾ ಎಂಬುವವರು ಲೇಖಕರಿಗೆ ಕಳಿಸಿದ ಚಿತ್ರ

ಎಲ್ಲಾ ಆಯಾಸ ನೋವನ್ನು ಮರೆಸುತ್ತದೆ

ಎಲ್ಲಾ ಆಯಾಸ ನೋವನ್ನು ಮರೆಸುತ್ತದೆ

ಮನೆಯ ಬಾಗಿಲಿಗೆ ಬಂದು ಬೀಳುವ ಒಂದು ಪೋಸ್ಟ್‌ಕಾರ್ಡ್‌ ನೋಡಿದಾಗ ನನಗಂತು ದಿನದ ಎಲ್ಲಾ ಆಯಾಸ ನೋವನ್ನು ಮರೆಸುತ್ತದೆ. ಚಿತ್ರದಲ್ಲಿ: ಸ್ವಿಟ್ಜರ್ಲೆಂಡಿನ ಲಾರೆನ್ಸ್ ಅವರು ಕಳಿಸಿದ ಪತ್ರ.

ಗೆಳೆಯರೊಟ್ಟಿಗೆ ಪತ್ರ ವಿನಿಮಯ

ಗೆಳೆಯರೊಟ್ಟಿಗೆ ಪತ್ರ ವಿನಿಮಯ

ನನಗೆ ಪತ್ರ ಬರೆಯುವ ಹವ್ಯಾಸ ಮೊದಲಿನಿಂದಲೂ ಇತ್ತು, ಗೆಳೆಯರೊಟ್ಟಿಗೆ ಪತ್ರ ವಿನಿಮಯ ಮಾಡುತ್ತಿದ್ದೆ, ಪೋಸ್ಟ್‌ಕ್ರಾಸಿಂಗ್ ನಿಂದಾಗಿ ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿತು. ಹೊಸಬರಿಗೆ ನಮ್ಮ ಜಾಗದ ಬಗ್ಗೆ, ನಮ್ಮ ಆಸಕ್ತಿಗಳ ಬಗ್ಗೆ, ನಮ್ಮ ನೆಚ್ಚಿನವರ ಬಗ್ಗೆ, ಹಲವಾರು ವಿಚಾರಗಳ ವಿನಿಮಯ ಮಾಡಿಕೊಂಡಾಗ ಆ ಖುಷಿ ದೊಡ್ಡದ್ದು.ಈ ಹವ್ಯಾಸ ಸಾಕಷ್ಟು ಜನ ರೂಢಿಸಿಕೊಳ್ಳಬೇಕು. ಚಿತ್ರದಲ್ಲಿ : ಸೆಬಾಸ್ಟಿಯನ್, ಜರ್ಮನಿಯಿಂದ ಕಳಿಸಿದ ಪತ್ರ

ಸಂಸ್ಕೃತಿಗಳ ಬಗ್ಗೆಯೂ ಅರಿವು ಮೂಡುತ್ತದೆ

ಸಂಸ್ಕೃತಿಗಳ ಬಗ್ಗೆಯೂ ಅರಿವು ಮೂಡುತ್ತದೆ

ಇದರಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳು ಇವೆ. ಹೊಸಬರಿಗೆ ಪತ್ರ ಬರೆಯುವ ಖುಷಿ, ನಮ್ಮ ಸಂಸ್ಕೃತಿಯ ಬಗ್ಗೆ ಹಲವರಿಗೆ ತಿಳಿಸಬೋದು, ಸಾಕಷ್ಟು ದೇಶಗಳ ಸಂಸ್ಕೃತಿಗಳ ಬಗ್ಗೆಯೂ ಅರಿವು ಮೂಡುತ್ತದೆ, ಮನೆಯ ಬಾಗಿಲಲ್ಲಿ ನಮ್ಮ ಹೆಸರಲ್ಲಿ ಬಂದ ಪತ್ರ ಕೈಗೆತ್ತು ಓದುವಾಗ ಸಿಗುವ ಆನಂದ ಅಪಾರ. ಚಿತ್ರದಲ್ಲಿ: ವೆನ್ಲಿನ್, ಥೈಲ್ಯಾಂಡಿನಿಂದ

ಭಾರತದ ಸಿಹಿತಿಂಡಿ ಇಷ್ಟವಂತೆ

ಭಾರತದ ಸಿಹಿತಿಂಡಿ ಇಷ್ಟವಂತೆ

ಪೋಸ್ಟ್‌ಕಾರ್ಡ್‌ಗಳಲ್ಲಿ ಬರೆದು ಕಳುಹಿಸಿರುವ ಒಂದಷ್ಟು ಸಂದೇಶಗಳ ಬಗ್ಗೆ ಹಂಚಿಕೊಳ್ಳಲು ಬಯಸುವೆ. ಅಮೇರಿಕಾದಿಂದ ಬಂದ ಒಂದು ಪೋಸ್ಟ್‌ಕಾರ್ಡ್ನಲ್ಲಿ ಮ್ಯಾಟ್ ಎಂಬಾತ ಭಾರತಕ್ಕೆ ಬರುವ ಆಸೆ ವ್ಯಕ್ತಪಡಿಸಿ, ನಮ್ಮ ತಿನಿಸುಗಳೆಂದರೆ ಬಹಳ ಇಷ್ಟ ಅಂತ ಹೇಳಿದ್ದಾರೆ.

ಸುಖ ದುಃಖಕ್ಕೆ ಪತ್ರವೇ ಸೇತುವೆ

ಸುಖ ದುಃಖಕ್ಕೆ ಪತ್ರವೇ ಸೇತುವೆ

ಸಣ್ಣ ದೇಶವಾದ ತೈವಾನ್‌ನಿಂದ ಬಂದ ಪತ್ರ ಒಂದರಲ್ಲಿ ಆಘಾತಕಾರಿಯಾದ ಮಾತುಗಳಿದ್ದವು, ಬೇರೆ ದೇಶದ ಮಹಿಳೆಯರಿಗೆ ಭಾರತಲ್ಲಿ ತುಂಬ ಅಪಾಯ ಇದೆ ಎಂಬ ಕೇಳಿರುವುದಾಗಿ, ನಿಜವೇ ಎಂದು ಪ್ರಶ್ನಿಸಿದ್ದಾರೆ. ಹಾಲ್ಯಾಂಡ್‌ನಿಂದ ಬಂದ ಪತ್ರದಲ್ಲಿ ಅಲ್ಲಿನ ಪ್ರಸಿದ್ಧ ಗಾಳಿಯಂತ್ರ, ಟುಲಿಪ್ ಹೂಗಳು, ಮರದ ಶೂಗಳ ಬಗ್ಗೆ ಬರೆಯುತ್ತಾರೆ. ಪೋಲೆಂಡಿನಿಂದ ಜೋಹಾನಾ ಕಳಿಸಿದ ಹೂರಾಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is Postcrossing: A postcard exchange project that invites everyone to send and receive postcards from random places in the world. Here is an explainer By Tejas A.R.
Please Wait while comments are loading...