ಶ್ವಾನಪ್ರಿಯರಲ್ಲದವರು ಈ ಲೇಖನ ಓದಬೇಡಿ!

By: ಮಪ
Subscribe to Oneindia Kannada

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು.
ನಾಯಿ ಮರಿ ಕಳ್ಳ ಬಂದರೆ ಏನು ಮಾಡುವೆ.
ಕುಂಯ್ ಕುಂಯ್ ಬೌ ಬೌ ಎಂದು ಕೂಗಿ ಓಡಿಸುವೆ.
ನಾಯಿಮರಿ ನಾನು ಹೋಗಿ ತಿಂಡಿ ತರುವೆನು
ನಾ ನಿನ್ನ ಮನೆಯ ನಾನು ಕಾಯುತಿರುವೆನು.

ಬಾಲ್ಯದಲ್ಲಿ ತಾಯಿ ಈ ಹಾಡನ್ನು ಹೇಳಿಕೊಟ್ಟಾಗಲೇ ಶ್ವಾನದ ಮೇಲೆ ಪ್ರೀತಿ ಆರಂಭವಾಗುತ್ತದೆ. ಹೌದು ಇಂದು( ಆಗಸ್ಟ್ 26) ವಿಶ್ವ ಶ್ವಾನ ದಿನ. ಮನೆಯ ಬಾಲ್ಕನಿಯಲ್ಲಿ ಆಡುವ ನಾಯಿ ಮರಿಯಿಂದ ಹಿಡಿದು, ದೇಶದ ಸೈನ್ಯದಲ್ಲಿ ಕೆಲಸ ನಿರ್ವಹಿಸುವ ಎಲ್ಲ ನಾಯಿಗಳಿಗೆ ನನ್ನ ಕಡೆಯಿಂದ ಶ್ವಾನ ದಿನದ ಶುಭಾಶಯ.[ಸುಂದರಿ ಯುವತಿ ಮತ್ತು ಆಕೆಯ ಜಾಣ ನಾಯಿ!]

dog

ಡೊಂಕು ಬಾಲದ ನಾಯಕರೆ
ನೀವೇನೂಟವ ಮಾಡುವಿರಿ
ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ [ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಪುರಂದರ ದಾಸರ ಹಾಡಿನ ಅರ್ಥವನ್ನು ಒಂದು ಕ್ಷಣ ಮೆಲುಕು ಹಾಕಬೇಕಾಗುತ್ತದೆ. ಶ್ವಾನ ಮನುಷ್ಯನ ಅಚ್ಚುಮೆಚ್ಚಿನ ಪ್ರಾಣಿ, ನಿಯತ್ತಿಗೆ ಇನ್ನೊಂದು ಹೆಸರು ಶ್ವಾನ, ನಾಯುಯಷ್ಟು ನಿಯತ್ತು ಎಂಬ ನುಡಿಗಟ್ಟು ಬಳಕೆಯಲ್ಲೇ ಬಂದು ಹೋಗಿದೆ.[ಬೆಳಗಾವಿ ರೈತನ ಶ್ವಾನದ ಗೋಳು ಕೇಳಿ]

dog

ಶಿಲಾಯುಗದಿಂದ ಹಿಡಿದು ಆಧುನಿಕ ಮಂಗಳ ಗ್ರಹಕ್ಕೆ ಕಾಲಿಟ್ಟ ಕಾಲದವರೆಗೂ ಮನುಷ್ಯನ ಜತೆಯಲ್ಲೇ ಬಂದಿರುವ ಯಾವುದಾದರೂ ಒಂದು ಪ್ರಾಣಿ ಇದ್ದರೆ ಅದು ನಾಯಿ ಮಾತ್ರ. ನಾಯಿಯನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿದೆ.[ಪ್ರೀತಿಯ ಅರ್ಜುನ್ ವಿಧಿವಶ; ದು:ಖತಪ್ತ ಜಗ್ಗೇಶ್]

dog

ಬೇಟೆಗೆ, ರಕ್ಷಣೆಗೆ ಬಳಕೆಯಾಗುತ್ತಿದ್ದ ಶ್ವಾನಗಳು ಇಂದು ಪೆಟ್ ಡಾಗ್ ಹೆಸರನ್ನು ಪಡೆದುಕೊಂಡಿವೆ. ಅತ್ಯಂತ ಚಿಕ್ಕ ತಳಿ ಮಿನಿಯೇಚರ್, ಪೋಮೇರಿಯನ್‌ನಿಂದ ಹಿಡಿದು ದೈತ್ಯ ತಳಿಗಳಾದ ಗ್ರೇಟ್ ಡೇನ್, ಸೇಂಟ್ ಬರ್ನಾಡ್, ಅಪರೂಪದ ತಳಿಗಳಾದ ನಿಯೋಪಾಲಿಟಿನ್ ಮ್ಯಾಸ್ಟಿಫ್, ಸೈಬೀರಿಯನ್ ಹಸ್ಕಿ , ಬೀಗಲ್, ಬ್ಯಾಸೆಟ್‌ಹೌಂಡ್, ರಾಟ್ ವೀಲರ್, ಪಗ್, ಕಾಕರ್‌ಸ್ಪೇನಿಯಲ್, ಜರ್ಮನ್ ಶೆಫರ್ಡ್, ಡಾಬರ್‌ಮನ್, ಲಾಬ್ರಾಡಾರ್ ತಳಿಗಳ ಹೆಸರು ಮಾತ್ರ ನನಗೆ ಗೊತ್ತು. [ಹನುಮಂತಪ್ಪರನ್ನು ಪತ್ತೆಹಚ್ಚಿದ ಶ್ವಾನಗಳಿಗೆ ಸೆಲ್ಯೂಟ್]

"ನಾನೇನು ಮಾಡ್ಲಿ ಸ್ವಾಮಿ ನನ್ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ,, ಆದ್ರೆ ಈ ನಾಯಿ ಮುಂದೆ ಡಮ್ಮಿ...[ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

ಲಕ್ಕಿ ಕನ್ನಡ ಚಿತ್ರದ ಈ ಹಾಡಲ್ಲಿ ಯಶ್ ಮತ್ತು ರಮ್ಯಾ ಹೆಜ್ಜೆ ಹಾಕಿದ್ರು. ಹುಡಗರ ಮನದಾಳದ ವೇದನೆಯನ್ನು ಕಟ್ಟಿಕೊಟ್ಟ ಹಾಡು ಇದು. ಹೌದಪ್ಪಾ... ಈ ಹುಡುಗಿಯರಿಗೆ ನಾಯಿ ಮೇಲೆ ಒಂಚೂರು ಪ್ರೀತಿ ಜಾಸ್ತಿನೆ.[ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ!]

ಮಾಲೀಕನ ಕಳೆದುಕೊಂಡ ಡಿಕೆ ರವಿ ಮುದ್ದಿನ ನಾಯಿಯ ರೋದನ, ಸಿಯಾಚಿನ್ ನಲ್ಲಿ ಹಿಮದಡಿ ಸಿಲುಕಿದ್ದ ಯೋಧ ಹನುಂತಪ್ಪ ಕೊಪ್ಪದ್ ಅವರನ್ನು ಪತ್ತೆ ಹಚ್ಚಿದ ಶ್ವಾನಗಳು. ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಸಮಾಧಿ ಮುಂದೆ ಕಣ್ಣೀರಿಡುತ್ತಾ ದಿನ ಕಳೆದ ಶ್ವಾನ, ಮನುಷ್ಯರಿಗಿಂತ ಹೆಚ್ಚಾಗಿ ಭಾವನೆಗೆ ಸ್ಪಂದಿಸಿದ್ದು ಸುಳ್ಳಲ್ಲ.

ವಿದೇಶಿ ತಳಿಯ ನಾಯಿ ಸಾಕುವುದು ಆನೆ ಸಾಕಿದ ಹಾಗೆ. ನಾವು ಖರ್ಚು ಮಾಡುವುದಕ್ಕಿಂತ ಅವುಗಳ ಡಾಗ್ ಫುಡ್, ಆಟ ಸಾಮಾನುಗಳೇ ದುಬಾರಿ. ತಮ್ಮ ಸ್ವಂತ ಮಕ್ಕಳಂತೆ ನಾಯಿ ಮರಿಯನ್ನ ಮುದ್ದು ಮಾಡುವವರಿದ್ದಾರೆ. ಅವುಗಳಿಗೆ ಕೊಂಚ ನೋವಾದರೂ, ಮಾಲೀಕರ ಕಣ್ಣಲ್ಲಿ ನೀರು.

ಹಿಂದೆಲ್ಲಾ ಮನೆಯಲ್ಲಿ ನಾಯಿ ಸಾಕುವುದು ಅಂದ್ರೆ ಮನೆ ಕಾಯಲು. ಆದ್ರೀಗ ನಾಯಿಯನ್ನ ನೋಡಿಕೊಳ್ಳುವುದಕ್ಕೆ ಜನರನ್ನ ನೇಮಿಸಬೇಕು. ಮುದ್ದು ಮರಿ ಬಿಟ್ಟು ಹೋದರೆ, ಪಾಪಾ ಏನು ಮಾಡ್ತಿರುತ್ತೋ ಎಂಬ ಆತಂಕ ಸದಾ ಕಾಡುತ್ತಲೇ ಇರುತ್ತದೆ. ಅದು ಟ್ರಾಫಿಕ್ ನಲ್ಲಿ ಇರಲಿ, ಕಚೇರಿಯಲ್ಲಿ ಇರಲಿ, ಮತ್ತಿನ್ನೆಲ್ಲೋ ಇರಲಿ ನೀವು ನಾಯಿ ಧ್ಯಾನದಲ್ಲೇ ಇರುತ್ತೀರಿ.

ನಾಯಿ ಜಾತಿ, ಜಾತಿ ನಾಯಿ ಎಂಬ ಮಾತು ಚಾಲ್ತಿಯಲ್ಲಿದೆ. ಏನೇ ಇದ್ದರೂ ನಾಯಿ ನಾಯಿನೇ. ಒಂದು ಬಾರಿ ನಿಮಗೆ ಶ್ವಾನ ಪ್ರೀತಿ ಚಟ ಹುಟ್ಟಿಕೊಂಡರೇ ಅದು ಇಡೀ ಜೀವಮಾ ನಿಮ್ಮೊಂದಿಗೆ ಇರುತ್ತದೆ. ನಾಯಿ ಸಹ ನಿಮ್ಮನ್ನು ಅಷ್ಟೇ ಪ್ರೀತಿಸುತ್ತದೆ. ನಿಮ್ಮ ಮನೆಯ ಸಾಕು ನಾಯಿ ಮತ್ತು ನಿಮ್ಮ ನಡುವೆ ಒಂದು ಅವ್ಯಕ್ತ ಬಂಧ ಎಲ್ಲಿಂದ ಆರಂಭವಾಗುತ್ತದೆ ಎಂದು ಗೊತ್ತಾಗಲ್ಲ. ಆದರೆ ಅದು ಎಂದಿಗೂ ಮುಗಿಯಲ್ಲ.

ನಾಯಿಗಳು ಸಾಮಾನ್ಯವಾಗಿ 12-16 ವರ್ಷ ಬದುಕುತ್ತವೆ. ಬಾಲ್ಯದಿಂದಲೇ ನೀವು ನಾಯಿ ಮೇಲೆ ಪ್ರೀತಿ ಇಟ್ಟುಕೊಂಡು ಸಾಕಲು ಶುರು ಇಟ್ಟುಕೊಂಡರೆ ನಾಲ್ಕು ನಾಯಿಗಳನ್ನು ಸಾಕಬಹುದು. ನಿಮ್ಮ ಮನೆಯ ಸದಸ್ಯನಿಗಿಂತ ಹೆಚ್ಚಿನ ಸ್ಥಾನ ಪಡೆದುಕೊಳ್ಳುವುದೇ ಶ್ವಾನದ ಹೆಚ್ಚುತನ.

ಚೂಟಿ, ರೂಬಿ, ಜಾನ್, ಚಿಕ್ಕಿ, ಪಾಂಡು, ಗುಡ್ ಬಾಯ್, ಸೋನಿ, ಬೆಳ್ಳಿ, ಟಾಮಿ, ಟೈಗರ್, ಗುಂಡಣ್ಣ, ಬೋಲ್ಟಿ, ಸ್ಟ್ರೈಕರ್, ಬ್ಲ್ಯಾಕಿ, ಜಿಮ್ಮಿ, ಚಾರ್ಲಿ, ಬ್ರೌನಿ..... ಅಬ್ಬಬ್ಬಾ ಎಷ್ಟು ಮುದ್ದಾದ ಹೆಸರುಗಳು. ಅವರವರ ಮನೆ ನಾಯಿ ಅವರಿಗೆ ಮನೆ ಮಗ ಅಥವಾ ಮಗಳಿಗಿಂತಲೂ ಹೆಚ್ಚು.

ನಿಮ್ಮ ಮನೆಯಲ್ಲೂ ನಾಯಿ ಇರಬಹುದು. ನಿಮ್ಮ ಬೇಸರ-ಸಂತಸವನ್ನು ಹಂಚಿಕೊಳ್ಳುತ್ತಿರಬಹುದು. ಬೀದಿ ನಾಯಿಯೇ ಇರಲಿ ಸಾಕು ನಾಯಿನೇ ಇರಲಿ ಸಕಲ ಶ್ವಾನ ಕುಲಕೋಟಿಗೆ ಮತ್ತೊಮ್ಮೆ ಶ್ವಾನ ದಿನದ ಶುಭಾಶಯಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No one can win hearts like man’s best friend and in honour of this bond between man and canine, Dog Day is celebrated. National Dog Day is celebrated August 26th annually and was founded in 2004 by Pet & Family Lifestyle Expert and Animal Advocate, Colleen Paige. Here is an special article about Man's best friend/pet Dog. Happy dog day for all the pet dogs.
Please Wait while comments are loading...