ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ'ಕಾರದಿಂದ ಪ್ರಾರಂಭವಾಗುವ ಪದ ಪುಂಜಗಳ ಪ್ರಪಂಚ

By ಸೀತಾ ಕೇಶವ, ಸಿಡ್ನಿ
|
Google Oneindia Kannada News

'ಪ' ಪ್ರಪಂಚ ಪರಿಶುದ್ಧವಾಗಿ ಪ್ರಕೃತಿ ಪ್ರಜಾಶಕ್ತಿ ಪ್ರಜಾಪ್ರಭುತ್ವದ ಫಲಿತವಾಗಿದೆಯೆಂದು ಪುರುಷೋತ್ತಮ, ಪುಟ್ಟಸ್ವಾಮಿ, ಪತಂಜಲಿ, ಪೆರುಮಾಳ್, ಪ್ರಸನ್ನತೀರ್ಥರು ಪ್ರಶಂಶಿಸುತ್ತಿದ್ದರು. ಪತಿ ಪತ್ನಿಯರಾದ ಪವರ್ ಪುನೀತ್, ಪುಷ್ಪ, ಪಾಲ್ ಪಂಕಜ, ಪ್ಯಾಟ್ರಿಕ್ ಪ್ರಫುಲ್ಲ, ಪ್ರವೀಣ್ ಪ್ರತಿಭಾ, ಪ್ರಣೀತ್ ಪದ್ಮರೊಡನೆ, ಪ್ರತಿ ಪೈಸಾಗೆ ಪ್ರತಿಷ್ಠಿಸಿದರು.

ಪಂಡಿತರಾದ ಪರಂಜ್ಯೋತಿ, ಪಿಳ್ಳೈ, ಪೈ, ಪಾಪ ಪುಣ್ಯ, ಪುರಾಣ, ಪುಣ್ಯಕೋಟಿಕಥೆಯಿಂದ ಪರಮಾತ್ಮನನ್ನು ಪುತ್ರರಾದ ಪ್ರಸನ್ನ, ಪ್ರಸಾದರೊಡನೆ ಪ್ರಾರ್ಥಿಸುತ್ತಿದ್ದರು.

ಅಕ್ಷರಮಾಲೆಯ 'ಅ'ಕಾರದ ವರ್ಣನೆಯೇ 'ಅಕ್ಷರ'ಅಕ್ಷರಮಾಲೆಯ 'ಅ'ಕಾರದ ವರ್ಣನೆಯೇ 'ಅಕ್ಷರ'

ಪಂಡರಾಪುರದ ಪುರಂದರವಿಠಲನಲ್ಲಿ ಪತಿವ್ರತೆಯರಾದ ಪದ್ಮಜಾ, ಪ್ರೇಮ, ಪ್ರತಿಮಾ, ಪ್ರೀತಿ, ಪಾರ್ವತಮ್ಮ ಪ್ರದಕ್ಷಿಣಿಮಾಡಿ ಪರಮಾನ್ನ, ಪಾಯಸ, ಪತ್ರೊಡೆ, ಪುಳಿಯೋಗರೆ ಪ್ರಿಯವಾಗಿತ್ತೆಂದರು.

An article by Seetha Keshava

ಪಾಕಶಾಸ್ತ್ರ ಪ್ರವೀಣರಾದ ಪ್ರಹ್ಲಾದ, ಪಾಂಡುರಂಗ, ಪ್ರಮೋದ, ಪಾನಿಪೂರಿ, ಪಕೋಡ, ಪರಾಠ, ಪಾಲಕ್, ಪೋಹಾಕ್ಕೆ ಪ್ರಭಾತ ಪ್ರೈಮರಿ ಪಾಠಶಾಲೆಯಲ್ಲಿ ಪದವಿ ಪಡೆದರು.

ಪಾರ್ಕ್ನಲ್ಲಿ ಪ್ರಿಯಾಂಕಾ, ಪಾಪು, ಪ್ರಾಘ್ನ, ಪಾವನಾ, ಪ್ರಾಣಿಪಕ್ಷಿ, ಪತಂಗ, ಪಾರಿವಾಳ, ಪೆಲಿಕನ್, ಪೆಂಗ್ವಿನ್, ಪ್ಲಾಟಿಪಸ್ ಪರಿಚಯಮಾಡಿಸಿ, ಪತ್ತೆದಾರಿ ಪ್ರತಿಭಾ, ಪುಟ್ಟಗೌರಿ ಪಾಲಿಸಿ, ಪಾಸ್ತಾ, ಪಿಜ್ಜಾ, ಪಫ್ ಪೇಸ್ಟರಿ ಫಲಾಹಾರ ಪಾರ್ಟಿ ಮಾಡಿದರು.

'ಮ'ಕಾರದ ಮೇಲಿನ ಮುಗಿಯದ ಮಮಕಾರ'ಮ'ಕಾರದ ಮೇಲಿನ ಮುಗಿಯದ ಮಮಕಾರ

ಪ್ರವಾಸ ಪಟ್ಟಣಗಳಾದ, ಪಾಕಿಸ್ತಾನ, ಪಾಂಡಿಚೇರಿ, ಪಟ್ಟದಕಲ್ಲು, ಪಿರಿಯಾಪಟ್ಟಣ, ಪುಟ್ಟಪರ್ತಿ, ಪುಣೆ, ಫಿಲಿಪೈನ್, ಪ್ಯಾರಿಸ್ನ, ಪ್ರಾಣೇಶ್ ಪುಂಡರಿರುವರೆಂದರು.

ಪಾಲಕಾಡ್, ಪಳನಿಯಲ್ಲಿ, ಪಾಪನಾಶಂ, ಪಲ್ಲವಿ ಪಂತುವರಾಳಿ, ಪೂರ್ಣಚಂದ್ರಿಕೆ, ಪ್ರಣಮಾಮ್ಯಹಮ್, ಪಾಹಿಮಾಂಶ್ರೀ, ಪರಾನ್ಮುಖ, ಪರಿಪಾಲಯಮಾಂ, ಪಾಲಿಂಚು, ಪರಾಕೇಲ, ಪರುಲನಮಾಟ, ಪರಾಶಕ್ತಿಮನುಪರಾ, ಪಕ್ಕಳ, ಪವಡಿಸು ಪರಮಾತ್ಮನೆಂದು ಪತ್ರ, ಪುಷ್ಪ, ಪಾರಿಜಾತದಿಂದ ಪರಿಪರಿಯಾಗಿ ಪೂರೈಸಿದರು.

ಪರ್ವತ ಪ್ರೇಮಿಗಳಾದ ಪಾಮರರು ಪಶುಪತಿನಾಥ, ಪಶುಪತೀಶ್ವರ, ಪಾಣಿಪೀಠ, ಪಂಚಮುಖಿಯನ್ನು ಪ್ರಾಣಾಯಾಮ, ಪೂರ್ಣಾಹುತಿ, ಪಿಂಡಪ್ರದಾನ, ಪಾದಾರ್ಪಣೆಯಿಂದ ಪರಬ್ರಹ್ಮ ಪರಮೇಶ್ವರನ್ನ ಪರಿಕ್ರಮದಿಂದ ಪರಿಪೂರ್ಣರಾಗಿಸಿದರು.

ಪ್ರಭುದ್ದಾಲಯದಲ್ಲಿ ಪನ್ನಗಾಭರಣ, ಪ್ರಣವ್ ಪಾತ್ರ ಪರಿಚಯಸಿಕೊಂಡು ಪರದೇವಿಯನ್ನು ಪಟ್ಟಪುರಾಣಿ, ಪೀತಾಂಬರದಾರಿ, ಪದ್ಮಪ್ರಿಯೆ, ಪದ್ಮಹಸ್ತೆ, ಪಂಚಾಶತಪೀಠರೂಪಿಣಿಯೆಂದು ಪಠಿಸಿದರು.

ಪ್ರಜಾವಾಣಿ ಪೇಪರಿನಲ್ಲಿ ಪ್ರಬಂಧ, ಪೀಠಿಕೆ, ಪದಪುಂಜವನ್ನು ಪ್ರಮೀಳಾ, ಪೂರ್ಣಿಮಾ ಪ್ರಯೋಗಿಸಿ, ಪಡುವಾರಹಳ್ಳಿ ಪಾಂಡವರು, ಪ್ರೇಮಲೋಕ, ಪಿಂಕ್ಪಾಂತರ್, ಪ್ರೀತಿಯಲೋಕ, ಪಾಗಲ್, ಪಡೊಸಾನ್, ಫಣಿಯಮ್ಮ, ಪೋಸ್ಟ್ಮಾಸ್ಟರ್, ಪುಷ್ಪಕವಿಮಾನ, ಪೂಜಾರಿಯನ್ನು ಪಾತಕ್ಕ, ಪಂಡರೀಬಾಯಿ, ಪುಟ್ನಂಜಿ ಪರಮಾನಂದಿಸಿದರು,

ಪಾಲಿಟಿಕ್ಸ್ ಪ್ರಿಯ ಪುಲಿಕೇಶೀ ಪ್ಲಮ್, ಪೀಚ್, ಪರಂಗಿ, ಪೊಟಾಟೊ, ಪುದೀನಾ ಪಂಪ್ಕಿನ್, ಪಡವಲಕಾಯಿ, ಫಲಪ್ರದರ್ಶನದಲ್ಲಿರಿಸಿ, ಪತ್ರಿಕೆಯಲ್ಲಿ ಪುಟಾಣೆಗಳೆಲ್ಲಾ, ಪೀಚು ಪೀಚಾಗಿದ್ದ ಪಾಪಪಾಂಡು ಪಂಚೆ, ಪೇಠ, ಪಾದರಕ್ಷೆ, ಪರಾಕಿನಿಂದ ಪಲ್ಲಕ್ಕಿಯಲ್ಲಿ ಪಿಸ್ತೂಲು ಪಟಾಯಿಸಿದರು.

ಪೂರ್ಣಚಂದ್ರ ಪದ್ಮಾವತಿಯ ಪಾದದಲ್ಲಿ 'ಪಾಲಿಗೆ ಬಂದದ್ದು ಪಂಚಾಮೃತವೆಂದರು.'

English summary
An article by Seetha Keshava, Sydney, Australia on Kannada words starting from P.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X