• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಗ್ಲಿಷ್ ಹಾವಳಿ ನಡುವೆ ಇಂಥ ಪದಗಳು ಉಳಿಯಲಿ

By * ಮಹೇಶ್ ಗಜಬರ, ಚಿಕ್ಕೋಡಿ
|

ಉತ್ತರ ಕರ್ನಾಟಕದ ಕನ್ನಡ ಭಾಷೆ ಸೊಗಡಿನ ಬಗ್ಗೆ, ಅಲ್ಲಿ ಬಳಸಲಾಗುವ ಪದಗಳ ಬಗ್ಗೆ ಬರೆಯುತ್ತಾ ಹೋದರೆ ಅದಕ್ಕೆ ಕೊನೆ ಮೊದಲೆಂಬುದಿಲ್ಲ. ಇಂಗ್ಲಿಷ್ ಹಾವಳಿಯ ನಡುವಿಲ್ಲಿ ಇಂತಹ ಪ್ರಾದೇಶಿಕ ಪದಗಳು ಬಳಕೆಯಲ್ಲಿರಲಿ ಮತ್ತು ಇತರರೂ ಇವುಗಳ ಬಗ್ಗೆ ಅರಿಯುವಂತಾಗಲಿ ಎಂಬುದೇ ನಮ್ಮ ಆಶಯ - ಸಂಪಾದಕ.

ಟೊಪಿಗಿ = ಟೋಪಿ

ಟಿಕಳಿ = ಬಿಂದಿ

ಟೊಂಗಿ = ರೆಂಬೆ

ಟೊಣಪ = ಡುಮ್ಮ, ದಡಿಯ

ದೌಡ, ಲಗುನ = ಬೇಗ

ಡರಿ, ಡರಿಕಿ = ತೇಗು

ಡರಿಕೆ = ತೇಗು

ಡಬ್ಬಿ = ಡಬ್ಬ

ತಡಿ = ತಾಳು

ತಂಬಿಗಿ ತೊಗೊಂಡು ಹೋಗೂದು = ಮಲವಿಸರ್ಜನೆ ಕಾರ್ಯ

ತಿಂಡಿ = ಕೆರೆತ (ಹೈದರಬಾದ ಕರ್ನಾಟಕ ಪ್ರದೇಶದಲ್ಲಿ ಮಾತ್ರ... ತಿಂಡಿ ಎನ್ನುವ ಶಬ್ದ ಮುಂಬೈ -ಕರ್ನಾಟಕ ಪ್ರದೇಶದಲ್ಲಿ ಇಲ್ಲವೆ ಇಲ್ಲ)

ತುಟ್ಟಿ -ಧೀಡೀ = ದುಪ್ಪಟ್ಟು, ದುಬಾರಿ

ತೊಲೆ = ಪಿಲ್ಲರ್‍

ತಿಣುಕು = ತೀವ್ರ ಪ್ರಯತ್ನ

ತುಡುಗು = ಕಳುವು, ಕಳ್ಳತನ

ತುಡುಗ = ಕಳ್ಳ

ತುಡುಗಿ = ಕಳ್ಳಿ

ತರುಬು = ನಿಲ್ಲಿಸು

ತಳಗ = ಕೆಳಗೆ

ತಂಬು = ಟೆಂಟು

ತೋಂಡಿ = ಮೌಖಿಕ ಪರೀಕ್ಷೆ, oral exam, viva(ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಹೆಚ್ಚಾಗಿ)

ತವುಡು, ತೌಡು = ಹೊಟ್ಟು

ತೌಡು ಕುಟ್ಟು = ವ್ಯರ್ಥ ಶ್ರಮಪಡು, ಅನಗತ್ಯವಾದುದನ್ನು ಮಾಡು

ತಾಟು, ಗಂಗಾಳ(ಉ.ಕ) = ತಟ್ಟೆ(ದ.ಕ)(ತಟ್ಟೆ ಶಬ್ದ ಬಳಕೆಯಲ್ಲಿ ಇಲ್ಲ)

ತಾಡಪತ್ರಿ = ಟಾರ್ಪಾಲು

ತಗ್ಗು(ಮುಂ.ಕ) = ಹಳ್ಳ, ಗುಂಡಿ(ದ.ಕ) ಕುಣಿ(ಹೈ.ಕ)

ತತ್ತಿ(ಉ.ಕ) = ಮೊಟ್ಟೆ(ದ.ಕ)

ತವೆ, ತವಾ = ಕಾವಲಿ, ಹಂಚು

ತಾರಾತಿಗಡಿ = ಮೋಸ, ವಂಚನೆ

ತಿರುಗು ತಿಪ್ಪ = ಕೆಲಸವಿಲ್ಲದೆ ಅಡ್ಡಾಡೋ ಉಡಾಳ

ತ್ರಾಸ = ತೊಂದರೆ, ಕಷ್ಟ

North Karnataka dialect

ಥಂಡಿ = ಚಳಿ

ದಮ್ ಹಿಡಿ = ತಾಳು

ದೋತ್ರ = ಧೋತಿ

ದವಾಖಾನೆ = ಆಸ್ಪತ್ರೆ

ದೀಡ್ ಪಂಡಿತ = ಜಾಣ ದಡ್ಡ(ತಾನೇ ಜಾಣ ಅಂತ ತಿಳಿದುಕೊಂಡವ)

ದೀಡ್ = ಒಂದುವರೆ

ದಂಟು = ಜೋಳದಲ್ಲಿ ತೆನೆ ಬಿಟ್ಟು ಉಳಿದ ಭಾಗ

ಧಾರಣಿ = ದರ

ಧಂದೆ = ವ್ಯಾಪಾರ

ನಾಷ್ಟಾ, ನ್ಯಾರಿ = ತಿಂಡಿ, ಬ್ರೆಕ್ ಫಾಸ್ಟ್

ನೌಕ್ರಿ = ನೌಕರಿ, ಕೆಲಸ

ನಳ, ಛಾವಿ = ನಲ್ಲಿ/ಕೊಳಾಯಿ

ನಪಾಸು = ಫೇಲು

ನಡ = ಸೊಂಟ

ನಿಚ್ಚಣಿಕಿ = ಏಣಿ (ಏಣಿ ಶಬ್ದ ಬಳಕೆಯಲ್ಲಿ ಇಲ್ಲ)

ನಕ್ಕಿ = ನಿಜವಾದ, ಗ್ಯಾರಂಟಿ (ಕೆಲವರು ನಿಕ್ಕಿ ಅಂತ ಬಳಸ್ತಾರೆ, ಅದು ತಪ್ಪು)

ನಡಬರಕ, ನಡಕ್ = ಮಧ್ಯದಲ್ಲಿ(ಮಾತಿನಲ್ಲಿ)

ನಸೀಬು = ಹಣೆಬರಹ

ನಸುಕು = ಮುಂಜಾವು, ಅರುಣೋದಯ

ನಸುಕುಹರಿ ಹೊತ್ತಿಗೆ = ಬೆಳಗಾಗು ಹೊತ್ತಿಗೆ

ಪಡಸಾಲಿ = drawing room

ಪುಠಾಣಿ = ಹುರಿಗಡ್ಲೆ, ಹುರಿಗಡಲೆ

ಪೇರುಹಣ್ಣು = ಪೇರಲಹಣ್ಣು, ಸೀಬೆ ಹಣ್ಣು

ಪಡ್ = ದೋಸೆ ಹಿಟ್ಟಿನಿಂದ ಮಾಡಿದ ಒಂದು ಬಗೆಯ ತಿನಿಸು, ಗುಂಡಪಂಗಳ

ಪಟಕಾ = ಪೇಟಾ

ಪಾಳೆ, ಪಾಳಿ= ಸರತಿ/ಸಾಲು

ಪಾಟಿ = ಸ್ಲೇಟು

ಪಟ್ಟಾ = ಬೆಲ್ಟು

ಪರಕಾರ, ಪಲಕರ್ = ಲಂಗ

ಪಾತೇಲಿ = ಪಾತ್ರೆ

ಪಾಂಟಣಿಗೆ, ಪಾವಟಣಗಿ = ಮೆಟ್ಟಿಲು

ಪಂಖಾ = ಫ್ಯಾನ್

ಪಲ್ಲಂಗ = ಮಂಚ

ಪಗಾರ = ಸಂಬಳ

ಪಂಚೇತಿ = ಫಜೀತಿ

ಪಾವಣೆರು = ಬೀಗರು, ನೆಂಟರು(ಬೆಳಗಾವಿ ಜಿಲ್ಲೆಯಲ್ಲಿ)

ಪಟ್ಟಿ = ಚಂದಾ

ಪರ್ಚಿ, ಫರ್ಸಿ = ಕೆಳಗಿನ ಟೈಲ್ಸ್

ಪಕಳಿ, ಪಕಳೆ = ಹೂವಿನ ದಳ, ಎಸಳು

ಪತಂಗ = ಗಾಳಿಪಟ

ಪತ್ತಲ = ಸೀರೆ

ಪಲ್ಟಿ = ಲಾಗ, ತಲೆಕೆಳಗಾಗು

ಪಂಗತಿ = ಪಂಕ್ತಿ(ಊಟದ)

ಪಾಯಿಖಾನೆ = ಶೌಚಗೃಹ

ಪಲ್ಲೆ = ಸೊಪ್ಪು(ಸೊಪ್ಪು ಅನ್ನೊ ಶಬ್ದ ಇಲ್ಲ)

ಪಣತಿ, ಪಂತಿ = ಹಣತೆ

ಪುಂಡೆಪಲ್ಲೆ = ಒಂದು ತರಹದ ಸೊಪ್ಪು(ರೊಟ್ಟಿ ಜೊತೆ ಉಪಯೋಗಿಸುತ್ತಾರೆ)

ಪಿಶಿವಿ = ಕೈಚೀಲ

ಫರಾಳ = ಫಲಾಹಾರ , ತಿಂಡಿ

ಫರ್ಕ್, ಫರ್ಖ್ = ಪರಿಣಾಮ, ಬದಲಾವಣೆ (ಉದಾ:ನನಗೆನು ಫರ್ಕ್ ಬೀಳೊದಿಲ್ಲ)

ಬಯಲಕಡಿ = ಮಲವಿಸರ್ಜನೆ

ಬಟಾಟಿ = ಆಲುಗಡ್ಡೆ

ಭಾಜಿ = ಪಲ್ಲೆ

ಬಕ್ಕಣ = ಜೇಬು

ಬ್ಯಾಸ್ತಾರ/ಬೆಸ್ತವಾರ = ಗುರುವಾರ

ಬಂಡಿ = ಚಕ್ಕಡಿ

ಬ್ಯಾನಿ = ರೋಗ

ಬಾರಕೋಲು = ಚಾವಟಿ, ಚಾಟಿ

ಬೆದರು, ಅಂಜು = ಹೆದರು

ಬೋದು = ಕುಣಿ, ತಗ್ಗು(ಹೊಲದಲ್ಲಿ)

ಬಗಲು = ಮಗ್ಗಲಲ್ಲಿ, ಪಕ್ಕದಲ್ಲಿ

ಬಡ್ಡ್ಯಾಗ್ = ಬುಡದಲ್ಲಿ

ಬಂಗಾರ = ಚಿನ್ನ(ಚಿನ್ನ ಶಬ್ದ ಬಳಕೆಯಲ್ಲಿ ಇಲ್ಲ)

ಬಡಗಿ, ಬಡಿಗೆ = ಬೆತ್ತ

ಬರೊಬ್ಬರ್ = ಸರಿ,ಯೋಗ್ಯ

ಬೆರಕಿ = ಜಾಣ

ಬುತ್ತಿ = ಹೊಲ-ಆಫೀಸಿಗೆ ಒಯ್ಯುವ ಟೀಫಿನ್ ಬಾಕ್ಸ್

ಬುರುಗು = ನೊರೆ

ಬೋಗಾಣಿ = ದೊಡ್ಡ ಪಾತ್ರೆ

ಭಕ್ಕರಿ = ರೊಟ್ಟಿ(ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಮಾತ್ರ)

ಭಾಂಡಿ = ಪಾತ್ರೆ

ಭಿಡೆ =ಸಂಕೋಚ

ಮನೂಕ = ಒಣ ದ್ರಾಕ್ಷಿ

ಮುಂದ? = ಮಾತಾಡುವಾಗ "ಆಮೇಲೆ?" ಅನ್ನುತ್ತಾರಲ್ಲ, ಹಾಗೆ

ಮನಗಂಡು = ರಗಡು, ಬೇಕಾಗುವಷ್ಟು

ಮಳ್ಳ = ಮರುಳ, ಪೆದ್ದ

ಮುತ್ಯಾ = ತಾತ, ಅಜ್ಜ

ಮುಂದ = ಮುಂದೆ

ಮಂದಿ = ಜನ

ಮಾಸ್ತರ (ಉ.ಕ) = ಮೇಷ್ಟ್ರು(ದ.ಕ)

ಮಾಳಗಿ = ಮಾಳಿಗೆ, ಟೆರೇಸು

ಮಾರಿ = ಮುಖ

ಮಾಂಶಿ = ತಾಯಿಯ ಅಕ್ಕ ಅಥವಾ ತಂಗಿ(ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಮಾತ್ರ)

ಮುಸಡಿ,ಮಸಡಿ= ಮುಖ (ಹೆಚ್ಚಾಗಿ ಬೈಗಳಿನಲ್ಲಿ ಉಪಯೋಗ)

ಮುದ್ದಾಮ,ಮುದ್ದಾಂ=ಸುಮ್ಮ ಸುಮ್ಮನೆ

ಮಂಗ್ಯಾ,ಮಂಗ(ಉ.ಕ)=ಕಪಿ.ಕೋತಿ(ದ.ಕ)

ಮುಠ್ಠಲಿ ಹಣ್ಣು=ಗೇರು ಹಣ್ಣು

ಮಸಾರಿ ಭೂಮಿ=ಕೆಂಪು ಭೂಮಿ

ಮುಕಳಿ(ಮುಂ.ಕ)=ಕುಂಡಿ(ಹೈ.ಕ) ,ತಿಕ(ದ.ಕ)(ತಿಕ ಶಬ್ದ ಬಳಕೆಯಲ್ಲಿ ಇಲ್ಲ)

ಮರ = ಮೊರ

ಮರ್ಜಿ = ಇಷ್ಟ, ಒಲವು

ಮಾಲಿ, ಮಾಲೆ = ಹಾರ(ಹಾರ ಶಬ್ದ ಬಳಕೆಯಲ್ಲಿ ಇಲ್ಲ)

ಮುಂಜಾನೆ = ಬೆಳಿಗ್ಗೆ(ಬೆಳಿಗ್ಗೆ ಶಬ್ದ ಬಳಕೆಯಲ್ಲಿ ಇಲ್ಲ)

ಯಾಂಬಾಲ್ =ಯಾರಿಗೆ ಗೊತ್ತು/ಯಾವನು ಬಲ್ಲ(ಬೆಳಗಾವಿ ವಿಶೇಷ..ಈಗಲೂ ಚಾಲ್ತಿಯಲ್ಲಿದೆ)

ರೊಕ್ಕ = ಹಣ

ರಕರಕ = ಕಿರಿಕಿರಿ

ರವಿವಾರ = ಭಾನುವಾರ

ರಸಕಸಿ = ಮನಸ್ತಾಪ

ರಟ್ಟೆ = ತೋಳು(ಕೈ ತೋಳು)

ರಂಟೆ = ಕುಂಟೆ

ರುಮಾಲು = ಕರ್ಚಿಫ್

ಲುಂಗಿ = ಪಂಚೆ (ಪಂಚೆ ಶಬ್ದ ಬಳಕೆಯಲ್ಲಿ ಇಲ್ಲ)

ಲಗೂನ = ಬೇಗ

ಲಾಟೀನು = ಲಾಂದ್ರ

ಲಡಿ = ದಾರದ ಉಂಡೆ

ವಗ್ಗರಣಿ = ವಗ್ಗರಣೆ ಹಾಕಿದ ಮಂಡಾಕ್ಕಿ(ಹೈದರಾಬಾದ ಕರ್ನಾಟಕ ವಿಶೇಷ, ಬೀದರನಲ್ಲಿ -ಸುಸಲಾ ಅಂತಾರೆ)

ವಾಟೆ, ವಾಟಗಾ = ಲೋಟ, ಬಟ್ಟಲು(ಲೋಟ ಎಂಬ ಶಬ್ದ ಇಲ್ಲ)

ವೈನಿ = ಅತ್ತಿಗೆ

ವಣಗಿ = ಪಲ್ಲೆ, ಪಲ್ಯ

ವಾಯಿದೆ = ಕಾಲಾವಕಾಶ

ವಸ್ತ್ರ = ರುಮಾಲು,ಕರ್ಚಿಫ್,ಟಾವೆಲ್ಲು

ಶಾಣ್ಯಾ = ಜಾಣ

ಶಿಕೋಣಿ = ಟ್ಯೂಷನ್, ಮನೆಪಾಠ

ಶೇಂಗಾ(ಉ.ಕ) = ಕಡಲೆಕಾಯಿ(ದ.ಕ)(ಉ.ಕದಲ್ಲಿ ಕಡಲೆಕಾಯಿ ಅಂದ್ರೆ ಬಟಾಣಿ ಕಡ್ಲೆ)

ಶಿರಾ(ಉ.ಕ) = ಕೇಸರಿಭಾತು(ದ.ಕ)

ಶಾಯಿ = ಮಸಿ

ಶಾಂಡಿಗೆ = ಸಂಡಿಗೆ

ಸರs: ಸಾರ್!

ಸಸಾ, ಸಹಸಾ = ಸರ್ವೇ ಸಾಧಾರಣ/ಸಾಮಾನ್ಯದ

ಸಂಡಾಸ = ಮಲವಿಸರ್ಜನೆ

ಸೋವಿ = ಅಗ್ಗ

ಸೂಟಿ = ರಜೆ(ರಜೆ ಶಬ್ದ ಬಳಕೆಯಲ್ಲಿ ಇಲ್ಲ)

ಸವುಡು/ಸೌಡು = ಬಿಡುವು

ಸಕ್ರಿ = ಸಕ್ಕರೆ

ಸಾಲಿ/ಸಾಲಿಗುಡಿ = ಶಾಲೆ

ಸಂದಿ = ಓಣಿ, ಗಲ್ಲಿ

ಸಂಗಾಟ = ಜೊತೆ, ಸಂಗಡ

ಸಜ್ಜಿಗಿ = ಬೆಲ್ಲ ಮತ್ತು ರವೆ ಹಾಹಿ ಮಾಡಿದ ತಿಂಡಿ

ಸೈಲ, ಸಡ್ಲ = ಸಡಿಲು

ಸರಹೊತ್ತು = ನಡುರಾತ್ರಿ

ಸಾರು = ಕಡಿಮೆ ಬೇಳೆ ಹಾಕಿದ ಸಾಂಬಾರು, ತೆಲುಗಿನ ರಸಂ

ಸಂದೂಕ = ದೊಡ್ಡ ಮರದ ಪೆಟ್ಟಿಗೆ

ಸುತ್ಳಿ, ಸುತ್-ಳಿ = ಟೈನಿ ದಾರ

ಸಮಯ್ = ದೇವರ ಮುಂದಿನ ದೀಪ

ಸಿಂಪಿಗ = ದರ್ಜಿ, ಟೈಲರ್

ಹಂಗ = ಹಾಗೇ

ಹಂಗಾರ = ಹಾಗಾದರೆ

ಹಂಗಂದ್ರಾ = ಹಾಗೆ ಹೇಳಿದರೆ?

ಹಂಗಂದ್ರ = ಹಾಗೆ ಅಂದರೆ

ಹಂಗ್ಯಾಕ = ಹಾಗೇಕೆ

ಹೋತು = ಹೋಯಿತು

ಹರ್ಯಾಗೆ = ಬೆಳಿಗ್ಗೆ

ಹೊಯ್ಕೊಳೊದು = ಬಾಯಿ ಬಾಯಿ ಬಡ್ಕೊಳೋದು

ಹಿಂದಾಗಡೆ = ಆಮೇಲೆ, ಆನಂತರ

ಹಾದಿ = ದಾರಿ

ಹಡಿ = ಹೆರು

ಹಪಾಪಿ = ಆಸೆಬುರುಕ

ಹಂತೇಕ = ಹತ್ತಿರ

ಹುರುಹುರು = ಸಮಾಧಾನವಿಲ್ಲದಿರುವುದು

ಹೌಸು = ಉತ್ಸಾಹ

ಹಳ್ಳ = ಝರಿ, ಸಣ್ಣಗೆ ಹರಿಯುವ ನೀರು

ಹಿಟ್ಟಿನ ಗಿರಣಿ = ಫ್ಲೋರ್‍ ಮಿಲ್

ಹಾರೋರ್, ಹಾರವರು = ಬ್ರಾಹ್ಮಣರು

ಹಡ್ಡುವುದು(ಮುಂಬೈ ಕರ್ನಾಟಕ) = ತೊಡುವುದು(ಹೈ.ಕ), ಅಗೆಯುವುದು(ದ.ಕ)

ಹಣಿಗೆ = ಬಾಚಣಿಕೆ

ಹಂತಿ = ಭತ್ತ ರಾಶಿ ಮಾಡಲು ಎತ್ತುಗಳನ್ನು ಒಂದು ಕಂಬಕ್ಕೆ ಕಟ್ಟಿ ಸುತ್ತಲು ತಿರುಗಿಸುವುದು.

ಹಂದರ = ಚಪ್ಪರ

ಹಣಕು, ಹಣಕಿ = ಇಣಕು

ಹಮಾಲ್ = ಕೂಲಿ ಕೆಲಸಗಾರ

ಹಲ್ಕಟ್ = ನೀಚ

ಹುಂಬ = ಅವಿವೇಕಿ

ಹುಗ್ಗಿ = ಕುಟ್ಟಿದ ಗೋಧಿ ಮತ್ತು ಬೆಲ್ಲ ಹಾಕಿ ಬೇಯಿಸಿ ತಯಾರಿಸಿದ ಪಾಯಸ

ಹಿರೆರು = ಹಿರಿಯರು

ಹೋರಿ = ಗೂಳಿ

« ಗರಿಗರಿ ಧಾರವಾಡ ಕನ್ನಡ ಪದಗಳ ಗಿರಮಿಟ್ಟು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
North Karnataka dialect, few words and it's meaning with example.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more