ಗರಿಗರಿ ಧಾರವಾಡ ಕನ್ನಡ ಪದಗಳ ಗಿರಮಿಟ್ಟು

ಕ
ಕಾಲ್ಮಡಿ = ಮೂತ್ರ ವಿಸರ್ಜನೆ, ಲಘುಶಂಕೆ
ಕಾಕು, ಕಕ್ಕಿ = ಚಿಕ್ಕಮ್ಮ, ದೊಡ್ಡಮ್ಮ
ಕಾಕಾ, ಕಕ್ಕ= ಚಿಕ್ಕಪ್ಪ, ದೊಡ್ಡಪ್ಪ
ಕಟಕ ರೊಟ್ಟಿ, ಕಟರು ರೊಟ್ಟಿ = ಬಿರುಸಾದ ರೊಟ್ಟಿ, ಒಣಗಿದ ರೊಟ್ಟಿ
ಕದ = ಬಾಗಿಲು
ಕಂದೀಲು = ಲಾಂದ್ರ
ಕಾಕಡಿ = ಎಳೆ ಸವತೆಕಾಯಿ
ಕಿರಾಣಿ ಅಂಗಡಿ = ದಿನಸಿ ಅಂಗಡಿ(ಪ್ರಾವ್ಹಿಜನ್ ಸ್ಟೋರ್)
ಕುಬಸ = ರವಿಕೆ, ಬಸುರಿಯಾದಾಗ ಹೆಣ್ಣಿಗೆ ಮಾಡುವ ಆತಿಥ್ಯ = ಸೀಮಂತ(ಸೀಮಂತ ಶಬ್ದ ಇಲ್ಲ)
ಕುಂದಾ = ಒಂದು ಬಗೆಯ ಹಾಲಿನ ಸಿಹಿ, ಬೆಳಗಾವಿಯ ಸ್ಪೇಷಲ್!
ಕಾಲ್ಮರಿ = ಚಪ್ಪಲಿ
ಕಪಾಟು = ಅಲಮಾರ(ಕಬೋರ್ಡ್)
ಕಸಬರಿಗೆ = ಪೊರಕೆ
ಕತ್ತಿ = ಕತ್ತೆ(ಖಡ್ಗ ಅಲ್ಲ)
ಕಂಬಳಿ = ಕುರಿ, ಆಡಿನ ಕೂದಲಿನಿಂದ ಮಾಡಿದ ಹೊದಿಕೆ
ಕತಿ, ಕಥಿ = ಕತೆ, ಕಥೆ
ಕಡಾಣಿ = ಕೀಲು(ಎತ್ತಿನ ಗಾಡಿಯಲ್ಲಿ ಉಪಯೋಗಿಸುವುದು)
ಕುಡುಗೋಲು, ಕುರುಪಿ = ಹುಲ್ಲು ಕೊಯ್ಯಲು ಉಪಯೋಗಿಸುವ ಕತ್ತಿ
ಕಪಾಲ, ಕಪಾಳ = ಗಲ್ಲ
ಕಸಾಬ = ಕಟುಕ
ಕಾಯಿಪಲ್ಲೆ = ತರಕಾರಿ
ಕಾಲಚೀಲ = ಸಾಕ್ಸ್
ಕೂರಿಗೆ = ಬೀಜ ಬಿತ್ತಲು ಉಪಯೋಗಿಸುವ ಉಪಕರಣ
ಕುಂಟಿ = ಕುಂಟೆ(ಹೊಲದಲ್ಲಿ ಉಪಯೋಗಿಸುವ ಉಪಕರಣ)
ಕಿಸೆ = ಜೇಬು
ಖ
ಖಜ್ಜೂರಿ = ಖರ್ಜೂರ
ಖರೆ = ನಿಜ
ಖಾನೆ = ವಿಭಾಗ
ಖೊಳಮಿಸುವುದು = ತುಂಬ urgent ಆಗುವುದು
ಖೋಲಿ = ಕೋಣೆ
ಖಬರ = ಮಾಹಿತಿ, ಅರಿವು (ಹೆಚ್ಚಾಗಿ ಬೈಗಳಿನಲ್ಲಿ ಉಪಯೋಗ)
ಖಾರಬ್ಯಾಳಿ = ಹೆಚ್ಚು ಬೇಳೆ ಹಾಕಿದ ಸಾಂಬಾರು
ಖಡುವು = ಚಾಕ್ ಪೀಸ್
ಖುರುಪಿ = ಕಳೆ ಕೀಳುವುದಕ್ಕೆ ಉಪಯೋಗಿಸುವ ಸಣ್ಣ ಕುಡುಗೋಲು
ಖಾರಾ = Mixture
ಖಯಾಲಿ = ಗೀಳು
ಖಾನಾವಳಿ = ಮೆಸ್ಸು,ಊಟ ಮಾತ್ರ ಸಿಗುವ ಹೋಟೆಲ್ಲು
ಖಾಸಾ = ಸ್ವಂತ(ಸಂಬಂಧದಲ್ಲಿ)
ಗ
ಗಿರಮಿಟ್ಟು = ಏನೇನೋ ಹಾಕಿ ಗಿರಿಗಿರಿ ತಿರುಗಿಸಿ ಮಾಡಿದ ಚುರುಮುರಿ (ಭೇಲ್ ಪುರಿ)
ಗಿಡ್ಡ = ಕುಳ್ಳ
ಗಪ್ಪು = ಸುಮ್ಮನೆ
ಗುಡಿ = ದೇವಸ್ಥಾನ (ದೇವಸ್ಥಾನ ಎಂಬ ಶಬ್ದ ಇಲ್ಲ)
ಗುಡ್ಡ = ಬೆಟ್ಟ(ಬೆಟ್ಟ ಎಂಬ ಶಬ್ದ ಇಲ್ಲ)
ಗಿಡ = ಮರ (ಮರ ಅನ್ನುವ ಶಬ್ದವೆ ಇಲ್ಲ, ಸಣ್ಣದಿರಲಿ, ದೊಡ್ಡದಿರಲಿ ಎಲ್ಲದಕ್ಕೂ ಗಿಡ)
ಗ್ವಾದನಿ = ದನಗಳ ಕೊಟ್ಟಿಗೆ, ಹಟ್ಟಿ
ಗಡಗಿ, ಗಡಿಗೆ = ಮಡಿಕೆ
ಗಂಗಾಳ = ತಾಟು, ತಟ್ಟೆ
ಗಡಬಡ = ಅವಸರ, ಆತುರ
ಗದರಿಸು = ಹೆದರಿಸು, ರೇಗಾಡು
ಗಬ್ಬ = ಗರ್ಭಿಣಿ, ಬಸಿರು(ದನಗಳಿಗೆ ಮಾತ್ರ ಬಳಕೆ)
ಗೌಂಡಿ = ಗಾರೆ ಕೆಲಸದವ
ಗಿರಣಿ = ಹಿಟ್ಟು ಮಾಡುವ ಕಾರ್ಖಾನೆ
ಗಿಲಾವು = ಪ್ಲಾಸ್ಟರ್
ಗೋಣು = ಕತ್ತು
ಗುಳದಾಳಿ = ತಾಳಿ, ಮಾಂಗಲ್ಯ
ಗೋಂಜಾಳ = ಮೆಕ್ಕೆಜೋಳ
ಗೊಬಾನಿ = ಹಸಿ ಟೊಮೆಟೊ
ಚ
ಚುರುಮುರಿ(ಮು೦ಬೈ ಕರ್ನಾಟಕ) = ಮಂಡಾಳ(ಹೈದರಾಬಾದ ಕರ್ನಾಟಕ), ಮಂಡಕ್ಕಿ(ಮಧ್ಯ ಕರ್ನಾಟಕ), ಕಡ್ಲೆಪುರಿ, ಪಪ್ಪು(ದಕ್ಷಿಣ ಕರ್ನಾಟಕ)
ಚೊಲೊ = ಒಳ್ಳೆಯವ
ಚಿಕ್ಕು ಹಣ್ಣು = ಸಪೋಟ
ಚಾಳೀಸು = ಕನ್ನಡಕ
ಚರಿಗಿ = ತಂಬಿಗೆ
ಚಿಮಣಿ ಎಣ್ಣಿ = ಸೀಮೆ ಎಣ್ಣೆ (ಸೀಮೆ ಎಣ್ಣೆ ಎಂಬ ಶಬ್ದ ಇಲ್ಲ)
ಚಾವಿ = ಕೀಲಿಕೈ, ಬೀಗದ ಕೈ(ಬೀಗದ ಕೈ ಶಬ್ದ ಇಲ್ಲ)
ಚಮಚ = ಸ್ಪೂನು
ಚಂದ = ಅಂದದ, ಒಳ್ಳೆಯ
ಚಷ್ಮಾ = ಕನ್ನಡಕ
ಚಾದರ = ಹೊದಿಕೆ
ಚಡಿ = ಬೆತ್ತ
ಚಾಕರಿ = ಸೇವೆ
ಚಾವಡಿ = ಮನೆ ಮುಂದಿನ ಜಗುಲಿ
ಚಾಳಿ = ವರ್ತನೆ, ನಡತೆ
ಚಿಮಟ = ಇಕ್ಕಳ
ಚಿಮಣಿ = ಸೀಮೆ ಎಣ್ಣೆ ಬುಡ್ಡಿ
ಚಾಷ್ಟಿ = ಚೆಷ್ಟೆ, ಹಾಸ್ಯ
ಚಾಣಿಗೆ = ಜರಡಿ
ಚಿವಡಾ, ಚಿವುಡಾ = ವಗ್ಗರಣೆ ಹಾಕಿದ ಒಣ ಅವಲಕ್ಕಿ
ಛ
ಛಲೊ = ಒಳ್ಳೆಯವ
ಛಾವಿ = ನಲ್ಲಿ, ನಳ
ಛಾತಿ = ಎದೆಗಾರಿಕೆ, ಧೈರ್ಯ
ಛಾಪಿಸು = ಅಚ್ಚೊತ್ತು
ಜ
ಜಳಕ = ಸ್ನಾನ
ಜಿಗಿ = ನೆಗೆ, ಎಗರುವುದು
ಜಂಗಿ = ಬಹಳ, ಪಟ್ಟುಬಿಡದ
ಜರ್-ಕರ್ತಾ ಅಥವಾ ಜರ್-ಕಡತಾ = ಒಂದು ವೇಳೆ (ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಹೆಚ್ಚಾಗಿ)
ಜಾವಳ = ಮಗುವಿನ ಮೊದಲ ಚೌರ
ಜುಲುಮಿ = ಒತ್ತಾಯ
ಜಗುಲಿ, ಜಗಲಿ = ಕಟ್ಟೆ, ದೇವರ ಮನೆಯಲ್ಲಿರುವ ಕಟ್ಟೆ
ಜೋಪಡಿ = ಗುಡಿಸಲು
ಜಖಂ = ಗಾಯ
ಜಮಖಾನೆ, ಜಮಖಾನಿ = ನೂಲುಗಂಬಳಿ
ಜಲ್ದಿ, ಲಗೂನ, ದೌಡ = ಬೇಗ (ಇದಕ್ಕೆ ಲಗುಲಗು, ಲಗ್ ದೀಶಿ, ಲಗೂಟ ಎನ್ನುವ ಬಳಕೆಗಳೂ ಉಂಟು)
ಜಿಕ್ಕು = ಜಿಪುಣ
ಜಿಗಟು = ಜಿಡ್ಡು, ಅಂಟು
ಜೋಲಾಡು = ನೇತಾಡು, ತೂರಾಡು
ಜೋಲುಮುಖ = ಹ್ಯಾಪುಮೊರೆ, ಸಪ್ಪೆ ಮುಖ
ಜೋಕಾಲಿ = ಉಯ್ಯಾಲೆ (ಉಯ್ಯಾಲೆ ಪದ ಬಳಕೆಯಲ್ಲಿ ಇಲ್ಲ)
ಜುಜುಬಿ = ಕೇವಲ
ಜಿಬರು ಮಳೆ = ಸೊನೆ ಮಳೆ, ತುಂತುರು ಮಳೆ
ಈ ಪದ ಸಂಗ್ರಹ ಹನುಮಂತನ ಬಾಲದಂತೆ ಉದ್ದವಿರುವುದರಿಂದ ಉಳಿದ ಪದಪಟ್ಟಿಗಳನ್ನು ಮುಂದಿನ ಲೇಖನದಲ್ಲಿ ಪ್ರಕಟಿಸಲಾಗುವುದು.












Click it and Unblock the Notifications