• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೇಮದ ಹಿಂದೆ ಯಾವುದೋ ಲೆಕ್ಕಾಚಾರ!

By * ವಿನಾಯಕ ಪಟಗಾರ್, ಬೆಟ್ಕುಳಿ
|
ಮತ್ತೆ ಬಂದಿದೆ ಫೆಬ್ರವರಿ 14 - ಪ್ರೇಮಿಗಳ ದಿನ. ಯಥಾ ಪ್ರಕಾರ ಭಾರತೀಯ ಸಂಸ್ಕ್ರತಿಯ ರಕ್ಷಕರೆನಿಸಿಕೊಳ್ಳುವ ಸಂಘಟನೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಪ್ರತಿಯಾಗಿ ಸರಕಾರ ತಾನು ಪ್ರೇಮಿಗಳ ಪರ ಎಂದು ಅವರ ರಕ್ಷಣೆಗೆ ನಿಂತಿದೆ. ಇಷ್ಟಕ್ಕೂ ಇಬ್ಬರ ನಡುವಿನ ಖಾಸಗಿ ವಿಚಾರ ಸಂಬಂಧಗಳು, ಇಂದು ಸಾರ್ವಜನಿಕ ಚರ್ಚೆಗೆ ಒಳಗಾಗುತ್ತಿರುವುದು, ಅದಕ್ಕೆ ಸಂಬಂಧಪಟ್ಟ ಘಟನೆಗಳು ಅಂತಾರಾಷ್ರೀಯ ಮಟ್ಟದ ಸುದ್ದಿಯಾಗುತ್ತಿರುವುದು ಮಾತ್ರ ಸೋಜಿಗ.

ಆಸ್ತಿ ಪಾಸ್ತಿ ಹಾನಿ, ಹಿಂಸೆ, ಹಲ್ಲೆಗಳನ್ನು ಬಿಂಬಿಸುವ ಏಕಪ್ರಕಾರದ ವರದಿಗಳು ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆಯೇ ಹೊರತು, ಪ್ರೇಮಿಗಳ ದಿನಾಚರಣೆಯ ನೆಪದಲ್ಲಿ ನಡೆಯುವ ಮಾದಕ ವಸ್ತುಗಳ ಸೇವನೆ, ಅತ್ಯಾಚಾರ ಪ್ರಕರಣಗಳು, ಮುಕ್ತ ಲೈಂಗಿಕತೆ ಬಗ್ಗೆ ಬೆಳಕು ಚೆಲ್ಲುವಂತಹ ವರದಿಗಳು ಸಾಕಷ್ಟು ಪ್ರಮಾಣದಲ್ಲಿ ಪ್ರಕಟವಾಗದಿರುವುದು ಮಾತ್ರ ವಿಪರ್ಯಾಸ.

ಪ್ರೀತಿ ಪ್ರೇಮ ಎನ್ನುವುದು ಈ ಭೂಮಿಯಲ್ಲಿ ಮಾನವ ಸಂತತಿ ಪ್ರಾರಂಭವಾದಾಗಿನಿಂದ ಇದೆ. ಖ್ಯಾತ ಯುವ ಸಾಹಿತಿಗಳಾದ ಜಯಂತ ಕಾಯ್ಕಣಿಯವರು ಒಂದು ಕಡೆ ಪ್ರೀತಿ ಅಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು ಎಂದು ಹೇಳಿದ್ದಾರೆ. ಗಂಡು ಹೆಣ್ಣಿನ ನಡುವೆ ಪ್ರೀತಿ ಮೂಡಲು ಕಾರಣಗಳು ಬೇಕಿಲ್ಲ. ಅದು ತಂತಾನೇ ಹುಟ್ಟಿಕೊಳ್ಳುತ್ತೆ. ಜಗತ್ತಿನಲ್ಲಿ ಅತೀ ಹೆಚ್ಚು ಸಾಹಿತ್ಯ, ಸಿನಿಮಾ, ನಾಟಕ, ರಚನೆಯಾಗಿದ್ದು ಪ್ರೀತಿ, ಪ್ರೇಮದ ಬಗ್ಗೆ ಅಂದರೆ ಅದರ ಅಗಾಧತೆಯ ಬಗ್ಗೆ ಅರ್ಥಮಾಡಿಕೊಳ್ಳಬಹುದು. ಇಂದಿನ ದಿನಗಳಲ್ಲಿ ನೈಜ ಪ್ರೀತಿ ಯಾವುದೆಂದು ಗೊತ್ತಾಗದ ಗೊಂದಲದಲ್ಲಿ ನಾವಿದ್ದೇವೆ. ಮೊದಲಿನಂತೆ ಇವತ್ತು ಪ್ರೀತಿ ಅಕಾರಣವಾಗಿ ಉಳಿದಿಲ್ಲ. ಪ್ರೀತಿ- ಪ್ರೇಮದ ಹಿಂದೆ ಯಾವುದೋ ಲೆಕ್ಕಾಚಾರ, ದ್ವೇಷ, ಮತಾಂತರದ ಹುನ್ನಾರ, ದೇಶದ್ರೋಹದ ಚಿಂತನೆ, ಸಮಾಜದ ಸ್ವಾಸ್ಥ್ಯ ಕೆಡಿಸುವ ವಿದೇಶಿ ಹುನ್ನಾರ ಇರಬಹುದು. ಅದಕ್ಕಾಗಿ ಹೇಳಿದ್ದು ಪ್ರೀತಿ - ಪ್ರೇಮ ಇವತ್ತು ಎರಡು ಜೋಡಿಗಳ ನಡುವಿನ ವ್ಯವಹಾರ ಆಗಿ ಉಳಿದಿಲ್ಲ. ಪ್ರೀತಿ ಇಂದು ನಾನಾ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

ಕಳೆದ ಎರಡು ವರ್ಷಗಳ ಹಿಂದೆ ನಾನು ಲೈಂಗಿಕ ವೃತ್ತಿನಿರತ ಹೆಣ್ಣುಮಕ್ಕಳ ಆರೋಗ್ಯದ ಕುರಿತಂತೆ ಅವರ ಸಂಘಟನಾ ಕೆಲಸದಲ್ಲಿ ತೊಡಗಿದ್ದೆ. ಆಗ ಅವರ ಜೀವನಗಾಥೆಯನ್ನು ಕೇಳುವ ಅವಕಾಶ ಒದಗಿ ಬಂದಿತು. ಅವರಲ್ಲಿ ಬಹತೇಕ ಮಹಿಳೆಯರು ಪ್ರೇಮ ವಿವಾಹದ ಹಿನ್ನೆಲೆಯಿಂದ ಬಂದವರಾಗಿದ್ದರು. ತಂದೆ ತಾಯಿಯರ ವಿರೋಧ ಕಟ್ಟಿಕೊಂಡು ಅವರನ್ನು ಬಿಟ್ಟು ಪ್ರೀತಿಸಿದವನ ಹಿಂದೆ ಬಂದರೆ ಪ್ರೀತಿಸಿದನು ಮಧ್ಯದಲ್ಲಿ ಕೈಕೊಟ್ಟು ಬೀದಿಗೆ ಬಿದ್ದು, ಹೊಟ್ಟೆಪಾಡಿಗೆ ಈ ವೃತ್ತಿಗೆ ಇಳಿದವರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಬಹುತೇಕ ಅಂತರಧರ್ಮಿಯ ವಿವಾಹಗಳು ಮತಾಂತರದಲ್ಲಿ ಕೊನೆಗೊಳ್ಳುತ್ತಿರುವುದು ಕಾಣಬಹುದು. ಯುವತಿಯರು ತಾವು ಪ್ರೀತಿಸಿ ಮದುವೆಯಾಗೊದೇ ಸ್ವಾತಂತ್ರ್ಯವೆಂದು ತಿಳಿಯುವ ಹೊತ್ತಿಗೆ ಇನ್ನೊಂದು ರೀತಿಯ ಧಾರ್ಮಿಕ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ತಂದೆ ತಾಯಿಗಳನ್ನು ಶಾಶ್ವತ ನೋವಿಗೆ ದೂಡಿ ಬಣ್ಣದ ಮಾತಿಗೆ ಮರುಳಾಗಿ ಸರಿಯಾದ ಹಿನ್ನೆಲೆ ಗೊತ್ತಿಲ್ಲದವನ ಜೊತೆ ಓಡಿಹೊಗುವುದು ನಿಜವಾದ ಪ್ರೀತೀನಾ? ಪ್ರೇಮಿಗಳೇ ಉತ್ತರ ಕೊಡಬೇಕು.

ವಯೋಸಹಜ ಆಕರ್ಷಣೆಯಲ್ಲಿ ಆತುರಾತುರವಾಗಿ ಪ್ರೀತಿ-ಪ್ರೇಮದ ಬಗ್ಗೆ ಅಪ್ರಬುದ್ಧ ನಿರ್ಧಾರ ತೆಗೆದುಕೊಳ್ಳುವುದರಿಂದ ಸಾಕಷ್ಟು ಯುವಕ-ಯುವತಿಯರು ತಮ್ಮ ಜೀವನವನ್ನು ಕಷ್ಟ ಕೂಪಕ್ಕೆ ತಳ್ಳಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಯುವತಿಯರು ಯಾವುದು ಸುಖ ಎಂದು ಅರಿಸಿ ಹೊಗಿದ್ದರೋ ಅದು ನರಕ ಎಂದು ಅರ್ಥವಾಗುವ ಹೊತ್ತಿಗೆ ತಮ್ಮದೆಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿರುತ್ತಾರೆ. ಪ್ರೀತಿಸಿ ಮದುವೆಯಾಗೋವಾಗ ಎದುರಿಸಲು ಇರುವ ಧೈರ್ಯ ಪ್ರೀತಿ, ಪ್ರಿಯಕರ ಕೈಕೊಟ್ಟಾಗ, ಲೈಂಗಿಕ, ಕೌಟುಂಬಿಕ, ದೌರ್ಜನ್ಯಕ್ಕೆ ಒಳಗಾದಾಗ ಎಲ್ಲಿ ಹೊಗುತ್ತದೆ? ಇದಕ್ಕೆಲ್ಲಾ ಕಾರಣ ಪ್ರೀತಿಸಿದ ಬಹತೇಕ ಯುವತಿಯರ ಪರಾವಲಂಬನೆ ಬದುಕು. ಅದೇ ಯುವತಿಯರು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತಹ ಉದ್ಯೋಗವನ್ನು ಕಂಡುಕೊಂಡ ಮೇಲೆ ಪ್ರೀತಿ ಪ್ರೇಮದ ಬಗ್ಗೆ ಗಮನ ಹರಿಸಿದರೆ ಒಳ್ಳೆಯದಲ್ಲವೇ?

ಇವತ್ತಿನ ಪ್ರೇಮಿಗಳಿಗೆ ಪ್ರೀತಿಸಲು ಸಿನಿಮಾಗಳೇ ಮಾದರಿ. ಹೈಸ್ಕೂಲ್ ಹಂತದಲ್ಲೇ ಹಸಿಬಿಸಿ ಪ್ರೇಮ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿರುತ್ತವೆ. ಜೀವನವನ್ನು ರೂಪಿಸುವ ಪ್ರಮುಖ ಶೈಕ್ಷಣಿಕ ಹಂತದಲ್ಲೇ ಪ್ರೀತಿ- ಪ್ರೇಮ ಎಂದು, ತಮ್ಮ ಶೈಕ್ಷಣಿಕ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಬಣ್ಣದ ಬದುಕಿಗೆ, ಜಾಹೀರಾತಿನ, ಮಾಧ್ಯಮದ ಥಳಕುಬೆಳಕಿನ ವಿಚಾರಗಳಿಗೆ ಮರುಳಾಗಿ ವಾಸ್ತವ ಮರೆತು ಪ್ರೀತಿ -ಪ್ರೇಮದ ಹೆಸರಿನಲ್ಲಿ ಮುಕ್ತ ಲೈಂಗಿಕತೆಗೆ ಇಳಿಯುತ್ತಿದ್ದಾರೆ. ಲೈಂಗಿಕ ಸೋಂಕುಗಳಿಗೆ ಒಳಗಾಗುವುದು, ಅತಿಯಾದ ಗರ್ಭಪಾತದ ಗುಳಿಗೆಗಳನ್ನು ಸೇವಿಸುವದರಿಂದ ತಾಯ್ತನದ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದು ಇತ್ತಿಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ.

ಪ್ರೀತಿ- ಪ್ರೇಮವೇ ಜೀವನವಲ್ಲ. ಜೀವನದಲ್ಲಿ ಅದು ಒಂದು ಭಾಗ ಮಾತ್ರ. ಪ್ರೀತಿ - ಪ್ರೇಮದ ಬಗ್ಗೆ ಕಾವ್ಯಾತ್ಮಕವಾಗಿ, ಶೃಂಗಾರಭರಿತಾಗಿ, ಸಾಹಿತ್ಯಾತ್ಮಕವಾಗಿ, ಸಿನಿಮಾಗಳಲ್ಲಿ, ಕಲಾಮಾದ್ಯಮಗಳಲ್ಲಿ ಸಾಕಷ್ಟು ಮಾತನಾಡಬಹುದು. ಆದರೆ ಅದು ವಾಸ್ತವವಲ್ಲ ಎನ್ನುವದನ್ನು ಅರಿತುಕೊಳ್ಳಬೇಕು. ಸಹಜ ಪ್ರೀತಿಗೆ ಯಾರದೂ ತಕರಾರಿಲ್ಲಾ, ಇರಲೂಬಾರದು. ಪ್ರೀತಿ ಅಕಾರಣವಾಗಿದ್ದರೆ ಯಾವುದೇ ದುರದ್ದೇಶವಿರಲಾರದು. ಅಂತಹ ಪ್ರೀತಿ ಯಾವಾಗಲೂ ನೈಜವಾಗಿರುತ್ತದೆ. ಅಂತಹ ಪ್ರೀತಿಗೆ ಯಾವದೇ ಜಾತಿ, ಧರ್ಮ, ಮತಾಂತರದ ಹಂಗಿರುವದಿಲ್ಲ. ಇಂತಹ ಪ್ರೀತಿಗಳನ್ನು ಬೆಂಬಲಿಸೋಣ. ಆದರೆ ಪ್ರೀತಿಸುವ ಹೆಸರಿನಲ್ಲಿ ಹಲವಾರು ದುರುದ್ದೇಶಗಳನಿಟ್ಟುಕೊಂಡಿದ್ದರೆ, ಮಾತ್ರ ಹುಷಾರಾಗಿಬೇಕು. ಪ್ರೀತಿಸುವವರನ್ನು ಬೆಂಬಲಿಸುವ ಭರದಲ್ಲಿ ನಮ್ಮ ಹೆಣ್ಣು ಮಕ್ಕಳ ಬದುಕಿಗೆ ನಾವೇ ಕೊಳ್ಳಿ ಇಡುವಂತಾಗಬಾರದು ಅಲ್ಲವೇ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

ಪ್ರೀತಿ ಒಂದು ರೀತಿಯಲ್ಲಿ ನದಿ ಇದ್ದ ಹಾಗೇ. ಸರಾಗವಾಗಿ ಹರಿಯವ ನದಿಯಲ್ಲಿ ಈಜಬಹುದು. ಆದರೆ ಸುಳಿಗಳು ಇರುವಲ್ಲಿ ಸಿಕ್ಕಿಕೊಂಡರೆ ಸಾವೇ ಗತಿ. ಇಷ್ಟೆಲ್ಲಾ ತಿಳಿದ ನಂತರವೂ ನಿಮಗೆ ಪ್ರೀತಿಸಬೇಕು ಎನಿಸಿದರೆ ಖಂಡಿತ ಪ್ರೀತಿಸಿ. ಅದಕ್ಕೆ ಫೆಬ್ರವರಿ 14ಕೇ ಆಗಬೇಕೆಂದಿಲ್ಲ. ಆದರೆ ನಿಮ್ಮ ಪ್ರೀತಿಯ ಹಿಂದಿರುವ ಅನುಮಾನಗಳ ಹುತ್ತವನ್ನು ಸ್ಪಷ್ಟಮಾಡಿಕೊಳ್ಳಿ. ಇಲ್ಲದಿದ್ದರೆ ಪ್ರೀತಿಯ ಅಮಲಿನಲ್ಲಿ ದೇಶದ್ರೋಹದ ಚಟುವಟಿಕೆಯಲ್ಲಿ ನಿಮಗೆ ಗೊತ್ತಿಲ್ಲದೆ ನೀವೂ ತೊಡಗಿಕೊಳ್ಳುವಿರಿ. ಎಚ್ಚರಿಕೆ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more