• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಬರ್ ಕ್ರೈಂ : ದೂರು ನೀಡುವುದು ಎಲ್ಲಿ ಹೇಗೆ?

By Staff
|

Cyber crime, where and how to complain
ಹಿಂದಿನ ಲೇಖನದಲ್ಲಿ ಸೈಬರ್ ಅಪರಾಧ ಎಂದರೇನು? ಅಪರಾಧ ಯಾವುದಕ್ಕೆ ಸಂಬಂಧಿಸಿರುತ್ತದೆ ಎಂದು ವಕೀಲರಾದ ಪ್ರಶಾಂತ್ ಮಿರ್ಲೆ ಅವರು ಕೂಲಂಕಷವಾಗಿ ವಿವರ ನೀಡಿದ್ದಾರೆ. ಮುಂದುವರಿದ ಭಾಗದಲ್ಲಿ ಯಾವ ಅಪರಾಧ ಸೈಬರ್ ಕ್ರೈಂ ಆಗುತ್ತದೆ, ಶಿಕ್ಷೆಯ ಪ್ರಮಾಣವೇನು, ದೂರು ನೀಡುವುದು ಎಲ್ಲಿ, ಹೇಗೆ ಎಂಬ ಬಗ್ಗೆ ವಿವರ ನೀಡಿದ್ದಾರೆ.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 65ರ ಮೇರೆಗೆ ಯಾವುದೇ ಕಂಪ್ಯೂಟರ್‌ನ ಮೂಲ ದಸ್ತಾವೇಜುಗಳನ್ನು ಅಥವಾ ಕಂಪ್ಯೂಟರ್ ಕಾರ್ಯಸರಣಿಯ ಅಥವಾ ಕಂಪ್ಯೂಟರ್‌ನ ಕಾರ್ಯ ವ್ಯವಸ್ಥೆಯ ಅಥವಾ ಕಂಪ್ಯೂಟರ್ ಜಾಲದ ಸಲುವಾಗಿ ಬಳಸುವ ಯಾವುದೇ ಕಂಪ್ಯೂಟರ್‌ನ ಮೂಲ ಸಂಕೇತಗಳು ಅಥವಾ ಆಜ್ಞೆಗಳು ಅಥವಾ ವಿನ್ಯಾಸಗಳು ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಯಾರಾದರೂ ಗೊತ್ತಿದ್ದೂ ಅಥವಾ ಉದ್ದೇಶಪೂರ್ವಕವಾಗಿ ಬಚ್ಚಿಟ್ಟರೆ, ನಾಶಗೊಳಿಸಿದರೆ ಅಥವಾ ವ್ಯತ್ಯಾಸಗೊಳಿಸಿದರೆ, ಅಥವಾ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೂ ಬಚ್ಚಿಡುವುದಕ್ಕೆ, ನಾಶ ಮಾಡುವುದಕ್ಕೆ ಅಥವಾ ವ್ಯತ್ಯಾಸಗೊಳಿಸುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸಿದರೆ, ಅವನು ಮೂರು ವರ್ಷಗಳವರೆಗಿನ ಕಾರಾವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ.

ಇನ್ನೂ ಮುಂದುವರೆದು ಕಲಮು 66ರಲ್ಲಿ ಹಲವು ಸೈಬರ್ ಅಪರಾಧಗಳನ್ನು ಗುರುತಿಸಿ ಅವುಗಳಿಗೆ ಶಿಕ್ಷೆ ಮತ್ತು ಜುಲ್ಮಾನೆಯ ಪ್ರಮಾಣಗಳನ್ನು ನಿಗದಿಪಡಿಸಿರುತ್ತದೆ, ಈ ಕೆಳಗಿನವುಗಳು ಪ್ರಸ್ತುತದಲ್ಲಿ ಗುರುತಿಸಿರುವ ಅಪರಾಧಗಳು:

1. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಗೆ ಅಕ್ರಮ ಸಂದೇಶವನ್ನು ತಲುಪಿಸುವುದು.

2. ಕಳವು ಮಾಡಿರುವ ಕಂಪ್ಯೂಟರ್‌ನ ಮೂಲ ಸಂಪತ್ತನ್ನು ಅಥವಾ ಸಂಪರ್ಕ ಮಾಧ್ಯಮವನ್ನು ತನ್ನ ವಶದಲ್ಲಿ ಹೊಂದಿರುವುದು. ಇದರಿಂದ ಲ್ಯಾಪ್‌ಟಾಪ್ ಕಳವು ಸಹಾ ಸೈಬರ್ ಅಪರಾಧವಾಗಿ ಪರಿಗಣಿಸಲಾಗುತ್ತದೆ.

3. ವೈಯಕ್ತಿಕ ಮಾಹಿತಿಗಳಾದ ವಿದ್ಯುನ್ಮಾನ ದಾಖಲೆಗಳಾದ ಅಂಕಿಚಿಹ್ನೆಯ(ಡಿಜಿಟಲ್ ಸಿಗ್ನೆಚರ್), ಗೌಪ್ಯ ಪದಗಳನ್ನು ಅಥವಾ ಯೂನಿಕ್ ಐಡೆಂಟಿಟಿ ನಂಬರ್‌ಗಳನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸಿ ಕೊಳ್ಳುವುದು.

4. ಪರರೂಪಧಾರಣೆಯ ಮೂಲಕ ಕಂಪ್ಯೂಟರ್ ಸಂಪನ್ಮೂಲಗಳಿಂದ ಯಾರೇ ವ್ಯಕ್ತಿಗಳಿಗೆ ಮೋಸ ಮಾಡುವುದು.

5. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಗೌಪ್ಯತೆಯನ್ನು ಬಯಲು ಮಾಡುವುದು.

6. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಭಯೋತ್ವಾದನೆ ಉಂಟುಮಾಡುವುದು (ಇತ್ತೀಚಿನ ಉಗ್ರಗಾಮಿಗಳ ಭಯೋತ್ವಾದನ ಕೃತ್ಯಗಳ ಬಳಕೆಗೆ ಸೈಬರ್ ಸ್ಪೇಸ್ ಸೂಕ್ತ ತಾಣವಾಗಿರುದನ್ನು ತಡೆಯುವುದೆ ಇದರ ಉದ್ದೇಶ).

7. ವಿದ್ಯುನ್ಮಾನ ನಮೂನೆಯಲ್ಲಿ ಅಶ್ಲೀಲವಾದ ಮಾಹಿತಿಯನ್ನು ಪ್ರಕಟಿಸುವುದು.

8. ಅಶ್ಲೀಲ ಮಾಹಿತಿಯ ರವಾನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಮತ್ತು ಭಾಗಿಯಾಗುವುದಕ್ಕೆ ಸಹಕರಿಸುವುದು.

ಇಷ್ಟಲ್ಲದೆ ಈ ಅಧಿನಿಯಮದ ಮೇರೆಗೆ ರಚಿಸಲಾದ ಯಾವ ನಿಯಮಗಳ ಅಥವಾ ವಿನಿಮಯಗಳ ಉಲ್ಲಂಘನೆಗಾಗಿ ಪ್ರತ್ಯೇಕವಾಗಿ ಯಾವುದೇ ದಂಡನೆಯನ್ನು ಉಪಬಂಧಿಸಿದಿದ್ದರೆ ಅಂಥ ಯಾವುವೇ ನಿಯಮಗಳನ್ನು ಅಥವಾ ವಿನಿಮಯಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅವನು ಅಂಥ ಉಲ್ಲಂಘನೆಯಿಂದ ಬಾಧಿತನಾದ ವ್ಯಕ್ತಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ನಷ್ಟ ಪರಿಹಾರವನ್ನು ಸಂದಾಯ ಮಾಡಲು ಅಥವಾ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ದಂಡನೆಗೆ ಗುರಿಯಾಗಲು ಬದ್ಧನಾಗತಕ್ಕದ್ದು.

ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳು:

ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಇತರೇ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಕಂಪ್ಯೂಟರ್‌ಗಳ ಬಳಕೆ ಹೆಚ್ಚುತ್ತಿದ್ದು ಇಂದು ಇಂಟರ್‌ನೆಟ್ ಏಕಮಾತ್ರ, ಶ್ರೀಮಂತಿಕೆಯ ಮತ್ತು ಮಾಹಿತಿಗಳ ಸಂಪನ್ಮೂಲಗಳ ಆಧಾರವಾಗಿದ್ದು, ಯಾವುದೇ ಮಾಹಿತಿಗಳನ್ನು ಪಡೆಯಲು ಸಹಕಾರಿಯಾಗಿ ಎಲ್ಲರ ಯೋಚನೆಗೆ ನಿಲುಕುವುದಾಗಿರುತ್ತದೆ. ಅಂತೆಯೇ ಅಪರಾಧಿಗಳಿಗೆ ಸ್ವರ್ಗತಾಣವು ಆಗಿರುತ್ತದೆ ಮತ್ತು ಇದರಿಂದ ಸೃಜಿಸಬಹುದಾದ ಅಪರಾಧಗಳ ಬಗೆಗೆ ತೊಂದರೆಗೀಡಾದ ವ್ಯಕ್ತಿಗಳು ಕೂಡಲೇ ಸಮೀಪದ ಪೋಲಿಸ್ ಠಾಣೆಗೆ ತಮ್ಮ ದೂರು ಅಥವಾ ಫಿರ್ಯಾದು ನೀಡಬೇಕಾಗುತ್ತದೆ. ಪ್ರಸ್ತುತದಲ್ಲಿ ಈ ವಿಷಯವಾಗಿ ನಮ್ಮ ದೇಶದಲ್ಲಿ ಈ ಸೈಬರ್ ಅಪರಾಧಗಳ ಬಗೆಗಿನ ದೂರುಗಳನ್ನು ಸ್ವೀಕರಿಸಲು ಈ ಕೆಳಕಂಡ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಮೇರೆಗಿನ ಮತ್ತು ಇತರೇ ಅಪರಾಧಿಕ ಕಾನೂನುಗಳ ಮೇರೆಗೆ ಕ್ರಮ ಕೈಗೊಳ್ಳಲು ಶಕ್ತವಾಗಿರುತ್ತವೆ, ಅವು ಇಂತಿವೆ:

ವಿಶೇಷ ಸೈಬರ್ ಪೋಲಿಸ್ ಠಾಣೆ : ಈ ಸೈಬರ್ ಕ್ರೈಮ್‌ಗಳಿಗೆ ಸಂಬಧಿಸಿದಂತೆ ಮೀಸಲಾದ ವಿಶೇಷ ಸೈಬರ್ ಪೋಲಿಸ್ ಠಾಣೆಗಳನ್ನು ಬೆಂಗಳೂರು ಸೇರಿದಂತೆ ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳು ತಮ್ಮ ಪ್ರದೇಶ ವ್ಯಪ್ತಿಯಲ್ಲಿ ಆಗುವ ಯಾವುದೇ ಸೈಬರ್ ಪ್ರಕರಣಗಳ ಕುರಿತಾಗಿ ಅದರಲ್ಲೂ ಭಯೋತ್ವಾದಕ ಇ-ಮೇಲ್‌ಗಳ ಮೇಲೆ ಅಥವಾ ಅಂತರ್ಜಾಲದಲ್ಲಿ ಆಗುವ ಅಪರಾಧಗಳ ಮೇಲೆ ಸ್ವಯಃ ಪ್ರೇರಿತವಾಗಿ ಎಫ್.ಐ.ಆರ್ ದಾಖಲಿಸಿಕೊಳ್ಳುತ್ತವೆ ಮತ್ತು ತನಿಖೆ ನೆಡೆಸಲು ಅಧಿಕಾರ ಪ್ರದತ್ತವಾಗಿರುತ್ತವೆ. ಬೆಂಗಳೂರಿನಲ್ಲಿರುವ ಸೈಬರ್ ಪೋಲಿಸ್ ಠಾಣೆ ಇಡೀ ಕರ್ನಾಟದ ವ್ಯಾಪ್ತಿಯನ್ನು ಹೊಂದಿದ್ದು ಸ್ಥಳೀಯ ಪೋಲಿಸ್ ಠಾಣೆಯ ಸಹಾಯದಿಂದ ಕೆಲಸ ನಿರ್ವಹಿಸುತ್ತಿದೆ.

ಪೋಲಿಸ್ ಠಾಣೆ : ಈ ವಿಶೇಷ ಸೈಬರ್ ಪೋಲಿಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು ಹೊರತುಪಡಿಸಿದರೆ ಉಳಿದ ಪ್ರದೇಶಗಳಿಗೆ ಆಯಾ ಸ್ಥಳೀಯ ಪೋಲಿಸ್ ಠಾಣೆಗಳ ವ್ಯಾಪ್ತಿಗೆ ಪ್ರಕರಣಗಳನ್ನು ಕುರಿತು ಎಫ್.ಐ.ಆರ್ ದಾಖಲಿಸಿಕೊಳ್ಳುವುದು ಮತ್ತು ತನಿಖೆ ನೆಡೆಸುವ ಅಧಿಕಾರವಿರುತ್ತದೆ.

ಇಂತಹ ದೂರಿನ ಅಥವಾ ಫಿರ್ಯಾದಿನ ಮೇಲೆ ದೋಷಿತ ಕಾರ್ಯಾಚರಣೆ, ಇದರ ಬಗೆಯಿಂದ ನೊಂದಣಿ ಮಾಡಿಕೊಳ್ಳುವುದು, ನೊಂದಣಿಯ ಆಧಾರದ ಮೇಲೆ ವರದಿ ನೀಡುವುದು, ತನಿಖೆ ನೆಡೆಸುವುದು, ಕಾನೂನಿ ಕ್ರಮ ಜರುಗಿಸುವುದು, ನಿರ್ಣಯ ನೀಡುವುದು ಮತ್ತು ನಿರ್ಣಯದ ಮೇರೆಗೆ ನಿರ್ವಹಿಸುವುದು. ಇವುಗಳು ಕಾನೂನಿನ ವ್ಯವಸ್ಥೆಯಲ್ಲಿನ ಘಟ್ಟಗಳು ಮತ್ತು ಪಾಲಿಸಲೇಬೇಕಾದ ನಿಯಮಗಳು. ಇಂತಹ ಕಾನೂನು ಕ್ರಮ ಕೈಗೊಳ್ಳುವ ಮುಂಚೆ ಸೂಕ್ತ ಸಲಹೆಯನ್ನು ನುರಿತ ಕಂಪ್ಯೂಟರ್ ಪರಿಣಿತರನ್ನು ಅಥವಾ ವಕೀಲರನ್ನು ಸಂಪರ್ಕಿಸುವುದು ಒಳಿತು.

ಇತ್ತಿಚೀನವರೆಗೂ, ಸೈಬರ್ ಅಪರಾಧದ ಬಗಗೆ ಆಸಕ್ತಿಯ ಕೊರತೆಯಿಂದ ಮಾಹಿತಿ ತಂತ್ರಜ್ಞಾನದ ವೃತ್ತಿಪರರು ಹಲವು ಪ್ರಕರಣಗಳಲ್ಲಿ ತಾವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೊರತೆ ಎದುರಿಸಬೇಕಾಗಿತ್ತು. ಇತ್ತಿಚೀನ ಅಪರಾಧಗಳಿಗೆ ಇರುವ ಹಳೆಯ ಕಾನೂನುಗಳು ಸೂಕ್ತವಾದವುಗಳಲ್ಲ ಎನ್ನುವ ಅಭಿಪ್ರಾಯ ಒಪ್ಪುವಂತಹದು ಆದರೆ ಹೊಸ ಕಾನೂನುಗಳು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ನಿಜವಾಗಲು ಸಮರ್ಥನೀಯವೇ ಎಂಬ ಪ್ರಶ್ನೆ ಎದುರಿಸುತ್ತಿರುವುದು ಅಕ್ಷರಸಃ ಸತ್ಯ. ಇದರಿಂದಾಗಿಯೇ ಕಾನೂನು ರಚನಾಗಾರರು ಮತ್ತು ಇದನ್ನು ಕಾಪಾಡುವ ಸಂಸ್ಥೆಗಳು ಹಾಗೂ ಕಂಪ್ಯೂಟರ್ ವೃತ್ತಿಪರಾರು ಒಟ್ಟಾಗಿ ಇಂದು ಸೈಬರ್ ಅಪರಾಧಗಳನ್ನು ತಡೆಗಟ್ಟುವಂತಹ ಕೆಲಸ ಕೈಗೊಂಡು ಸಾರ್ವಜನಿಕರಿಗೆ ರಕ್ಷಣಾತ್ಮಕ ಇಂಟರ್‌ನೆಟ್ ಬಳಸಲು ವ್ಯವಸ್ಥೆಗೊಳಿಸಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more