ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳಿ ಎದ್ದೇಳಿ! ಯುವಕರೇ ಇಂದು ವಿಶ್ವ ಯುವ ದಿನ

By * ಮಲೆನಾಡಿಗ
|
Google Oneindia Kannada News

ಏಳಿ ಎದ್ದೇಳಿ! ಯುವಕರೇ ಇಂದು ವಿಶ್ವ ಯುವ ದಿನಜ.12 ರಾಷ್ಟ್ರೀಯ ಯುವದಿನ. ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ. ದೇಶದ ಯುವಜನತೆ ಸಂಭ್ರಮದಿಂದ ಅಚರಿಸಬೇಕಾದ ಹಬ್ಬ. ಅದರೆ ಇಂದಿನ ಭಾರತದಲ್ಲಿ ಯುವಕರಿಗೆ ತಮಗಾಗಿ ಒಂದು ದಿನ ಮೀಸಲಾಗಿದೆ ಎಂಬ ಸತ್ಯವನ್ನು ಎಂದೊ ಮರೆತ್ತಿದ್ದಾರೆ. ವಿವೇಕಾನಂದರ ಜನ್ಮದಿನವಾ, ರಜಾ ಏನಾದರೂ ಸಿಗುತ್ತಾ ಎಂದು ಯೋಚಿಸುವ ಮನಸ್ಥಿತಿಗೆ ತಲುಪಿದ್ದಾರೆ. ಯುವಕರಿಗಿಂದ ಸ್ಫೂರ್ತಿಯ ಸೆಲೆ ಬತ್ತಿಹೋಗಿದೆ, ವೈಚಾರಿಕತೆಯ ಬರ ಬಡಿದಂತಿದೆ.

ಅಂದು ಏಳಿ! ಎದ್ದೇಳಿ !! ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂಬ ಸಿಂಹವಾಣಿ ಒಬ್ಬ ಸುಭಾಷ್‌ಚಂದ್ರ ಬೋಸ್‌ ನಂತಹ ಅನೇಕ ವೀರ ಯೋಧರಿಗೆ ಸ್ಫೂರ್ತಿ ನೀಡಿತ್ತು. ವಿಶ್ವದ ಅನೇಕ ಮಂದಿ ಇಂದು ಭಾರತ ಸಂಸ್ಕೃತಿ, ಹಿಂದೂ ಪರಂಪರೆಯ ಬಗ್ಗೆ ಗೌರವದಿಂದ ಕಾಣಲು ಹಾಗೂ ಅದರ ಬಗ್ಗೆ ಅಧ್ಯಯನ ಮಾಡಲು ಮುಂದಾಗುತ್ತಿರುವುದಕ್ಕೆ ಕಾರಣ ಕೂಡ ಅದೇ ವಿವೇಕವಾಣಿ!!

ಭಾರತದಲ್ಲಿ ಅನೇಕಾನೇಕ ಸಾಧು ಸಂತರು, ಪರಿವ್ರಾಜಕರು ಬಂದೂ ಹೋದರೂ, ಸ್ವಾಮಿ ವಿವೇಕಾನಂದರ ಹಾಗೆ ಸ್ಮೃತಿಪಟಲದಲ್ಲಿ ಉಳಿಯಬಲ್ಲವರು ಕೆಲವೇ ಮಂದಿ. ವಿವೇಕಾನಂದರ ಜೀವನ ಶೈಲಿಗಿಂತ ಅವರು ಜನರ ನೆನಪಿನಲ್ಲಿ ಉಳಿಯುವುದು ಅವರ ಪ್ರವಚನದ ವಿಚಾರಧಾರೆಯಿಂದ. ಅವರೇ ಹೇಳಿದಂತೆ ಮೊಹಮ್ಮದ್ ಅಗಲಿ ಬುದ್ಧ ನಾಗಲಿ ಒಳ್ಳೆಯ ಮನುಷ್ಯನಾಗಿದ್ದರಿಂದ ನನಗಾಗ ಬೇಕಾದುದೇನು? ಅದು ನನ್ನ ಒಳ್ಳೆಯ ಅಥವಾ ಕೆಟ್ಟ ತನವನ್ನು ಬದಲಾಯಿಸುತ್ತದೆಯೇ? ನಾವು ನಮಗೋಸ್ಕರವಾಗಿಯೇ ಒಳ್ಳೆಯವರಾಗುವ ಜವಾಬ್ದಾರಿಯನ್ನು ತೆಗೆದುಕೊಳ್ಳೋಣ. ಯಾರೋ ಯಾವಾಗಲೋ ಹಿಂದೆ ಒಳ್ಳೆಯವರಾಗಿದ್ದರು ಎಂಬ ಕಾರಣಕ್ಕಲ್ಲ'.

ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದ ಸ್ವಾಮಿಜೀ; ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದೆಂದು ಯುವಕರಿಗೆ ಬೋಧಿಸುತ್ತಿದ್ದರು. ಇಂದು ವಿವೇಕವಾಣಿಯ ಒಂದಿಷ್ಟು ಅಂಶ ನಮ್ಮ ಯುವ ಪೀಳಿಗೆಯ ತಲೆ ಒಳಗೆ ಹೊಕ್ಕರೆ, ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳಸಲು ಸಾಧ್ಯವಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿ ಮಿಂಚಿನಂತೆ ಕೆಲಕಾಲ ನಿಮ್ಮನ್ನು ಆಕರ್ಷಿಸಿ ಮರೆಯಾಗುವುದು ಸತ್ಯ ಎಂಬ ಮಾತು ಇಂದಿಗೂ ಅಕ್ಷರಶಃ ಸತ್ಯವಾಗಿ ಪರಿಣಮಿಸುತ್ತಿದೆ. ನಿಮಗೆ ದೇಶಕ್ಕೆ ಏನಾದರೂ ಮಾಡಬೇಕಾದರೆ ಕೊನೆ ಪಕ್ಷ ವರ್ಷಕ್ಕೊಮ್ಮೆಯಾದರೂ ಅಳಿದ(ಎಂದೂ ಅಳಿಯದ) ಮಹಾನ್ ಚೇತನಗಳನ್ನು ನೆನಪು ಮಾಡಿಕೊಳ್ಳಿ ಸಾಕು. ಆ ಚೇತನಗಳ ನೆನಪೇ ಸಾಕು, ಸರಿದಾರಿ ತೋರಲು. ಮುಗ್ಗರಿಸುವ ಮೊದಲು ನಿಮ್ಮ ದಾರಿದೀಪವನ್ನು ಕಂಡುಕೊಳ್ಳಿ.

ಸ್ವಾಮಿ ವಿವೇಕಾನಂದರ ಅಯ್ದ ನುಡಿ ಮುತ್ತುಗಳು :

  • ಇದೊಂದು ದೊಡ್ಡ ಸತ್ಯ; ಶಕ್ತಿಯೇ ಜೀವನ, ದುರ್ಬಲತೆಯೇ ಮರಣ; ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ.
  • ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.
  • ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.
  • ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
  • ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.

ಸಾರ-ಸಂಗ್ರಹ ಬರಹ: ಮಲೆನಾಡಿಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X