ಅಂತರ್ಜಾಲದಲ್ಲಿ ಕೀರ್ತನೆ ಮತ್ತು 21ಸಾವಿರ ವಚನಗಳು


ಬೆಂಗಳೂರು : ದಾಸ ಕೀರ್ತನೆ ಮತ್ತು ವಚನ ಸಾಹಿತ್ಯವನ್ನು ಅಂತರ್ಜಾಲಕ್ಕೆ ಸೇರಿಸುವ ಪ್ರಯತ್ನ ನಡೆದಿದೆ. ಸದ್ಯದಲ್ಲಿಯೇ ನಡೆಯುವ ಸಮಾರಂಭದಲ್ಲಿ ಈ ಸಂಬಂಧಿ ವೆಬ್‌ಸೈಟ್‌ಗಳು ಲೋಕಾರ್ಪಣೆಗೊಳ್ಳಲಿವೆ.

ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಹೆಚ್‌.ಎಸ್‌.ಮಹದೇವ ಪ್ರಸಾದ್‌, ವಚನ ಸಾಹಿತ್ಯದ 15ಸಂಪುಟಗಳನ್ನು ವೆಬ್‌ಸೈಟ್‌ ಒಳಗೊಂಡಿದೆ. ಮೈಸೂರ್‌ ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿ., ಸಹಯೋಗದೊಂದಿಗೆ ಈ ಕಾರ್ಯ ನಡೆದಿದೆ ಎಂದರು.

21,674 ವಚನಗಳನ್ನು ವೆಬ್‌ ಸೈಟ್‌ನಲ್ಲಿ ಗಮನಿಸಬಹುದಾಗಿದೆ. ಕೀರ್ತನೆ ಮತ್ತು ವಚನ ಸಾಹಿತ್ಯ ವೆಬ್‌ಸೈಟ್‌ಗಳ ಲೋಕಾರ್ಪಣೆ ಸಮಾರಂಭದಲ್ಲಿ ಸೀಡಿ ಮತ್ತು ಧ್ವನಿ ಸುರುಳಿಗಳು ಬಿಡುಗಡೆಗೊಳ್ಳಲಿವೆ ಎಂದು ಸಚಿವರು ಹೇಳಿದರು.

ಭೇಟಿ ನೀಡಿ - www.vachanasahitya.org.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+