• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಿಗರೇ, ಏನಾಗಿದೆ ನಿಮಗೆ? ನೀವೇಕೆ ಹೀಗೆ?

By Super
|

ಹಾಗಾದರೆ ಸಮಸ್ಯೆ ಇರುವುದು ಎಲ್ಲಿ?

ಕನ್ನಡಿಗರ ಹೃದಯದಲ್ಲಿ. ಕನ್ನಡಿಗರೇ ಇಂದು ಎಷ್ಟು ಜನ ಕನ್ನಡದಲ್ಲಿ ಮಾತನ್ನಾಡುತ್ತಾರೆ? ಅಪ್ಪಾ ಅಮ್ಮಾ ಶಬ್ದಗಳು ಮಮ್ಮಿ ಡ್ಯಾಡಿ ಸಂಸ್ಕೃತಿಯಲ್ಲಿ ಕೊಚ್ಚಿಹೋಗಿವೆ. ‘ಲೇ ಮಗಾ ಇದು ಯಾವುದೋ ಡಬ್ಬಾ ಕನ್ನಡ ಸಿನೇಮಾ ಕಣ್ಲಾ. ನಡಿ ಯಾವ್ದಾನಾ ಇಂಗ್ಲೀಸು ಸಿನೇಮಾ ನೋಡೋಣ್‌ ನಡಿ’ ಎಂದು ಮೂಗು ಮುರಿಯುವ ಕುಲಪುತ್ರರೇ ಹೆಚ್ಚು.

ದಶಕೋಟಿ ಕನ್ನಡಿಗರಲ್ಲಿ ಅದೆಷ್ಟು ಮಂದಿ ಕನ್ನಡದ ಬಗ್ಗೆ ಅಭಿಮಾನಪಡುತ್ತಾರೆ? ‘ನಾಲಿಗೆ ಸಿಗಿದ್ರೂ ಕನ್ನಡ್‌ ಪದ’ ಹೇಳುವಷ್ಟು ಅಪ್ಪಟ ಕನ್ನಡ ಪ್ರೇಮವಿದೆಯೇ? ಹೋಗಲಿ, ಕನ್ನಡದಲ್ಲಿ ಅದೆಷ್ಟು ಮಂದಿ ಪತ್ರಿಕೆ ಓದುತ್ತಾರೆ? ಆಷ್ಟೇಕೆ, ದುಡ್ಡು ಕೊಟ್ಟು ಕನ್ನಡ ಪುಸ್ತಕ ಕೊಂಡು ಓದುತ್ತಾರೆ? ‘ವಾಟ್‌ ಇಸ್‌ ದೇರ್‌ ಇನ್‌ ಕನ್ನಡ ?’ ಎಂದು ಹೂಂಕರಿಸುವವರಿಗೆ ‘ಕನ್ನಡದಲ್ಲಿ ಏನಿಲ್ಲ?’ ಎಂದು ಸರಾಗವಾಗಿ ಕನ್ನಡ ಸಾಹಿತ್ಯ, ಇತಿಹಾಸ, ಪರಂಪರೆಯ ಬಗ್ಗೆ ಬೌದ್ಧಿಕವಾಗಿ ಎದ್ದು ನಿಲ್ಲುವ ಕೆಚ್ಚು ಅದೆಷ್ಟು ಕನ್ನಡಿಗರಲ್ಲಿದೆ?

‘ಐ ವರ್ಕ್‌ ಫಾರ್‌ ಕನ್ನಡ. ಐ ಡೈ ಫಾರ್‌ ಕನ್ನಡ, ಐ ಬ್ಲೀಡ್‌ ಫಾರ್‌ ಕನ್ನಡ, ಬಟ್‌ ಸಾರಿ ಐ ಕೆನ್ನಾಟ್‌ ಸ್ಪೀಕ್‌ ಕನ್ನಡ’ ಎಂಬ ಎಡಬಿಡಂಗಿ ಕನ್ನಡಿಗರು ಒಂದೆಡೆಯಾದರೆ, ‘ಖನ್ನಡ’ಕಾಗಿ ‘ಹುಗ್ರ’ ‘ಓರಾಟ’ ಮಾಡುವ ಉತ್ತರಕುಮಾರ ರಣಧೀರರು ಇನ್ನೊಂದೆಡೆ. ಇವರ ನಡುವೆ, ಕನ್ನಡದ ಕಸ್ತೂರಿಯನ್ನು ಜತನದಿಂದ ತೇಯ್ದು, ಆಯ್ದು, ಮನೆ ಮನೆಗೂ ತಲುಪಿಸಿ, ‘ಅಯ್ಯಾ. ಕಂಡಿರೇನಯ್ಯಾ. ಕನ್ನಡದ ಕಸ್ತೂರಿ ಇದು, ಇಕೊ ಕೊಳ್ಳಿ. ಇದಿಗೊ, ಒಂದಿಷ್ಟು ಆಘ್ರಾಣಿಸಿ’ ಎಂದು ನಿಸ್ವಾರ್ಥವಾಗಿ ಕೆಲಸ ಮಾಡುವ ಅಗತ್ಯವಿದೆ.

ಹೊಡಿ-ಬಡಿಯ ಮೂಲಕ ಕನ್ನಡವನ್ನು ಬಲಾತ್ಕಾರವಾಗಿ ಹೇರಿ ಕನ್ನಡದ ಬಗ್ಗೆ ದ್ವೇಷ ಹೆಚ್ಚಿಸುವ ಬದಲು, ಕನ್ನಡಿಗರು ಎಚ್ಚೆತ್ತು, ಕನ್ನಡದ ಶ್ರೀಗಂಧವನ್ನು ಬೆಳೆಸಿ, ಕನ್ನಡದ ಕಂಪನ್ನು ಹಚ್ಚಿ, ಇತರರಿಗೆ ಅದರ ಸೊಬಗನ್ನು ತಿಳಿ ಹೇಳುವ ಕೆಲಸವಾಗಬೇಕಿದೆ.

ಆದರೆ, ಅದಕ್ಕೂ ಮೊದಲು, ಕನ್ನಡಗಿರು ಕನ್ನಡ ಕಸ್ತೂರಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಆದರ ಬಗ್ಗೆ ಪ್ರೇಮ, ಅಭಿಮಾನ ಬೆಳೆಸಿಕೊಳ್ಳಬೇಕಿದೆ. ಕನ್ನಡದ ಬಗ್ಗೆ ಸ್ವಾಭಿಮಾನ ಬೆಳೆಸಿ, ‘ನಾನು ಕನ್ನಡಿಗ’ ಎಂಬ ಹೆಮ್ಮೆ ಬೆಳೆಸಿ ದಶಕೋಟಿ ಕನ್ನಡಿಗರು ಎದೆ ಉಬ್ಬಿಸಿ ನಿಂತರೆ ಪ್ರಪಂಚದ ಅದಾವ ಶಕ್ತಿ ಎದುರಿಗೆ ನಿಂತೀತು?

ತಮ್ಮ ಲೇಖನಿ ಬಲದಿಂದ ಸಾಮಾನ್ಯ ವ್ಯಕ್ತಿಯೂ ಕಾದಂಬರಿ ಓದುವಂತೆ ಕ್ರಾಂತಿ ಮಾಡಿದ ಅನಕೃ, ತಮ್ಮ ನಟನಾಶಕ್ತಿಯಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟು ಮಹಾನ್‌ ಶಕ್ತಿಯಾಗಿ, ಕನ್ನಡ ಅಭಿಮಾನದ ಸಂಕೇತವಾದ ಅಣ್ಣಾವ್ರು ನಾವು ನಡೆಯಬೇಕಾದ ಮಾರ್ಗವನ್ನು ತಾವೇ ನಡೆದು ತೋರಿಸಿದ್ದಾರೆ. ಮಾರ್ಗವಿದೆ. ನಕ್ಷೆ ಇದೆ. ನಡೆಯುವ ಇಚ್ಛೆ, ನಿರ್ಧಾರ ಕನ್ನಡಿಗರಲ್ಲಿದೆಯೇ? ಅಥವಾ ನಾಸಿರುದ್ದೀನನಂತೆ ಎಲ್ಲೋ ಕಳಕೊಂಡು ಎಲ್ಲೋ ಹುಡುಕುವ ವಿಕ್ಷಿಪ್ತರಾಗುತ್ತೇವೆಯೇ? ಇದು ಕನ್ನಡಿಗರು ಗಹನವಾಗಿ ಯೋಚಿಸಬೇಕಾದ ಪ್ರಶ್ನೆ.

English summary
Kannada is a unique language. Kannadigas(People who speak Kannada/People of Karnataka) are well known for their bravery and intellectuality. But nowadays, are the Kannadigas embracing other languages instead of Kannada?, a thought provoking write up by Shreebheemasena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X